ಹೂವಿನ ಹಡಗಲಿಯಲ್ಲಿ ಮಹಾವೀರ ಜಯಂತಿ ಆಚರಣೆ

Mahavir Jayanti celebration in a flower boat

ಹೂವಿನ ಹಡಗಲಿಯಲ್ಲಿ ಮಹಾವೀರ ಜಯಂತಿ ಆಚರಣೆ

ಹೂವಿನ ಹಡಗಲಿ ;10- ಪಟ್ಟಣದ ದಿಗಂಬರ ಜೈನಮಂದಿರದಲ್ಲಿ ಗುರುವಾರ ಮಹಾವೀರ ಜಯಂತಿ ಯನ್ನು  ಅದ್ದೂರಿಯಾಗಿ ಆಚರಣೆ ಮಾಡಲಾಯಿತು, ಮಹಾವೀರ ತೀರ್ಥಂಕರರ ಪಂಚಾಮೃತ ಪೂಜೆ, ಹಾಗೂ ಮಹಾವೀರ್ ತೀರ್ಥಂಕರರ ತೊಟ್ಟಿಲು, ನಾಮಕರಣ, ಕಾರ್ಯಕ್ರಮ ನಡೆಯಿತು,  ಭಗವಾನ್ ಮಹಾವೀರರ ಭಾವಚಿತ್ರದೊಂದಿಗೆ  ಪಟ್ಟಣದಲ್ಲಿ  ಮೆರವಣಿಗೆಯನ್ನು ಜರುಗಿತು.  ಶಾಸಕರಾದ  ಕೃಷ್ಣ ನಾಯಕ್ ಮಾತನಾಡಿ ಭಗವಾನ್ ಮಹಾವೀರ ಸ್ವಾಮಿಯ   ಆದರ್ಶ ತತ್ವಗಳನ್ನು ಜೀವನದಲ್ಲಿಅಳವಡಿಸಿ ಕೊಳ್ಳಬೇಕು ಎಂದರು.ಪುರಸಭೆ ಮುಖ್ಯ ಅಧಿಕಾರಿ ಇಮಾಂ ಸಾಹೇಬ್,  ಸಮಾಜದ ಅಧ್ಯಕ್ಷ ಹೆಚ್‌ಎಸ್ ಪ್ರಶಾಂತ್, ಉಪಾಧ್ಯಕ್ಷರಾದ ವಿಜಯಕುಮಾರ್‌. ಜೈನ್, ಪುರಸಭಾ ಸದಸ್ಯರಾದ ಮಂಜುನಾಥ್ ಜೈನ್, ಏಎಂ ಕಾರ್ಯಕಾರಿ ಸಮಿತಿ ಸದಸ್ಯರಾದ ಸಂತೋಷ್‌. ಜೈನ್, ಸಮಾಜದ ಕಾರ್ಯದರ್ಶಿ ಪದ್ಮರಾಜ್ ಜೈನ್, ಖಜಾಂಚಿ ಬಾಗೇಶ್, ಅಜಿತ್, ಊ, ರಾಯಪ್ಪ,  ನಾಗರಾಜ್, ಡಿ. ಅಮಿತ್‌.ಊ. ಬಾಹುಬಲಿ ,  ರತ್ನಾಕರ, ಜ್ವಾಲಾ ಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷರಾದ  ಎಂ.ಡಿ ಪದ್ಮಾವತಿ,  ಪದಾಧಿಕಾರಿಗಳಾದ ಜಯಶ್ರೀ ಮಂಜುನಾಥ್ .ಜೈನ್, ಚಂಪಾ ರಾಯಪ್ಪ  , ನಾಗ ಮಂಜುಳಾ ಜೈನ್, ಹಾಗೂ ಜೈನ ಸಮಾಜದ ಹಿರಿಯ ಶ್ರಾವಕರು, ಶ್ರಾವಕಿಯರು ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು