ಮಹಿಳಾ ಗ್ರಹಉದ್ಯೋಗ ಲಿಜ್ಜತ್ ಪಾಪಡ್ ತಯಾರಿಕೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನಾಂದಿ : ದ್ರಾಕ್ಷಾಯಣಿ ಹಾಸಲಕರ
ಬೆಟಗೇರಿ 15:- ಅವಳಿ ನಗರದಲ್ಲಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ತಮ್ಮದೇಯಾದ ಸ್ವ ಉದ್ಯೋಗವನ್ನು ಕೈಗೊಳ್ಳಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಸನ್ಮಾನ್ಯ ಕಾನೂನು ಮತ್ತು ಸಂಸದೀಯ ವ್ಯೆವಹಾರಗಳ ಸಚಿವರು ಹಾಗೂ ಪ್ರವಾಸೋದ್ಯಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ!! ಎಚ್ ಕೆ ಪಾಟೀಲ್ ಸಾಹೇಬರ, ಮತ್ತು ಮಾಜೀ ಶಾಸಕರಾದ ಸನ್ಮಾನ್ಯ ಶ್ರೀ ಡಿ ಆರ್ ಪಾಟೀಲ್ ಸಾಹೇಬರ ಅವಿರತ ಪರಿಶ್ರಮದ ದ್ಯೋತಕವಾಗಿ ಕಳೆದ ಮೂರು ದಶಕಗಳಿಂದ ಜಾಗತಿಕವಾಗಿ ಮಹಿಳೆಯರ ಸ್ವ ಉದ್ಯೋಗದಲ್ಲಿ ಕ್ರಾಂತಿಕಾರಿ ಉನ್ನತಿಯನ್ನೋದಗಿಸಿದ ಶ್ರೀ ಮಹಿಳಾ ಗ್ರಹ ಉದ್ಯೋಗ ಲಿಜ್ಜತ ಪಾಪಡ್ ಉತ್ಪಾದನಾ ಘಟಕವನ್ನು ಗದಗ ಜಿಲ್ಲೆಯ ಮಹಿಳೆಯರಿಗೆ ಪರಿಚಯಿಸಿದ ಪ್ರಯುಕ್ತ ಇತ್ತೀಚಿಗಷ್ಟೇ ವಿಶೇಷ ತರಬೇತಿಯನ್ನು ಪಡೆದುಕೊಂಡು ಸ್ವ ಉದ್ಯೋಗವನ್ನು ಸಮಸ್ತ ಮಹಿಳೆಯರು ಪ್ರಾರಂಭಿಸಿರುವರು. ಇದೊಂದು ಕ್ರಾಂತಿಕಾರಿ ಬದಲಾವಣೆಯ ಪರ್ವವಾಗಿದ್ದು ಗದಗ ಬೆಟಗೇರಿ ಅವಳಿ ನಗರದ ಮಹಿಳೆಯರ ಆರ್ಥಿಕಾಭಿವೃದ್ಧಿಗೆ ನಾಂದಿಯಾಗಿರುತ್ತದೆ ಎಂದು ಮಹಿಳಾ ಮುಖಂಡರಾದ ಶ್ರೀಮತಿ ದ್ರಾಕ್ಷಾಯಣಿ ಹಾಸಲಕರ ನುಡಿದರು.
ಮಹಿಳೆಯರ ಸ್ವ ಉದ್ಯೋಗದ ಪ್ರಾರಂಬಿಕ ಹಂತವಾಗಿ ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಬೆಟಗೇರಿಯ 5 ನೇ ವಾರ್ಡಿನ ನರಸಾಪೂರ ಕೆ ಎಚ್ ಡಿ ಸಿ ನೇಕಾರ ಕಾಲನಿ ಬಡಾವಣೆಯ ಮಹಿಳಾ ಮುಖಂಡರಾದ ಶ್ರೀಮತಿ ದ್ರಾಕ್ಷಾಯಣಿ ಹಾಸಲಕರ ನೇತ್ರತ್ವದಲ್ಲಿ ಹಲವಾರು ಮಹಿಳೆಯರು ಪಾಪಡ್ ತಯಾರಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಸ್ವ ಉದ್ಯೋಗದಲ್ಲಿ ಶುಭಾರಂಭ ಮಾಡಿದರು.
ಈ ಸಂಧರ್ಭದಲ್ಲಿ ಬಡಾವಣೆಯ ಮಹಿಳಾ ಮುಖಂಡರಾದ ಶ್ರೀಮತಿ ದ್ರಾಕ್ಷಾಯಣಿ ಹಾಸಲಕರ, ಸುಧಾ ಬುದಾರಪೂರ, ದೇವಕ್ಕಾ ಬಂಡಾ, ಅಶ್ವಿನಿ ಮಾಳೋದೆ ಸೋನು ಬಸ್ಮೆ ಮಾಲಾ ಬದಿ, ಅಂಜಲಿ, ಉಮಾ, ಲಲಿತಾ ಬಂಡಾ,ಶ್ರೀಮತಿ ಕೆಂಚಗುಂಡಿ ಮಂಜುಳಾ ಬಗಾಡೆ, ಸುನಂದಾ, ಲಕ್ಷ್ಮಿ ಬಾರಾಟಕ್ಕೆ ಹಾಗೂ ಸಮಸ್ತ ನೇಕಾರ ಕಾಲನಿಯ ಕೆ ಎಚ್ ಡಿ ಸಿ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.