ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ಮಲ್ಲನಗೌಡ ಪಾಟೀಲ, ರಾಜ್ಯ ಪ್ರತಿನಿಧಿಯಾಗಿ ಅರವಿಂದ ಕಟಗಿ ಅವಿರೋಧವಾಗಿ ಆಯ್ಕೆ
ಧಾರವಾಡ 15: ಇಂದು ಧಾರವಾಡ ಜಿಲ್ಲೆಯ ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ ಕುರಿತು ಚುನಾವಣೆಯಲ್ಲಿ ಧಾರವಾಡ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ಮಲ್ಲನಗೌಡ ಪಾಟೀಲ (ನಿಗದಿ), ರಾಜ್ಯ ಪ್ರತಿನಿಧಿಯಾಗಿ ಅರವಿಂದ ಕಟಗಿ (ಕುಂದಗೋಳ) ಅವಿರೋಧವಾಗಿ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿ ಆಯ್ಕೆ ಮಾಡಲಾಯಿತು.
ಇಂದು ಧಾರವಾಡ ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲನಗೌಡ ಪಾಟೀಲ ಹಾಗೂ ರಾಜ್ಯ ಪ್ರತಿನಿಧಿಯಾಗಿ ಅರವಿಂದ ಕಟಗಿ, ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಸಂತೋಷ ಸೂಗಿ, ಕಾರ್ಯದರ್ಶಿ ಸ್ಥಾನಕ್ಕೆ ಲಿಂಗಪ್ಪ (ಮುತ್ತು) ಬಾಡೀನ, ಖಜಾಂಚಿ ಸ್ಥಾನಕ್ಕೆ ಬಸಪ್ಪ ಗುಡೆಣ್ಣವರ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕೃಷಿ ಜಂಟಿ ನಿರ್ದೇಶಕರು ಘೋಷಿಸಿದರು. ಚುನಾವಣಾ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ ಹಾಗೂ ಮುಂತಾದ ನಾಯಕರ ಜೊತೆ ಚರ್ಚಿಸಿ ಅವಿರೋಧ ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಅವಿರೋಧವಾಗಿ ಆಯ್ಕೆಯಾದ ಎಲ್ಲ ಅಧ್ಯಕ್ಷರು, ಪದಾಧಿಕಾರಿಗಳಿಗೆ ಕೋನರಡ್ಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಕೃಷಿ ಸಮಾಜದ ಸದಸ್ಯರುಗಳಾದ ಮಂಜುನಾಥ ಮುರಳಿ, ಗುರುನಾಥಗೌಡ ಮಾದಾಪೂರ, ಸೋಮಲಿಂಗಪ್ಪ ಬಳಿಗೇರಿ, ಹನಮಂತಪ್ಪ ಕಂಬಳಿ, ತಮ್ಮಣ್ಣ ಗುಂಡಗೋವಿ, ಕರಬಸಪ್ಪ ಬೆಟಗೇರಿ, ಮುಕುಂದಪ್ಪ ಅಂಚಟಗೇರಿ, ಎಪಿ ಗುರಿಕಾರ, ಇಮಾಮಸಾಬ ಮಿಶ್ರಿಕೋಟಿ, ಗ್ಯಾರೆಂಟಿ ಸಮಿತಿ ಜಿಲ್ಲಾಧ್ಯಕ್ಷ ಎಸ್.ಆರ್. ಪಾಟೀಲ, ಮುಖಂಡರುಗಳಾದ ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ಲಿಂಗನಗೌಡ ಪಾಟೀಲ, ಮಲಪ್ರಭಾ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ರಾಜಶೇಖರ ಮೆಣಸಿನಕಾಯಿ, ಗದಿಗೆಪ್ಪ ಕಳ್ಳಿಮನಿ, ಮಲ್ಲಿಕಾರ್ಜುನ ಹೊರಕೇರಿ, ಮಂಜುನಾಥ ಮಾಯಣ್ಣವರ, ವರ್ಧಮಾನಗೌಡ ಹಿರೇಗೌಡರ, ಎಂ.ಎಸ್. ರೋಣದ, ಮಾಂತೇಶ ಹಂಚಿನಾಳ, ನಾಗರಾಜ ಗುರಿಕಾರ, ಮಲ್ಲಿಕಾರ್ಜುನ ಬೆಂತೂರ, ಸುರೇಶ ಕರಿಗೌಡ, ಶ್ರೀಕಾಂತ ಗಾಯಕವಾಡ, ಜಗದೀಶ ಉಪ್ಪೀನ, ಪರಮೇಶ ಹೊಸವಾಳ, ಅಡಿವೆಪ್ಪ ಗಾಣಿಗೇರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.