ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ: ಜಂಗಲಿ

ಲೋಕದರ್ಶನ ವರದಿ

ಶೇಡಬಾಳ 17: ಪರಿಸರದಲ್ಲಿ ಸಮತೋಲನ ಕಾಪಾಡುವಗೋಸ್ಕರ ಮನೆಗೊಂದರಂತೆ ಸಸಿ ನೆಡುವದರ ಜತೆಗೆ ಸುತ್ತಮುತ್ತಲು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಥಣಿ ತಾಲೂಕಿನ ಶಿರಗುಪ್ಪಿ ವಲಯದ ಮೇಲ್ವಿಚಾರಕರಾದ ಫಕ್ಕೀರೇಶ ಜಂಗಲಿ ಕರೆ ನೀಡಿದರು.

ಅವರು ರವಿವಾರ ದಿ. 16 ರಂದು ಶಿರಗುಪ್ಪಿ ವಲಯದಲ್ಲಿ ಬರುವ ಕುಸನಾಳ ಕಾರ್ಯ ಕ್ಷೇತ್ರದ ಮೋಳವಾಡ ಗ್ರಾಮದಲ್ಲಿನ ಸಕರ್ಾರಿ ಮಾಧ್ಯಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಮಹತ್ವ ಕುರಿತು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪರಿಸರವು ವಾಯು ಮಾಲಿನ್ಯ, ಶಬ್ಧ ಮಾಲಿನ್ಯ, ಜಲ ಮಾಲಿನ್ಯದಿಂದ ಹದಗೆಡುತ್ತಿದೆ. ಇದರಿಂದ ಪ್ರತಿಯೊಬ್ಬರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಪರಿಸರದಲ್ಲಿ ಸಮತೋಲನ ಕಾಪಾಡುವುದು ಅತ್ಯವಶ್ಯವಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಧ್ಯಾಪಕರಾದ ಮಲ್ಲಪ್ಪ ಐನಾಪೂರ ಪರಿಸರ ಕುರಿತು ವಿವರವಾಗಿ ಮಾತನಾಡಿದರು. 

ಶಾಲಾ ಮಕ್ಕಳಿಗೆ ಪರಿಸರ ಮಹತ್ವ ಕುರಿತು ಪ್ರಬಂಧ ಹಾಗೂ ಕವನ ಸ್ಪಧರ್ೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಿದರು.

ಈ ಸಮಯದಲ್ಲಿ ದೈಹಿಕ ಶಿಕ್ಷಕರಾದ ಕಮತೆ, ಒಕ್ಕೂಟದ ಉಪಾಧ್ಯಕ್ಷರಾದ ಶೋಭಾ ಚೌಗಲೆ,ಕುಸನಾಳ ಸೇವಾ ಪ್ರತಿನಿಧಿ ಸಾರಿಕಾ ಪೂಜಾರಿ ಸೇರಿದಂತೆ ಶಾಲಾ ವಿದ್ಯಾಥರ್ಿ ವಿದ್ಯಾಥರ್ಿನಿಯರು ಶಿಕ್ಷಕವೃಂದ ಇದ್ದರು. ಸಾರಿಕಾ ಪೂಜಾರಿ ಸ್ವಾಗತಿಸಿದರು. ಕಮತೆ ವಂದಿಸಿದರು.