ಯಥಾವತ್ತಾಗಿ ಮಹಾಶಿವರಾತ್ರಿ ಜಾಗರಣೆನಾಗರಾಜ
ಗದಗ:22:ಪ್ರತಿ ವರ್ಷದಂತೆ ಈ ವರ್ಷವು ಮಠದ ವತಿಯಿಂದ ಯಥಾವತ್ತಾಗಿ ಮಹಾಶಿವರಾತ್ರಿ ಜಾಗರಣೆ, ಅಡ್ಡಪಲ್ಲಕ್ಕಿ, ಮಹಾರತೋತ್ಸವ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗುವವು.ಜಾತ್ರೆಯ ಅಂಗವಾಗಿ ಫೆ.24 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆ ವರೆಗೆ ಉಚಿತ ಆರೋಗ್ಯ ಚಿಕಿತ್ಸಾ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನ ಶ್ರೀ ಶಿವಾನಂದ ಆಸ್ಪತ್ರೆ ಡಿಜಿಎಂ ಆಯುರ್ವೇದಿಕ ಮೆಡಿಕಲ್ ಕಾಲೇಜ ಆವರಣ ಕಳಸಾಪೂರ ರಸ್ತೆ ಗದಗ ನಲ್ಲಿ ಏರಿ್ಡಸಲಾಗಿದೆ ಎಂದು ಎಂ ಬಿ ಪಾಟೀಲ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶ್ರೀ ಜಗದ್ಗುರು ಶಿವಾನಂದ ವಿದ್ಯಾವರ್ಧಕ ಸಂಸ್ಥೆ, ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಹುಬ್ಬಳ್ಳಿ, ಶ್ರೀ ಜಗದ್ಗುರು ಶಿವಾನಂದ 105ನೇಯ ಜಾತ್ರಾಮಹೋತ್ಸವ ಸಮಿತಿ, ಶ್ರೀ ಡಿ.ಜಿ.ಎಮ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ರೇಡ್ ಕ್ರಾಸ್ ಸಂಸ್ಥೆ, ಗದಗ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ರಕ್ತಭಂಡಾರ, ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 24-02- 2025 ಸೋಮವಾರ ಉಚಿತ ಕ್ಯಾನ್ಸರ್ ತಪಾಸಣೆ, ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಜರುಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಿದರು.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ : 24-02-2025ರ ಬೆಳಿಗ್ಗೆ 10-00 ಗಂಟೆಗೆ ಸ್ಥಳ: ಶ್ರೀ ಶಿವಾನಂದ ಆಸ್ಪತ್ರೆ ಡಿ.ಜಿ.ಎಂ. ಆಯುರ್ವೇದಿಕ ಮೆಡಿಕಲ್ ಕಾಲೇಜ ಆವರಣ,ಕಳಸಾಪೂರ ರೋಡ, ಗದಗ ಉದ್ಘಾಟನೆಯನ್ನ ಶ್ರೀ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು ಶಿವಾನಂದ ಬೃಹನ್ಮಠ ನೆರವೇರಿಸುವರು. ವಿವರಣೆಯನ್ನ ಡಾ.ಎಲ್ ಎಸ್ ಪಾಟೀಲ ಕ್ಯಾನ್ಸರ್ ತಜ್ಞರು ಎಸ್ ಎಸ್ ಆಸ್ಪತ್ರೆ ದಾವಣಗೇರಿ ಹಾಗೂ ಡಾ.ಸಂತೋಷ ಬೆಳವಡಿ ಪ್ರಾಚಾರ್ಯರು ಡಿಜಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಗದಗ ವಿವರಣೆ ನೀಡುವರು.
ಮಹಾ ಶಿವರಾತ್ರಿ ಜಾಗರಣಾ ಕಾರ್ಯಕ್ರಮವು ಫೆ.26 ರ ಬುಧವಾರ ಸಾಯಂಕಾಲ 7 ಗಂಟೆಯಿಂದ 9 ರ ವರೆಗೆ, ಸಂಗೀತ ಕಾರ್ಯಕ್ರಮವು ಕುಮಾರಿ ದಿಯಾ ಪೀರಸಾಬ ಕೌತಾಳ ಹಾಗೂ ಸಂಗಡಿಗರು, ನಂತರ ರಾತ್ರಿ 9 ರಿಂದ ಬೆಳಿಗ್ಗೆ 6 ರ ವರೆಗೆ ಮಹಾ ಶಿವರಾತ್ರಿ ಜಾಗರಣಾ ಕಾರ್ಯಕ್ರಮ ಜರುಗುವುದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಜಗದ್ಗುರು ಶ್ರೀ ಶ್ರೀ ಶ್ರೀ ಅಭಿನವ ಶಿವಾನಂದ ಮಹಾಸ್ವಾಮಿಗಳು ಶಿವಾನಂದ ಬೃಹನ್ಮಠ ಗದಗ, ಇದರ ನೇತೃತ್ವವನ್ನ ಪ.ಪೂ.ನಿಜಗುಣ ಮಹಾಸ್ವಾಮಿಗಳು ಶಿವಾನಂದ ಬ್ರಹ್ಮ ವಿದ್ಯಾಶ್ರಮ, ಹರಳಕಟ್ಟಿ, ಅಧ್ಯಕ್ಷತೆ : ಪ.ಪೂ.ಶ್ರೀ ದಯಾನಂದ ಸರಸ್ವತಿ ಮಹಾಸ್ವಾಮಿಗಳು, ಪೂರ್ಣಾನಂದಾಶ್ರಮ ಕಾಡರಕೊಪ್ಪ, ಉದ್ಘಾಟಕರು : ಪ.ಪೂ.ಮಹಾದೇವಾನಂದ ಸರಸ್ವತಿ ಮಹಾಸ್ವಾಮಿಗಳು, ಶಿವಾನಂದ ಮಠ ಬೈಲಹೊಂಗಲ, ಸಂಚಾಲಕರಾಗಿ ಡಾಽಽ ಬಸವರಾಜ ಮಹಾಸ್ವಾಮಿಗಳು, ಕರಿಕಟ್ಟಿ ಸೇರಿದಂತೆ ಅನೇಕ ಪೂಜ್ಯರು ಭಾಗಿಯಾಗುವುದಾಗಿ ಹೇಳಿದರು.
