ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಮಾಳವಿಕಾಗ್ನಿಮಿತ್ರ ಉಪನ್ಯಾಸ

Malavikagnimitra Lecture at Kalidasa Educational Institution

ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಮಾಳವಿಕಾಗ್ನಿಮಿತ್ರ ಉಪನ್ಯಾಸ 

    ವಿಜಯಪುರ 08: ಕಾಳಿದಾಸ ಶಿಕ್ಷಣಸಂಸ್ಥೆ ವಿಜಯಪುರ ಇದರ ಆಶ್ರಯದಲ್ಲಿ ನಡೆಸುತ್ತಿರುವ ಕವಿರತ್ನ ಕಾಳಿದಾಸನ ಕಾವ್ಯ ರಸಾಸ್ವಾದ-9 ಮಾಳವಿಕಾಗ್ನಿಮಿತ್ರ ಸಂಸ್ಕೃತ ನಾಟಕ ಕುರಿತು ಉಪನ್ಯಾಸ ಕಾರ್ಯಕ್ರಮವು ಇದೇ ಫೆಬ್ರುವರಿ 10 ರಂದು ಶ್ರೀ ಕಾಳಿದಾಸ ಶಿಕ್ಷಣಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುಭಾಸ ಎಸ್‌. ಜಿದ್ದಿ ಹಾಗೂ ಪ್ರಾಚಾರ್ಯ ಕೆ.ಆರ್‌.ಜಾಧವ ಅವರು ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

  ಕವಿರತ್ನ ಕಾಳಿದಾಸನ ಕಾವ್ಯ ರಸಾಸ್ವಾದ-9 ಮಾಳವಿಕಾಗ್ನಿಮಿತ್ರ ಸಂಸ್ಕೃತ ನಾಟಕ ಕುರಿತು ಉಪನ್ಯಾಸವನ್ನು ಸಿಕ್ಯಾಬ ಮಹಿಳಾ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಡಾ. ಶ್ರೀಕೃಷ್ಣ ಕಾಖಂಡಕಿ ಅವರು ನಡೆಸಿಕೊಡಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಧೋಳದ ರೂಗಿ ಅಡವಿ ಸಿದ್ದೇಶ್ವರ ಆಶ್ರಮದ ಪೂಜ್ಯ ನಿತ್ಯಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ.   

  ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷರಾದ ಅಶೋಕ ಎಸ್‌. ಜಿದ್ದಿ, ವ್ಹಿ. ಡಿ. ವಸ್ತ್ರದ, ಡಾ.ಕಂಠೀರವ ಕುಲ್ಲಳ್ಳಿ ಸಂಸ್ಥೆಯ ಆಡಳಿತಾಧಿಕಾರಿ ಆರ್‌.ಎಸ್‌.ವಾಡೇದ, ವಿ. ಎಸ್‌. ಶಿರೋಳ, ಬಿ.ಟಿ. ಜಿದ್ದಿ, ಎಫ್‌. ಎಚ್‌.ಮ್ಯಾಗೋಟಿ ಹಾಗೂ ಐ.ಎನ್‌.ಕಂಬಾರ ಅವರು ಭಾಗವಹಿಸಲಿದ್ದಾರೆ.  

  ಫೆಬ್ರುವರಿ-10 ರಂದು ಮಧ್ಯಾನ್ಹ 3 ಗಂಟೆಗೆ ಕುಬಕಡ್ಡಿ ಸಮರ್ಥ ಸದ್ಗುರು ರಂಗರಾವ ಮಹಾರಾಜರ ಸುವರ್ಣ ಪುಣ್ಯಸ್ಮರಣೆ ಹಾಗೂ ವಾರ್ಕರಿಯವರಿಂದ ಭಜನೆ ನಡೆಯಲಿದ್ದು, ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದ್ದು, ಇಂಚಗೇರಿ ಸಂಪ್ರದಾಯ ವಿಷಯದ ಮೇಲೆ ನಿವೃತ್ತ ಉಪನಿಬಂಧಕರಾದ ಬಿ.ಆರ್‌.ಬನಸೋಡೆ ಹಾಗೂ ಕುಬಕಡ್ಡಿ ಸಮರ್ಥ ಸದ್ಗುರು ರಂಗರಾವ ಮಹಾರಾಜರ ಸಂಪ್ರದಾಯ ವಿಷಯದ ಮೇಲೆ ಶಂಕರಣ್ಣ ಅನಂತಪುರ, ನಿವೃತ್ತ ಎ.ಇ.ಇ. ಉದಯ ಚಟ್ಟರಕಿ ಅವರುಗಳು ಉಪನ್ಯಾಸ ನೀಡಲಿದ್ದಾರೆ.   

  ಕಾರ್ಯಕ್ರಮದಲ್ಲಿ ಸುಭಾಷ ಯಾದವಾಡ, ಸಂಸ್ಥೆಯ ಅಧ್ಯಕ್ಷರಾದ ಅಶೋಕ ಎಸ್‌. ಜಿದ್ದಿ, ವ್ಹಿ. ಡಿ. ವಸ್ತ್ರದ, ಡಾ.ಕಂಠೀರವ ಕುಲ್ಲಳ್ಳಿ ಸಂಸ್ಥೆಯ ಆಡಳಿತಾಧಿಕಾರಿ ಆರ್‌. ಎಸ್‌.ವಾಡೇದ, ವಿ. ಎಸ್‌. ಶಿರೋಳ, ಬಿ. ಟಿ. ಜಿದ್ದಿ, ಎಫ್‌. ಎಚ್‌. ಮ್ಯಾಗೋಟಿ, ಐ.ಎನ್‌.ಕಂಬಾರ ಹಾಗೂ ಎಸ್‌. ಪಿ .ಬಿರಾದಾರ ಅವರುಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುಭಾಸ ಎಸ್ ಜಿದ್ದಿ ಹಾಗೂ ಪ್ರಾಚಾರ್ಯ ಕೆ.ಆರ್‌.ಜಾಧವ ಅವರು ಸಂಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.