ಮಹಾಶಿವರಾತ್ರಿ: ಆಥಣಿ ಗಚ್ಚಿನ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ

Mahashivaratri: Sharan Culture Festival at Athani Gachchina Math

ಮಹಾಶಿವರಾತ್ರಿ: ಆಥಣಿ ಗಚ್ಚಿನ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ 

ಅಥಣಿ 24: ಶ್ರೀ ಕ್ಷೇತ್ರ ಗಚ್ಚಿನ ಮಠದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶರಣ ಸಂಸ್ಕೃತಿ ಉತ್ಸವ ಇದೇ ಫೆ.25 ರಿಂದ 27 ರವರೆಗೆ ಶ್ರೀ ಮಠದ  ಆವರಣದಲ್ಲಿ ನಡೆಯಲಿದೆ ಎಂದು ಗಚ್ಚಿನ ಮಠದ ಪೀಠಾಧಿಪತಿ ಶಿವಬಸವ ಸ್ವಾಮೀಜಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಶರಣ ಸಂಸ್ಕೃತಿ ಉತ್ಸವದಲ್ಲಿ ಶ್ರೇಷ್ಠ ಮಠಾಧಿಶರು, ರಾಜಕೀಯ ನಾಯಕರು, ಜನ ಪ್ರತಿನಿಧಿಗಳು, ಕಲಾವಿದರು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿ ಮೆರಗು ನೀಡಲಿದ್ದಾರೆ ಎಂದ ಅವರು ಶರಣ ಸಂಸ್ಕೃತಿ ಉತ್ಸವದಲ್ಲಿ ಸಹಜ ಶಿವಯೋಗ, ಚಿಂತನ ಗೋಷ್ಠಿ, ಯುವಜನ ಸಮಾವೇಶ, ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

     ಫೆ.25 ರಂದು ಸಂಜೆ 6.30 ಕ್ಕೆ ನಡೆಯಲಿರುವ ಶರಣ ಸಂಸ್ಕೃತಿ ಉತ್ಸವದ ಉದ್ಘಾಟನಾ ಸಮಾರಂಭವನ್ನು ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಜ್ಯ ಘಟಕ ಅಧ್ಯಕ್ಷ, ನಿವೃತ್ತ ಐ.ಪಿ.ಎಸ್ ಶಂಕರ ಬಿದರಿ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಶಾಸಕ ಲಕ್ಷ್ಮಣ ಸವದಿ, ಸಾನಿಧ್ಯವನ್ನು ಚಿತ್ರದುರ್ಗ ಬೋವಿ ಗುರು ಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶಿರ್ಕಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ  ವಹಿಸುವರು ಎಂದರು.       ಅತಿಥಿಗಳಾಗಿ ಕಾಗವಾಡ ಶಾಸಕ ರಾಜು ಕಾಗೆ, ಚಿತ್ರದುರ್ಗ ಮುರುಘರಾಜೇಂದ್ರ ಬಹನ್ನಠದ ಶಿವಯೋಗಿ ಕಳಸದ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಾಯಿ ನಿಕೇತನ ಶಿಕ್ಷಣ ಸಂಸ್ಥೆಯ ರಾಜೇಶ ವಾಲಿ, ಶರಣ ಸಾಹಿತ್ಯ ಪರಿಷತ್ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ.ಎಂ.ವಿರೇಶ, ಬಿಗ್ ಬಾಸ್ ಸ್ಪರ್ಧಿ ಉಡುಪಿಯ ಧನರಾಜ್ ಎಸ್‌.ಆರ್, ವಿಜಯಪುರದ ಅನುಭಾವಿ ಜೆ.ಎಸ್‌.ಪಾಟೀಲ, ಬಿಗ್ ಬಾಸ್ ಸ್ಪರ್ಧಿ ಗೋಲ್ಡ ಸುರೇಶ್ ಆಗಮಿಸುವರು, ಸ್ಥಳೀಯ ಎಸ್‌.ಎಮ್‌.ಎಸ್ ಬ್ಯಾಂಕನ ನೂತನ ಅಧ್ಯಕ್ಷ ಶಿವಯೋಗಿ ಗೆಜ್ಜಿ, ಅಸಂಘಟಿತ ಕಾರ್ಮಿಕರ ಹಾಗೂ ನೌಕರರ ರಾಜ್ಯ ಅಧ್ಯಕ್ಷ ಡಾ.ಸಿ.ಬಿ.ಕುಲಿಗೋಡ ಇವರನ್ನು ಸತ್ಕರಿಸಲಾಗುವುದು ಎಂದರು.  

