ಲೋಕದರ್ಶನ ವರದಿ
ಗದಗ 12: ಯುವಕರು ಸಂಘಟಿತರಾಗಿ ಮಾಡುವ ಪ್ರತಿಯೊಂದು ಕಾರ್ಯಗಳು ಸಾಧನೆಗಳು ಆಗುತ್ತವೆ ಎನ್ನುವುದಕ್ಕೆ ಈ ಕಾರ್ಯಕ್ರಮವನ್ನು ಸಾಕ್ಷಿಯಾಗಿದೆ ಎಂದು ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬೆಳದಡಿ ಅವರು ಹೇಳಿದರು.
ಗಂಗಾಪುರ ಪೇಟೆಯಲ್ಲಿರುವ ಬನ್ನಿ ಮಹಾಂಕಾಳಿ ಯುವಕ ಸಂಘದ ವತಿಯಿಂದ ಜರುಗಿದ ಬನ್ನಿ ಮಹಾಂಕಾಳಿ ದೇವಿಯ ಮಹಾಪೂಜೆ, ಅನ್ನ ಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಪ್ರತಿವರ್ಷ ವಿಶೇಷ ಹಾಗೂ ವಿನೂತನವಾಗಿ ಎಲ್ಲ ಸಮುದಾಯದವರು ಒಗ್ಗಟ್ಟಾಗಿ ಬನ್ನಿ ಮಹಾಂಕಾಳಿ ವಿಶೇಷ ಪೂಜೆ ಹಮ್ಮಿಕೊಳ್ಳುತ್ತ ಬಂದಿರುವುದು ಸಂತಸ ತಂದಿದೆ. ಇದೇ ರೀತಿ ಎಲ್ಲಾ ಸಮುದಾಯದವರು ಒಗ್ಗೂಡಿಕೊಂಡು ಕೋಮು ಸೌಹಾರ್ದತೆಯೊಂದಿಗೆ ಎಲ್ಲರೂ ಒಗ್ಗಟ್ಟಾಗಿರೋಣ ಎಂದು ಹೇಳಿದರು.
ಓಣಿಯ ಹಿರಿಯರಾದ ಬಸವರಾಜ ಕವಳಿಕಾಯಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಯುವಕರು ಮಾಡಿರುವ ಕಾರ್ಯ ನಿಜಕ್ಕೂ ಸಂತಸ ತಂದಿದೆ. ಯುವ ಸಮೂಹ ದುಷ್ಚಟಕ್ಕೆ ಬಲಿಯಾಗುತ್ತಿರುವ ಈ ಸಂದರ್ಭದಲ್ಲಿ ಧಾಮರ್ಿಕ ಕಾರ್ಯಕ್ರಮದಲ್ಲಿ ಎಲ್ಲರೂ ಕೂಡಿಕೊಂಡು ಧಾಮರ್ಿಕ ಭಾವನೆ ಮೂಡಿಸಿರುವುದು ಶ್ಲಾಘನೀಯವಾಗಿದೆ. ಇದೇ ರೀತಿ ಯುವಕರ ಕಾರ್ಯಗಳು ಮುಂದುವರೆಯಲಿ ಎಂದು ಶುಭ ಹಾರೈಸಿದರು. ಸನ್ಮಾನಿತರಾಗಿ ಯುವ ಮುಖಂಡರಾದ ಅಬ್ದುಲ್ಮುನಾಫ್ ಮುಲ್ಲಾ ಹಾಗೂ ದಾನಿಗಳಾದ ಸಂಗಮೇಶ್ವರ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆ ಸಹಾಯ, ಸಹಕಾರ ನೀಡಿದ ದಾನಿಗಳಾದ ಬಸವರಾಜ ಬೆಳದಡಿ, ಯಲ್ಲಪ್ಪ ಬಾರಕೇರ, ಬಸವರಾಜ ಕವಳಿಕಾಯಿ, ಗಫಾರಸಾಬ್ ಉಮಚಗಿ, ರಾಮಣ್ಣ ಶಿದ್ಲಿಂಗ, ಅಬ್ದುಲ್ಮುನಾಫ್ ಮುಲ್ಲಾ, ಶೇಖಪ್ಪ ಹುಳ್ಳಿ, ಸಂಗಮೇಶ ಕವಳಿಕಾಯಿ, ಸುರೇಶ ಹಾವನೂರ ಅವರನ್ನು ಸನ್ಮಾನಿಸಲಾಯಿತು. ಬನ್ನಿ ಮಹಾಂಕಾಳಿ ವಿಶೇಷ ಪೂಜೆ ಅಂಗವಾಗಿ ಹಮ್ಮಿಕೊಂಡ ರಂಗೋಲಿ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮಲ್ಲೇಶ್ ಬಿಂಗಿ, ಅಧ್ಯಕ್ಷ ಶಬ್ಬೀರ ಉಮಚಗಿ, ಉಪಾಧ್ಯಕ್ಷ ಮಲ್ಲೇಶ ಬಾರಕೇರ, ಸ್ವಾಮಿ ಬಾರಕೇರ, ಗೌರವ ಕಾರ್ಯದಶರ್ಿ ಮುತ್ತು ಶಿರೂರ, ಪ್ರವೀಣ ಕಣವಿ, ನಿಂಗಪ್ಪ ಮಡಿವಾಳರ,ಶಿವಪ್ಪ ಬಾದರಲಿ, ಪ್ರವೀಣ ವಾಳಿವೇಕರ, ಹನುಮಂತ ಬಾರಕೇರ, ಸುನಿಲ್ ಕಬಾಡಿ,ಇಮ್ಮು ಉಮಚಗಿ, ಪ್ರಕಾಶ ಕೆರೆಯವರ, ನರೇಶ ಮಡಿವಾಳರ, ರಾಕೇಶ ಮಡಿವಾಳರ, ಮಂಜುನಾಥ ಗಡಾದ, ಮಹೆಬೂಬಸಾಬ ಉಮಚಗಿ, ನಿತೇಶ ಮಡಿವಾಳರ, ಹರೀಶ ಬಡಿಗೇರ, ರಾಜು ಮಡಿವಾಳರ, ವಿನಾಯಕ ಕ್ಷೀರಸಾಗರ, ಕಿರಣ ಕಬಾಡಿ, ಅಕ್ಷಯ ಬಳ್ಳೋಳ್ಳಿ, ಆನಂದ ಜಡಿ, ಪ್ರಕಾಶ ಶಿರೂರ, ಮುತ್ತು ಜಡಿ, ಆಕಾಶ ಬಳ್ಳೋಳ್ಳಿ, ಶಿವರಾಜ ನರೇಗಲ್ ಹಾಗೂ ಯುವಮುಖಂಡರಾದ ಮಂಜುನಾಥ ನರೇಗಲ್, ಬಸವರಾಜ ಜಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವೆಂಕಟೇಶ ಇಮರಾಪೂರ ಅವರು ಕಾರ್ಯಕ್ರಮ ನಿರೂಪಿಸಿದರು.