ಸಿದ್ಧಗಂಗಾ ರತ್ನ ಪ್ರಶಸ್ತಿಗೆ ಮಹೇಶ ಶಿವಶರಣ ಭಾಜನ
ವಿಜಯಪುರ 26: ವಿಜಯಪುರ ಜಿಲ್ಲೆಯ ನಗರ ನಿವಾಸಿ ಕಲಾವಿದ ಮಹೇಶ ಶಿವಶರಣ ಅವರು ಸಿದ್ಧಗಂಗಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಹೇಶ ಶಿವಶರಣ ಅವರು ಕಲಾ ಕ್ಷೇತ್ರದಲ್ಲಿ ನಿಸ್ವಾರ್ಥ ಮತ್ತು ಪ್ರಾಮಾಣಿಕವಾಗಿ ಶಕ್ತಿಮೀರಿ ಸಲ್ಲಿಸಿದ ಸಾಧನೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದೆ.
ಅನಾಥ, ನಿರ್ಗತಿಕ ಹಾಗೂ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಶಿವಕುಮಾರ ಸ್ವಾಮೀಜಿ ಗಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ) ಸಿದ್ಧಗಂಗಾ ಕಿರಿಯ ಪ್ರಾಥಮಿಕ ಶಾಲೆ ತುರಕನಗೇರಿ ತಾಽ ತಾಳಿಕೋಟಿ ಜಿ. ವಿಜಯಪುರ ವತಿಯಿಂದ ತ್ರಿವಿದ ದಾಸೋಹಿ ಡಾ. ಶಿವಕುಮಾರ ಮಹಾಸ್ವಾಮೀಜಿಯವರ 118 ನೇ ಜಯಂತ್ಯೋತ್ಸವ ಹಾಗೂ ಸಿದ್ಧಗಂಗಾ ಕಿರಿಯ ಪ್ರಾಥಮಿಕ ಶಾಲೆಯ 7ನೇ ವಾರ್ಷಿಕ ಸ್ನೇಹ ಸಮ್ಮೇಳನ ನಿಮಿತ್ಯ “ಸಿದ್ಧಗಂಗಾ ರತ್ನ ಪ್ರಶಸ್ತಿ”ಯನ್ನು ಕಲಾವಿದ ಮಹೇಶ ಶಿವಶರಣ ಅವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಂಶೂದ್ದೀನ ಇನಾಂದಾರ ಹಾಗೂ ಬಸವರಾಜ ಹೂಗಾರ ಸೇರಿದಂತೆ ರಜಾಕ ಇನಾಮದಾರ, ಅಲ್ತಾಪ ಇನಾಮದಾರ, ವಿರೇಶ ಹಿರೇಮಠ, ಅಮರೇಶ ಬಸವಪಟ್ಟಣ, ಮಂಜುನಾಥ ಮೋಪಗಾರ, ಪ್ರವೀಣ ಮೋಪಗಾರ ಸೇರಿದಂತೆ ಮುಂತಾದವರು ಇದ್ದರು.
ಮಹೇಶ ಶಿವಶರಣ ಸಿದ್ಧಗಂಗಾ ರತ್ನ ಪ್ರಶಸ್ತಿ ಪಡೆದ ಹಿನ್ನೆಲೆ ಸ್ನೇಹಿತರು, ಹಿತೈಷಿಗಳು, ಕಲಾಭಿಮಾನಿಗಳು, ಕುಟಂಬದ ಸದಸ್ಯರು ಸೇರಿದಂತೆ ಅಪಾರ ಬಂಧು-ಬಳಗದವರು ಶುಭಕೋರಿ ಹಾರೈಸಿದ್ದಾರೆ.