ಸಾಲದ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿ: ಪಾಟೀಲ

ಸಾಲದ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿ: ಪಾಟೀಲ Make good use of loans and become financially strong: Patil

ಸಾಲದ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿ: ಪಾಟೀಲ 

ತಾಳಿಕೋಟಿ 02: ಗ್ರಾಹಕರು ಸಹಕಾರಿ ಬ್ಯಾಂಕ್ ಮೂಲಕ ಪಡೆದ ಸಾಲದ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢ ರಾಗಬೇಕು. ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವಂತ ಕಾರ್ಯ ಮಾಡಿದರೆ ಬ್ಯಾಂಕ್ ಉನ್ನತ ಸ್ಥಾನಕ್ಕೇರಿ ಇತರರಿಗೂ ಸಾಲ ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್‌.ಪಾಟೀಲ(ಯಾಳಗಿ) ಹೇಳಿದರು.  

ಶುಕ್ರವಾರ ಪಟ್ಟಣದ ಪ್ರತಿಷ್ಠಿತ ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್ ನಿಯಮಿತ, ಇದರ 66ನೇ ವರ್ಷದ ಸರ್ವಸಾಧಾರಣ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಬ್ಯಾಂಕುಗಳು ಷೇರುದಾರರ ಪರಸ್ಪರ ಸಹಕಾರ ಹಾಗೂ ವಿಶ್ವಾಸದೊಂದಿಗೆ ನಡೆಯುತ್ತವೆ. ಈ ಬ್ಯಾಂಕನ್ನು ಕಟ್ಟಿ ಬೆಳೆಸುವಲ್ಲಿ ಇದರ ಸಂಸ್ಥಾಪಕ ಸದಸ್ಯರು ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ ಅವರ ತ್ಯಾಗದ ಫಲವಾಗಿ ಇಂದು ಈ ಬ್ಯಾಂಕು ಹೆಮ್ಮರವಾಗಿ ಬೆಳೆದಿದೆ ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಕಾಶಿನಾಥ ಸಜ್ಜನ ಅವರು ಮಾತನಾಡಿ ನಿಮ್ಮೆಲ್ಲರ ಸಹಕಾರ ದಿಂದಾಗಿ ಈ ವರ್ಷದಲ್ಲಿ ಬ್ಯಾಂಕು 142.30 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ, ದುಡಿಯುವ ಬಂಡವಾಳ ಹಾಗೂ ಷೇರುದಾರರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಬ್ಯಾಂಕಿನ ಮೂರೂ ಶಾಖೆಗಳು ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ, ನೀವು ಸಭೆಯ ಮುಂದೆ ತಂದ ಸಲಹೆ ಸೂಚನೆಗಳನ್ನು ಆಡಳಿತ ಮಂಡಳಿಗೆ ಸಭೆಯಲ್ಲಿ ಇಟ್ಟು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.ಷೇರುದಾರರಾದ ಎಸ್‌.ಬಿ. ಕಟ್ಟಿಮನಿ, ವಿಜಯಸಿಂಗ್ ಹಜೇರಿ, ಜಿ.ಜಿ.ಮದರಕಲ್ಲ, ಪ್ರಕಾಶ ಹಜೇರಿ, ಸಿರಸಕುಮಾರ ಹಜೇರಿ, ಪರಶುರಾಮ ತಂಗಡಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಿ ಬಿ.ಕೆ.ಮಣೂರ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮಕ್ಕೂ ಮುನ್ನ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.  

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕವನ್ನು ಪಡೆದ ಬ್ಯಾಂಕಿನ ಶೇರುದಾರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾರಂಭದ ಸಾನಿಧ್ಯವನ್ನು ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಪರಮಪೂಜ್ಯ ಸಿದ್ದಲಿಂಗ ದೇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಿ.ಎಸ್‌. ಯಾಳಗಿ, ಆಡಳಿತ ಮಂಡಳಿ ನಿರ್ದೇಶಕರಾದ ಐ.ಬಿ.ಬಿಳೆಭಾವಿ, ಎಂ.ಎಸ್‌. ಸರಶೆಟ್ಟಿ, ಡಿ.ಎಸ್‌. ಹೆಬಸೂರ, ಎಸ್‌.ಸಿ.ಪಾಟೀಲ,ಎ.ವಿ.ಹಜೇರಿ, ಡಿ.ಕೆ.ಪಾಟೀಲ, ಪಿ.ವಿ.ಹಜೇರಿ, ಜಿ.ಬಿ.ಕೊಡಗಾನೂರ, ಎಸ್‌.ವಿ.ಬಡದಾಳಿ, ಆರಿ​‍್ಬ.ಕಟ್ಟಿಮನಿ, ಎಸ್‌.ವಾಯ್‌. ಬರದೇನಾಳ, ವೃತ್ತಿ ನಿರ್ದೇಶಕರಾದ ಎಂಬಿ ಕೊಣ್ಣೂರ, ಆರ್‌.ಎಸ್‌. ನೂಲಿಕರ, ಮಿಣಜಗಿ ಶಾಖೆ ಸಲಹಾ ಸಮಿತಿ ಸದಸ್ಯರಾದ ಜಿ.ಕೆ.ಬಿರಾದಾರ,ಬಿ. ಎಂ.ಬಿರಾದಾರ, ಐ.ಬಿ.ಬಿರಾದಾರ, ಎಂ. ಎಸ್‌.ಮ್ಯಾಗೇರಿ, ಬಿ.ಎಚ್‌.ಬಾಗೇವಾಡಿ, ಬಿ.ಎಸ್‌. ಪಾಟೀಲ, ಬಲಶೆಟ್ಟಿಹಾಳ ಶಾಖೆ ಸಲಹಾ ಸಮಿತಿ ಸದಸ್ಯರಾದ ಜಿ.ಎಸ್‌.ಪಂಚಗಲ್, ಎಂ.ಎಸ್‌. ಮುರಾಳ,ಎನ್‌.ಎಸ್‌.ಜಹಗೀರದಾರ, ಮುತ್ತಣ್ಣ ಜಡಜಲಿ, ಸಂಗಪ್ಪ ಬಡಿಗೇರ, ಶಾಂತಗೌಡ ಗುಳಬಾಳ, ಷೇರುದಾರರು ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಗ್ರಾಹಕರು ಇದ್ದರು.