ಬೆಳಗಾವಿ: ಸುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ

ಲೋಕದರ್ಶನ ವರದಿ

ಬೆಳಗಾವಿ 20: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಜಿಲ್ಲಾ ಪಂಚಾಯತ್ ಬೆಳಗಾವಿ ಹಾಗೂ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ ಬೆಳಾಗಾವಿ ಮತ್ತು ಗ್ರಾಮ ಪಂಚಾಯತಿ ಮುದೇನೂರು ಸಹಯೋಗದಲ್ಲಿ, ರಾಮದುರ್ಗ ತಾಲೂಕಿನ ಮುದೇನೂರು ಶಾಲೆಯ ವಿದ್ಯಾಥರ್ಿಗಳಿಗಾಗಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಕುರಿತು ಚಚರ್ಾ ಸ್ಪಧರ್ೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರ ಶ್ರೀನಿವಾಸ ವಿಶ್ವಕರ್ಮ ಮಾತನಾಡಿ, ಮಕ್ಕಳು ಕುಡಿಯುವ ನೀರಿನ ಮಹತ್ವ ಜಲ ಮೂಲಗಳ ರಕ್ಷಣೆ, ಸುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಈ ಕುರಿತು ಇತರರಲ್ಲಿ ಜಾಗೃತಿ ಮೂಡಿಸಬೇಕು. ಹೀಗಾದಾಗ ಮಾತ್ರ ಸರಕಾರಿ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದರು. 

ಇಂದು ಜಲ ಮೂಲ ಸಂರಕ್ಷಣೆ ಕೆಲಸ ಆಗಬೇಕಿದೆ. ಇದನ್ನು ನಾವು ಸರಂಕ್ಷಣೆ ಮಾಡದಿದ್ದರೆ ಮುಂದೆ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ತಾಲೂಕು ಸಂಯೋಜಕ ಬಿ.ಎಚ. ಬನ್ನೆನ್ನವರ, ಮುಖೋಪಾದ್ಯಾಯ ಆ..ಪಿ. ಪತ್ತಾರ, ಶಿಕ್ಷಕರಾದ ಎಂ ಜಿ ಗಣಾಚಾರಿ, ಎಸ್ ಬಿ ಹಕ್ಕಿ, ಎಫ್ .ಎಚ್. ಡಂಗಿ ಬಿ ಎಸ್ ಸಣ್ಣಪ್ಪ ನವರ್ ಭಾಗವಹಿಸಿದ್ದರು. 

ವಿಜೇತ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಕುಡಿಯುವ ನೀರಿನ ಮಹತ್ವ, ಜಲ ಮೂಲಗಳ ರಕ್ಷಣ, ಶೌಚಾಲಯಗಳ ಮಹತ್ವ, ಘನತ್ಯಾಜ್ಯ ವಿಂಗಡಣೆ ಹಾಗು ವಿಲೇವಾರಿ ಕುರಿತು ಚಚರ್ೆ ಸಧರ್ೆ ಹಮ್ಮಿಕೊಳ್ಳಲಾಗಿತ್ತು. ಎಸ್ ಆರ್ ಕುಟಕನಕೇರಿ ಸ್ವಾಗತಿಸಿದರು. ಬಿ.ಬಿ. ಹಂಗರಗಿ ನಿರೂಪಿಸಿದರು, ಎಸ್. ವಿ. ಕಲ್ಯಾಣಶೆಟ್ಟಿ ವಂದಿಸಿದರು ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ ಚಂದ್ರಶೇಖರ ಅಂಗಡಿ , ಪ್ರವೀಣ ಕೋತಿನ , ಎಸ್ಡಿಎಂಸಿ ಸದಸ್ಯರು ಇದ್ದರು.