ಮಾ. 30 ರಂದು ಕಳಸಾಪುರ ಗ್ರಾಮದಲ್ಲಿ ಈಶ್ವರ ಬಸವಣ್ಣ ದೇವರ ಮಹಾರಥೋತ್ಸವ

Maharathotsava of Lord Ishwara Basavanna in Kalasapura village on 30th March

ಮಾ. 30 ರಂದು ಕಳಸಾಪುರ ಗ್ರಾಮದಲ್ಲಿ ಈಶ್ವರ ಬಸವಣ್ಣ ದೇವರ ಮಹಾರಥೋತ್ಸವ  


ಗದಗ 24:  ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ರೂವಾರಿಗಳಾದ ಲಿಂ. ಶ್ರೀಪಾದಯ್ಯ ಇಟಗಿಮಠ ಇವರ ಸ್ಮರಣೆಯಲ್ಲಿ ಕಳಸಾಪುರ ಗ್ರಾಮದ ಈಶ್ವರ ಬಸವಣ್ಣ ದೇವರ 15ನೇ ವರ್ಷದ ಜಾತ್ರಾ ಮಹೋತ್ಸವ, ಶಿವಶರಣೆ ಗುಡ್ಡಾಪುರ ದಾನಮ್ಮದೇವಿ ಪುರಾಣ ಮಂಗಲೋತ್ಸವ, ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಮಹಾರಥೋತ್ಸವವು ಇದೆ ಮಾರ್ಚ್‌ 26 ರಿಂದ 31 ರವರೆಗೆ ಜರುಗಲಿವೆ. ಮಾರ್ಚ್‌ 26 ರಂದು ಬುಧವಾರ ಬೆಳಿಗ್ಗೆ 8.30 ಗಂಟೆಗೆ ಕಳಸಾರೋಹಣ ನಂತರ ಸಂಜೆ ಪುರಾಣ ಮಂಗಲೋತ್ಸವ ಜರುಗುವದು. ಮಾರ್ಚ್‌ 27 ರಿಂದ 28 ರ ವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಮಾರ್ಚ್‌ 29 ರಂದು ಸಂಜೆ 4 ಗಂಟೆಗೆ ಕುಂಭೋತ್ಸವ ಜರುಗುವುದು. ಮಾರ್ಚ್‌ 30 ರಂದು ಬೆಳಗ್ಗೆ 11.30 ಗಂಟೆಗೆ ಸಾಮೂಹಿಕ ವಿವಾಹ ನಂತರ ಸಂಜೆ 5.30 ಗಂಟೆಗೆ ಮಹಾ ರಥೋತ್ಸವ ಜರಗುವುದು. ಮಾರ್ಚ್‌ 31  ರಂದು ಸಂಜೆ 5.30 ಗಂಟೆಗೆ ಲಘು ರಥೋತ್ಸವ ಜರಗುವುದು. ಮಾರ್ಚ್‌ 26ರಂದು ಬುಧವಾರ ಬೆಳಗ್ಗೆ 8.30 ಗಂಟೆಗೆ ಕಳಸಾರೋಹಣ ಜರುಗುವುದು. ಓಂಕಾರಗಿರಿಯ ಓಂಕಾರೇಶ್ವರ ಹಿರೇಮಠದ ಫಕ್ಕಿರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಕಳಸಾರೋಹಣ ಜರುಗುವುದು. ಅಂದು ಸಂಜೆ 7.30 ಗಂಟೆಗೆ ಪುರಾಣ ಮಂಗಲೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ಓಂಕಾರಗಿರಿ ಓಂಕಾರೇಶ್ವರ ಹಿರೇಮಠದ ಫಕ್ಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಗದುಗಿನ ದತ್ತಾ ಡೆವಲಪರ್ಸ್‌ನ ನಿರ್ದೇಶಕರಾದ ಕಿರಣ ಭೂಮಾ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಗಣ್ಯ ವ್ಯಾಪಾರಸ್ಥರಾದ ಎಸ್‌. ಪಿ. ಸಂಶಿಮಠ, ದತ್ತಾ ಡೆವಲಪರ್ಸ್‌ನ ನಿರ್ದೇಶಕರಾದ ಎಸ್‌.ಎಚ್‌. ಶಿವನಗೌಡ, ಕಳಸಾಪುರ ಗ್ರಾಮದ ಗಣ್ಯರಾದ ಶರದರಾವ್  ಹುಯಿಲಗೋಳ, ಗದುಗಿನ ಗಣ್ಯ ವ್ಯಾಪಾರಸ್ಥರಾದ ಸದಾಶಿವಯ್ಯ ಮದರಿಮಠ, ಕಳಸಾಪುರನ ಮಹಾಂತಯ್ಯ ಹಿರೇಮಠ, ಗದಗ ವೀರಶೈವ ಮಹಾಸಭಾದ  ಅಧ್ಯಕ್ಷರಾದ ರಾಜು ಗುಡಿಮನಿ, ಯುವ ಮುಖಂಡರಾದ ಭೀಮಸಿಂಗ್ ರಾಠೋಡ, ಪ್ರಶಾಂತ ನಾಯ್ಕರ, ರಾಜು ಖಾನಾಪುರ, ಶಿವಮೊಗ್ಗದ ಪೊಲೀಸ್ ಇಲಾಖೆಯ ಚಂದ್ರಶೇಖರ ಬಂಡಿವಡ್ಡರ, ಉದ್ಯಮಿ  ಬಾಳು ಪಾಟೀಲ, ಸುನಿಲ್ ಅಗರವಾಲ್, ವಿನೋದ್ ಬಾಂಡಗೆ, ಅಪ್ಪಣ್ಣ ಗೋಡಚಿ, ಗದಗ ಎಸ್‌. ಎಸ್‌. ಕೆ. ಸಮಾಜದ ಅಧ್ಯಕ್ಷ ಪ್ರಕಾಶ  ಬಾಂಡಗೆ, ಮಾರುತಿ ಜಾಧವ್, ಗಜೇಂದ್ರಗಡದ ಯುವ ಮುಖಂಡ ಶರೀಫ ಡಾಲಾಯತ, ಗದುಗಿನ ಉದ್ಯಮಿ ವಿರೂಪಾಕ್ಷಪ್ಪ ಬಳ್ಳೊಳ್ಳಿ, ಗದಗ ಕೆಎಸ್‌ಆರ್‌ಟಿಸಿಯ ಮಲ್ಲಯ್ಯ ಸರಗಣಾಚಾರಿಮಠ  

