ಅಥಣಿ 02: ಸವದಿ-ಇಲಕಲ್ ಮಠದ ಗುರು ಮಹಾಂತ ಸ್ವಾಮಿಜಿಯವರು ಕಾನೂನು ಕಲಿಕಾ ತರಗತಿಯಲ್ಲಿ ನನ್ನ ಸಹಪಾಠಿಗಳು. ಅವರಲ್ಲಿ ಸರಳ ಜೀವನ ಉದಾತ್ತ ಚಿಂತನೆ ಅಂದಿನಿಂದಲೂ ಇದೆ ಎಂದು ನವದೆಹಲಿಯ ಸವರ್ೊಚ್ಛ ನ್ಯಾಯಾಲಯದ ನ್ಯಾಯವಾದಿ ಮೋಹನ ಕಾತರಕಿ ಹೇಳಿದರು.
ಅವರು ತಾಲೂಕಿನ ಸವದಿ ಗ್ರಾಮದ ಲಿ.ಂ ಸಂಗನಬಸವ ಶಿವಯೋಗಿಗಳವರ 77 ನೇ ಪುಣ್ಯ ಸ್ಮರಣೋತ್ಸವ, ಲಿಂ. ಡಾ. ಮಹಾಂತ ಶಿವಯೋಗಿಗಳ ಪ್ರಥಮ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಜರುಗಿದ ಕಾನೂನು ಅರಿವು ಗೋಷ್ಠಿ ಹಾಗೂ 120 ನ್ಯಾಯವಾದಿ ದಂಪತಿಗಳಿಗೆ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಗುರು ಮಹಾಂತ ಸ್ವಾಮಿಜಿಯವರು ಕೇವಲ ಮಠಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಸಮಾಜದಲ್ಲಿರುವ ಮೂಢನಂಬಿಕೆ, ದುಶ್ಚಟಗಳಂತಹ ಸಮಾಜದಲ್ಲಿರುವ ಕಂಟಕಗಳನ್ನು ದೂರ ಮಾಡುವುದರೊಂದಿಗೆ ಸಾಧಕರನ್ನು, ಬುದ್ಧಿವಂತರನ್ನು, ತ್ಯಾಗಿಗಳನ್ನು ಗುರುತಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುವಂತಹ ಕಾರ್ಯವನ್ನೂ ಸಹ ಮಾಡುತ್ತಿದ್ದಾರೆ ಎಂದ ಅವರು ಮಾಡುತ್ತಿರುವ ಪ್ರತಿ ಕಾರ್ಯಕ್ರಮಗಳು ದಾಖಲೆಮಾಡುವಂತಹವು ಅಲ್ಲದೆ ಸಮಾಜದ ಎಲ್ಲ ಕ್ಷೇತ್ರಗಳಿಗೆ ಹೊಂದುವಂತಹ ಮೈಲಿಗಲ್ಲುಗಳು ಎಂದರು.
ಜಮಖಂಡಿ ಓಲೆ ಮಠದ ಚನ್ನಬಸವ ಸ್ವಾಮಿಜಿ, ಮಧುರಖಂಡಿಯ ಬಸವಜ್ಞಾನ ಗುರುಕುಲದ ಶರಣ ಈಶ್ವರ ಮಂಟೂರ, ಬೆಂಗಳೂರಿನ ಉಚ್ಚನ್ಯಾಯಾಲಯದ ನ್ಯಾಯಾವಾದಿ ಬಸವರಾಜ ಕರಡ್ಡಿ ಅವರು ಮಾತನಾಡಿದರು. ಭಾಲ್ಕಿಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು. ಧಾರವಾಡ ಉಚ್ಚನ್ಯಾಯಾಲಯದ ನ್ಯಾಯವಾದಿ ಎಂ.ಸಿ. ಬಂಡಿ ಅಧ್ಯಕ್ಷತೆ ವಹಿಸಿದ್ದರು. ಗೃಹ ಸಚಿವರ ಆಪ್ತಕಾರ್ಯದಶರ್ಿ ಡಾ. ಮಹಾಂತೇಶ ಬಿರಾದರ, ಧಾರವಾಡ ಉಚ್ಚ ನ್ಯಾಯಾಲಯದ ನ್ಯಾಯವಾದಿ ರವಿ ಬರಗುಂಡಿ ಸೇರಿದಂತೆ ಅನೇಕರಿಗೆ ಗೌರವ ಸತ್ಕಾರ ಜರುಗಿತು. ಅಥಣಿ ಚಕಿಲರ ಸಂಘದ ಅಧ್ಯಕ್ಷ ಕೆ.ಎ.ಒಣಜೋಳ, ರವಿ ಯಡಹಳ್ಲಿ, ಎಸ್.ವಿ.ಕುಂಬಾರ, ಸಂಗಮೇಶ ಬಬಲೇಶ್ವರ, ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಂಗಣ್ಣ ಗೂಗವಾಡ ಸ್ವಾಗತಿಸಿದರು. ಡಿ.ಬಿ.ಠಕ್ಕಣ್ಣವರ ನಿರೂಪಿಸಿದರು.