ಅಡ್ಡ ಪಲ್ಲಕ್ಕಿ ಮಹೋತ್ಸವವು ದಿನಾಂಕ: 27-2-2025 ರ ಗುರುವಾರ ಮದ್ಯಾಹ್ನ 3-30 ಗಂಟೆಗೆ ಸಕಲ ವಾಧ್ಯ ಮೇಳಗಳು ಶ್ರೀ ಕರಿಯಮ್ಮ ದೇವಿ ಮಹಿಳಾ ವಾಡೊಳ್ಳಿನ ಸಂಘ ಸಾಽಽ ಸುಳ್ಳ, ತಾ ಹುಬ್ಬಳ್ಳಿ ಶ್ರೀ ನಂದೀಶ್ವರ ವೀರಗಾಸಿ ಕಲಾ ಬಳಗ ಸಾ: ಸುಣಕಲ್ಲ ಬಿದರಿ ತಾ ರಾಣೆಬೇನ್ನೂರು, ಶ್ರೀ ಉಮಾಮಹೇಶ್ವರ ಭಜನಾ ಸಂಘ ಸಾ. ಅಸುಂಡಿ ತಾ ಗದಗ ಶ್ರೀ ಮಲ್ಲಿಕಾರ್ಜುನ ಬಜಂತ್ರಿ ಕರಡಿ ಮಜಲು ಸಾ. ಹರ್ತಿ ತಾ ಗದಗ ಮತ್ತು ವಿವಿಧ ಕಲಾ ತಂಡಗಳೊಂದಿಗೆ ವೈಭವದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾಯಂಕಾಲ 6-30 ಕ್ಕೆ ಶ್ರೀ ಮಠಕ್ಕೆ ಆಗಮಿಸಿದ ನಂತರ ಮಹಾರಥೋತ್ಸವ ಜರಗುವದು ರಾತ್ರಿ 8-00 ಗಂಟೆಯಿಂದ 10-00 ಗಂಟೆವರೆಗೆ ವಿವಿಧ ಮಹಾತ್ಮರಿಂದ ಪ್ರವಚನ ಜರಗುವದು ರಾತ್ರಿ 10-00 ಗಂಟೆಯಿಂದ ಶ್ರೀ ದುರ್ಗಾ ಪರಮೇಶ್ವರಿ ಕಲಾ ಕ್ಷೇಮಾಭಿವೃದ್ಧಿ ಸಂಘ ಗದಗ ಇವರಿಂದ ಸಂಪೂರ್ಣ ಹೇಮರಡ್ಡಿ ಮಲ್ಲಮ್ಮ ನಾಟಕ ಜರಗುವದು ಆದ್ದರಿಂದ ಎಲ್ಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಂ ಬಿ ಪಾಟೀಲ ತಿಳಿಸಿದರು.
ಪತ್ರಿಕಾ ಗೋಷ್ಠಿ ವೇಳೆ ಶ್ರೀ ಜಗದ್ಗುರು ಶಿವಾನಂದ ಬೃಹನ್ಮಠದ 2025 ನೇ ಸಾಲಿನ ಜಾತ್ರಾ ಮಹೋತ್ಸವದ ಗೌರವಾಧ್ಯಕ್ಷ ಬಿ ಬಿ ಭಾವಿಕಟ್ಟಿ, ಅಧ್ಯಕ್ಷರಾದ ಶಿವಾನಂದ ನಡವಲಗುಡ್ಡ, ಕಾರ್ಯಾಧ್ಯಕ್ಷ ರಾಮಣ್ಣ ಹೊಸಮನಿ, ಸಲಹಾ ಸಮಿತಿ ಸದಸ್ಯ ಷಡಾಕ್ಷರಯ್ಯಾ ಹಿರೇಮಠ ಸೇರಿದಂತೆ ಇತರರಿದ್ದರು.