ಅವರುಗಳು ಆಗಮಿಸುವರು. ಪ್ರವಚನದ ಮಂಗಳನುಡಿಯನ್ನು ಸಿದ್ದಾಪುರ ಶಿವಲಿಂಗಯ್ಯ ಸ್ವಾಮಿಗಳು ಹಿರೇಮಠ ಅವರು  ಮಾಡುವರು. ಸಂಗೀತ ಸುರೇಶಕುಮಾರ ಸೇಡಂ ಹಾಗೂ ತಬಲಾಸಾಥನ್ನು ರುದ್ರೇಶ ಕರಡಕಲ್ ಅವರು ನೀಡುವರು. ಮಾರ್ಚ್‌ 27 ರಿಂದ 28 ರ ವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಮಾರ್ಚ್‌ 29ರಂದು ಸಂಜೆ 4 ಗಂಟೆಗೆ ಕುಂಭೋತ್ಸವ ಜರುಗುವುದು. ಈ ಕಾರ್ಯಕ್ರಮದ ಸಾನಿಧ್ಯವನ್ನು ಸೂಡಿ ಜುಕ್ತಿ ಹಿರೇಮಠದ ಕೊಟ್ಟೂರು ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಮಾರ್ಚ್‌ 31 ಬೆಳಿಗ್ಗೆ 11.30 ಗಂಟೆಗೆ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಜರಗುವುದು. ಸಂಜೆ 5.30 ಗಂಟೆಗೆ ಮಹಾರಥೋತ್ಸವ ಜರುಗುವುದು. 

ಮಾರ್ಚ್‌ 30 ರಂದು ರವಿವಾರ ರಾತ್ರಿ 9 ಗಂಟೆಗೆ ಗದುಗಿನ ಸ್ಪೂರ್ತಿ ಮೆಲೋಡಿಸ್ ಆರ್ಕೆಸ್ಟ್ರಾ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗುವುದು.  ಮಾರ್ಚ್‌ 31 ರಂದು ಸಂಜೆ 5.30 ಗಂಟೆಗೆ ಲಘು ರಥೋತ್ಸವ ಮತ್ತು ರಾತ್ರಿ 9 ಗಂಟೆಗೆ ಕೊಪ್ಪಳದ ಶ್ರೀ ಅಭಿನವ ಮ್ಯೂಸಿಕಲ್ ಇವೆಂಟ್ಸ್‌ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗುವುದು ಎಂದು ಕಳಸಾಪುರ ಗ್ರಾಮದ ಈಶ್ವರ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಕಮೀಟಿಯು ಪ್ರಕಟಣೆಯಲ್ಲಿ ತಿಳಿಸಿದೆ.