ಪ್ರಥಮ ಜಿಲ್ಲಾ ಸಿರಿಗನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಹೇಶಬಾಬು ಸುರ್ವೆ ಆಯ್ಕೆ

ಲೋಕದರ್ಶನ ವರದಿ

ಕೊಪ್ಪಳ 05: ನಗರದ ಪದಕಿ ಲೇಔಟಿನ ಸಿರಿಗನ್ನಡ ವೇದಿಕೆಯ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಸರ್ವಾನುಮತದಿಂದ ಸಾಂಸ್ಕೃತಿಕ ರಾಯಭಾರಿ ಮಹೇಶಬಾಬು ಸುರ್ವೆರವರನ್ನು  ಪ್ರಥಮ ಬಾರಿಗೆ ಜರುಗುವ ಕೊಪ್ಪಳ ಜಿಲ್ಲಾ ಸಿರಿಗನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. 

ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯ ಕಾರ್ಯಕಾರಿ ಸಭೆಯಲ್ಲಿ ಚಚರ್ಿಸಿ, ನಂತರ ಡಾ. ಮಹಾತೇಂಶ ಮಲ್ಲನಗೌಡರ್ ಸೂಚಿಸಿದರು. ನಾಗರಾಜ ಅಂಗಡಿ ಅನೂಮೊದಿಸಿದರು. ಸಭೆಯಲ್ಲಿ ಸರ್ವ ಸದಸ್ಯರು ಸವರ್ಾನುಮತದಿಂದ  ಒಪ್ಪಿಗೆ ಸೂಚಿಸಿದರು.

ಸಿರಿಗನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕರಾದ ಮಹೇಶಬಾಬು ಸುರ್ವೆರವರ ಅಧ್ಯಕ್ಷತೆಯಲ್ಲಿ ಇದೇ ಅಗಸ್ಟ 25 ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಅಂದು ಸಾಹಿತ್ಯ, ಸಾಂಸ್ಕೃತಿಕ, ಜಾನಪದ ವೈಶಿಷ್ಠೆತೆಗಳು ಜರುಗಲಿವೆ. ಜೊತೆಗೆ ಉಪನ್ಯಾಸ, ಲೇಖರ ಕೃತಿಗಳಿಗೆ ಸಾಹಿತ್ಯ ಪ್ರಶಸ್ತಿ, ರಂಗ ಸನ್ಮಾನ, ಸಿರಿಗನ್ನಡ ಕವಿಗೊಷ್ಠಿ, ಪ್ರತಿಭಾ ಪುರಸ್ಕಾರ, ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಧಾನ ಕಾರ್ಯದಶರ್ಿ ಮಂಜುನಾಥ ಚಿತ್ರಗಾರ ತಿಳಿಸಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಜಿ.ಎಸ್. ಗೋನಾಳರವರು ವಹಿಸಿದ್ದರು. ಸಭೆಯಲ್ಲಿ ಶ್ರೀನಿವಾಸ ಚಿತ್ರಗಾರ, ಉಮೇಶ ಪೂಜಾರ, ಶಿಲ್ಪಾಮ್ಯಾಗೇರಿ, ಮಹೇಶ ಮನ್ನಾಪುರು. ಪಿ.ಬಿ.ಪಾಟೀಲ್, ವೈ.ಬಿ.ಜೂಡಿ, ವಿದ್ಯಾಧರ ಮೇಘರಾಜ, ಮಹ್ಮದ ಪೀರಸಾಬ, ಶಾಂತಪ್ಪ ಪಟ್ಟಣ್ಣಶಟ್ಟರ್, ಜಗದೀಶ್, ಪಕ್ಕೀರಪ್ಪ ಗೋಟೂರು ಸೇರಿದಂತೆ ಇತರರು ಇದ್ದರು. ಶಿಲ್ಪಾಮ್ಯಾಗೇರಿ ಸ್ವಾಗತಿಸಿ ಹಾಗೂ ವಂದಿಸಿದರು.