       ಫೆ.26 ರಂದು ಮುಂಜಾನೆ 7.30 ಕ್ಕೆ ನಡೆಯಲಿರುವ ಸಹಜ ಶಿವಯೋಗದ ಸಾನಿಧ್ಯವನ್ನು ಗುರುಮಠಕಲ್ ಖಾಸಾ ಮುರುಘಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ,  ಗಡಿಂಗ್ಲಜದ ಮಹಾಂತ ಸಿದ್ಧೇಶ್ವರ ಸ್ವಾಮೀಜಿ, ನದಿ ಇಂಗಳಗಾಂವದ ಸಿದ್ಧಲಿಂಗ ಸ್ವಾಮೀಜಿ, ಬ್ಯಾಡಗಿಯ ಮಲ್ಲಿಕಾರ್ಜುನ ಸ್ವಾಮೀಜಿ, ಸಂಖದ ಮಹೇಶ ದೇವರು, ಹಲ್ಯಾಳದ ಗುರುಸಿದ್ಧ ಸ್ವಾಮೀಜಿ ವಹಿಸುವರು, ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಸದಸ್ಯ ಶ್ಯಾಮರಾವ ಪೂಜಾರಿ, ಸಮಾಜ ಸೇವಕ ಪ್ರಕಾಶ ಮಹಾಜನ, ಬಿ.ಜೆ.ಪಿ ಧುರೀಣ ಧರೆಪ್ಪ ಠಕ್ಕಣ್ಣವರ, ಯುಚ ಧುರೀಣ ಶಿವಕುಮಾರ ಸವದಿ, ವರ್ತಕ ರಾಜು ಬಿಳ್ಳೂರ, ಘಟನಟ್ಟಿಯ ಬಾಬು ಗಲಗಲಿ, ಆರೂಢ ಜ್ಯೋತಿ ಬ್ಯಾಂಕಿನ ಅಧ್ಯಕ್ಷ ಗುರುಬಸು ತೇವರಮನಿ, ವರ್ತಕ ಚಂದ್ರಶೇಖರ ಬಳ್ಳೋಳ್ಳಿ ಆಗಮಿಸುವರು, ಕಾರ್ಯಕ್ರಮದ ದಾಸೋಹಿಗಳಾದ ಚಂದ್ರಶೇಖರ ಯಲ್ಲಟ್ಡಿ ಮತ್ತು ಗುರು ಭೀಮರಾಯ ಉಪಸ್ಥಿತರಿರುವರು ಎಂದು ತಿಳಿಸಿದರು.       

ಮುಂಜಾನೆ 9 ಗಂಟೆಗೆ ನಡೆಯಲಿರುವ ಶ್ರೀ ಮರುಘೇಂದ್ರ ಶಿವಯೋಗಿಗಳ ಭಾವ ಚಿತ್ರದ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠದಲ್ಲಿ ಸಮಾವೇಶಗೊಳ್ಳಲಿದೆ ಎಂದ ಅವರು ಮಧ್ಯಹ್ನ ಶಿವರಾತ್ರಿ ಶಿವಯೋಗ ಮತ್ತು ಮಹಾ ದಾಸೋಹ ನಡೆಯಲಿದೆ ಎಂದರು. 

