ಧಾರವಾಡ ಕೃಷಿ ಮಹಾವಿದ್ಯಾಲಯವು ಬೆಳೆದು ಸ್ವತಂತ್ರ ವಿಶ್ವವಿದ್ಯಾಲಯವಾಗಿ ನಿಂತಿರಲು ಮಲ್ಲನಗೌಡ. ಪಿ. ಪಾಟೀಲ ರವರೆ ಕಾರಣ : ಡಾ.ವಿಬಿ ಕುಲಿಗೋಡ
Mallana Gowda. P. Patil is the reason why Dharwad Agricultural College has grown and become an inde
ಧಾರವಾಡ 06: ಕೃಷಿ ಮಹಾವಿದ್ಯಾಲಯ ಧಾರವಾಡ ಆವರಣದಲ್ಲಿ ಮಲ್ಲನಗೌಡ.ಪಿ.ಪಾಟೀಲ ರವರ 126ನೇ ಜನ್ಮ ದಿನವನ್ನು ಅವರ ಪುತ್ಥಳಿಗೆ ಪುಷ್ಪಾರ್ಚಣೆ ಮಾಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆವರಣದ ಮುಖ್ಯಸ್ಥರಾದ ಡಾ.ವಿಬಿ ಕುಲಿಗೋಡ ರವರು ಮಾತನಾಡಿ ಮಲ್ಲನಗೌಡ.ಪಿ.ಪಾಟೀಲ ರವರು ಬೆಳಗಾವಿ ಜಿಲ್ಲೆ ಸಂಕೇಶ್ವರದಲ್ಲಿ 1900 ಫೆಬ್ರುವರಿ 4 ರಂದು ಬಡ ಕೃಷಿ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸದ ನಂತರ 1924 ರಲ್ಲಿ ಎಲ್.ಎಲ್.ಬಿ ಪದವಿ ಪಡೆದುಕೊಂಡರು. 1946 ರಲ್ಲಿ ನಡೆದ ಸಾರ್ವರ್ತಿಕ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಚುನಾಯಿತರಾಗಿ ಅಂದಿನ ಸರ್ಕಾರದಲ್ಲಿ ಕೃಷಿ ಮತ್ತು ಅರಣ್ಯ ಖಾತೆ ಸಚಿವರಾದರು.
ಆ ಸಂದರ್ಭದಲ್ಲಿ ಸರ್ಕಾರ ಕರ್ನಾಟಕದಲ್ಲಿ ಕೃಷಿ ಕಾಲೇಜು ಪ್ರಾರಂಭಿಸಲು ತೀರ್ಮಾನಿಸಿದಾಗ ಸ್ವತಃ ಮಲ್ಲನಗೌಡ ಪಿ ಪಾಟೀಲ ರವರೆ ಅದರ ಪ್ರಾರಂಭೋತ್ಸವವನ್ನು ನೆರವೇರಿಸಿದರಲ್ಲದೆ ಅದರ ಕಟ್ಟಡಕ್ಕೆ ಬೇಕಾಗುವ ಸ್ಥಳ ನೀರೀಕ್ಷಣೆಯನ್ನು ಮಾಡಿ ಸ್ವತಃ ಅವರೆ ಅಡಿಗಲ್ಲನ್ನು ಸಹ ಇಟ್ಟಿದ್ದರು. 1954 ರಲ್ಲಿ ಈ ಕಾಲೇಜಿನ ಕಟ್ಟಡವು ನಿರ್ಮಾಣಗೊಂಡಾಗ ಅದರ ಉದ್ಘಾಟಣೆಯನ್ನು ಆಗಿನ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ ಅವರಿಂದ ನೆರವೇರಿಸಿದ್ದರು. ಇಂದು ಧಾರವಾಡ ಕೃಷಿ ಮಹಾವಿದ್ಯಾಲಯವು ಇಷ್ಟೊಂದು ಬೃಹದಾಕಾರವಾಗಿ ಬೆಳೆದು ಸ್ವತಂತ್ರ ವಿಶ್ವವಿದ್ಯಾಲಯವಾಗಿ ನಿಂತಿರಲು ಮಲ್ಲನಗೌಡ ಪಿ ಪಾಟೀಲ ರವರ ಆಸಕ್ತಿ ಮತ್ತು ದೂರ ದೃಷ್ಟಿಯೆ ಕಾರಣವೆಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 