ತೆರಿಗೆ ವಸೂಲಾತಿ ಅಭಿಯಾನ ಯಶಸ್ವಿಗೊಳಿಸಿ: ಅಡವಿಮಠ

Make tax collection campaign a success: Advimath

ತೆರಿಗೆ ವಸೂಲಾತಿ ಅಭಿಯಾನ ಯಶಸ್ವಿಗೊಳಿಸಿ: ಅಡವಿಮಠ  

ಕಾಗವಾಡ 04:  ದಿ. 5 ಬುಧವಾರದಂದು ನಡೆಯುವ ಶೇ. 100 ರಷ್ಟು ತೆರಿಗೆ ವಸೂಲಾತಿ ಅಭಿಯಾನದಲ್ಲಿ ವಸೂಲಾತಿ ಯಶಸ್ವಿಗೊಳಿಸುವಂತೆ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ ಹೇಳಿದರು.   ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ 2023-24ನೇ ಸಾಲಿನ ಜಮಾಬಂದಿ ಹಾಗೂ ಪ್ರಗತಿ ಪರೀಶೀಲನಾ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.  15 ನೇ ಹಣಕಾಸು ಯೋಜನೆ ಹಾಗೂ ನರೇಗಾ ಯೋಜನೆ ನಿಗದಿತ ಪ್ರಗತಿ ಸಾಧಿಸುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಅನುಷ್ಠಾನಕ್ಕೆ ಇಲಾಖೆ ಪ್ರಗತಿ ಪರೀಶೀಲಿಸಿದರು.   

ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಸಹಾಯಕ ನಿರ್ದೇಶಕ ಎ.ಡಿ. ಅನ್ಸಾರಿ, ಸಿಡಿಪಿಓ.ಸಂಜೀವ ಸದಲಗಿ, ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗಂಗಾಧರ್, ವೆಂಕಟೇಶ್ ಕುಲಕರ್ಣಿ, ಬಸವರಾಜ್ ಯಾದವಾಡೆ, ತೋಟಗಾರಿಕೆ ಅಧಿಕಾರಿ ಚೇತನ ದೇವಮೊರೆ, ಕಾಂತಿನಾಥ ಬಿರಾದಾರ, ಜಾವಿದ ಮುಜಾವರ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.