ಎಲ್ಲಪ್ಪ ಮುಸ್ಸನ್ನಗೋಳಗೆ ಮಹಾತ್ಮ ಜ್ಯೋತಿಬಾ ಪುಲೆ ಪ್ರಶಸ್ತಿ ಪ್ರದಾನ
ಮಾಂಜರಿ 19: ಚಂದುರ್ ತಾಲೂಕ ಚಿಕ್ಕೋಡಿ ಇಲ್ಲಿಯ ಸರಕಾರಿ ಆಂಗ್ಲ ಮತ್ತು ಮರಾಠಿ ಮಾಧ್ಯಮ ಪ್ರಾಥಮಿಕ ಶಾಲೆಯ ಶಿಕ್ಷಕ ಎಲ್ಲಪ್ಪ ಸತ್ಯಪ್ಪ ಮುಸ್ಸನ್ನಗೋಳ ಇವರಿಗೆ ಇತ್ತೀಚಿಗೆ ಧಾರವಾಡದ ವಿದ್ಯಾ ಕಾಶಿ ಕುಲ ಪುರೋಹಿತ ಕಾನೂನು ವೆಂಕಟರಾಯರ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಶಿಕ್ಷಕರಾಗಿ ಪರಿಗಣಿಸಿ ಅವರಿಗೆ ರಾಜ್ಯಮಟ್ಟದ ಮಹಾತ್ಮ ಜ್ಯೋತಿಬಾಪುಲೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
ಶಿಕ್ಷಕ ಯಲ್ಲಪ್ಪ ಮುಷನ್ನ ಗೋಳ ಇವರು ಮೂಲತಃ ಗೋಕಾಕ್ ತಾಲೂಕಿನ ಫಾಲ್ಸ್ ನಿವಾಸಿಯಾಗಿ ಕೆಳದ 10 ವರ್ಷಗಳಿಂದ ಚಿಕ್ಕೋಡಿ ತಾಲೂಕಿನ ಚಂದುರ್ ಗ್ರಾಮದ ಸರಕಾರಿ ಆಂಗ್ಲ ಮತ್ತು ಮರಾಠಿ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಅವರ ಶಿಕ್ಷಕ ಸೇವೆಯನ್ನು ಪರಿಗಣಿಸಿ ಅವರಿಗೆ ಸದರಿ ಪ್ರಶಸ್ತಿ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಅನುದಾನ ಶಾಲಾ ನೌಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರಿನ ಅಧ್ಯಕ್ಷ ಡಾಕ್ಟರ್ ವಿಶ್ವಾಸ್ ಡಮಾಲ್ ತಿಳಿಸಿದ್ದಾರೆ.