        ಸಂಜೆ 6.30 ಕ್ಕೆ ನಡೆಯಲಿರುವ ಬಸವ ತತ್ವ ಚಿಂತನ ಗೋಷ್ಠಿಯ ಸಾನಿಧ್ಯವನ್ನು ಧಾರವಾಡ ಮುರುಘಾ ಮಠದ ಡಾ.ಮಲ್ಲಿಕಾರ್ಜುನ ಮಹಾ ಸ್ವಾಮೀಜಿ, ಅಥಣಿ ಮೋಟಗಿ ಮಠದಶ್ರೀ ಪ್ರಭು ಚನ್ನಬಸವ ಸ್ವಾಮೀಜಿ, ಚಿತ್ರದುರ್ಗ ಮದಾರ ಚನ್ನಯ್ಯ ಮಠದ ಬಸವಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ವಹಿಸುವರು, ಅತಿಥಿಗಳಾಗಿ ಮಾಜಿ ಶಾಸಕ ಮಹೇಶ ಕುಮಠಳ್ಳಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಮ್‌.ಬಿ.ಪಾಟೀಲ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಕಾಂಗ್ರೆಸ್ ಧುರೀಣ ಗಜಾನನ ಮಂಗಸೂಳಿ, ಸಾಹಿತಿ ಡಾ.ವ್ಹಿ.ಎಸ್‌.ಮಾಳಿ, ಬಳವಾಡದ ಪ್ರಗತಿ ಪರ ರೈತ ಶಿವಗೌಡ ನೇಮಗೌಡ, ಕಾಂಗ್ರೆಸ್ ಮುಖಂಡ ರಮೇಶ ಸಿಂದಗಿ, ದಾವಣಗೇರೆಯ ಶಿಲ್ಪಿ ಇಂಜನೀಯರ್ ವಿಜಯಾನಂದ ಆಗಮಿಸುವರು ಎಂದು ತಿಳಿಸಿದರು. 

         ಪುರಸಭಾಧ್ಯಕ್ಷೆ ಶಿವಲೀಲಾ ಬುಟಾಳಿ ಮತ್ತು ನೀರಾವರಿ ನಿಗಮದ ಪ್ರವೀಣ ಹುಣಸಿಕಟ್ಟಿ ಇವರನ್ನು ಸತ್ಕರಿಸಲಾಗುವುದು ಎಂದರು. ರಾತ್ರಿ 10 ಗಂಟೆಗೆ ವಿವಿಧ ಕಲಾವಿದರಿಂದ ಸಂಗೀತ ಸಂಭ್ರಮ ನಡೆಯಲಿದೆ ಎಂದರು.         ಫೆ.27 ರಂದು ಸಂಜೆ 6.30 ಕ್ಕೆ ನಡೆಯಲಿರುವ ಸಿದ್ಧಲಿಂಗ ಅಪ್ಪಗಳ ಸ್ಮರಣೋತ್ಸವ ಮತ್ತು ಯುವಜನ ಸಮಾವೇಶ ಕಾರ್ಯಕ್ರಮದ ಸಾನಿಧ್ಯವನ್ನು ಚಿತ್ತದುರ್ಗ ಬ್ರಹನ್ಮಠದ  ಡಾ.ಬಸವ ಕುಮಾರ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಡಾ.ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ವಹಿಸುವರು, ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿ, ಯುವ ಧುರೀಣರಾದ  ಚಿದಾನಂದ ಸವದಿ, ಮೃಣಾಲ ಹೆಬ್ಬಾಳಕರ, ಉದ್ಯಮಿ ಬಸವ ಪ್ರಸಾದ ಜೊಲ್ಲೆ, ಹಿರೆಕೇರೂರಿನ ಉದ್ಯಮಿ ದಯಾನಂದ ಜನ್ನು, ಬಂಕಾಪುರದ ಮಂಜುನಾಥ, ಬಾಲ ವಿಕಾಸ ಅಕಾಡೆಮಿಯ ಸಂಗಮೇಶ ಬಬಲೇಶ್ವರ, ಬೆಂಗಳೂರಿನ ನಾಗರಾಜ ಎಮ್‌.ಎಮ್, ಬಿಳ್ಳೂರಿನ ವಿಜಯ ಕೊಟಗೊಂಡಿ ಆಗಮಿಸುವರು ಎಂದರು.         

ಮುಂಬೈನ ಹೃದಯ ರೋಗ ತಜ್ಞ ಡಾ.ಬಸವರಾಜ ಕಲ್ಮಠ ಇವರನ್ನು ಸತ್ಕರಿಸಲಾಗುವುದು, ಕಾರ್ಯಕ್ರಮದ ದಾಸೋಹಿ ಉದ್ಯಮಿ ರಾವಸಾಬ ಐಹೊಳೆ ಉಪಸ್ಥಿತರಿರುವರು ಎಂದರು.      

ಸುದ್ದಿಗೋಷ್ಠಿಯಲ್ಲಿ ಗಚ್ಚಿನ ಮಠದ ಭಕ್ತರು, ವಿವಿಧ ಮಠಾಧೀಶರು ಉಪಸ್ಥಿತರಿದ್ದರು.