ಲೋಕದರ್ಶನ ವರದಿ
ಬಾಗಲಕೋಟೆ: ಸ್ತ್ರೀ ಕುಲದ ಘನತೆಯನ್ನು ಮೆರೆಸಿದ ಮಹಾಮಾತೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳೆಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅಪರ್ಿಸಿ ಮಾತನಾಡಿದ ಅವರು ಅಚಲ ಭಕ್ತಿ, ಸಹನಶೀಲತೆ, ತ್ಯಾಗಮಯಿ ಜೀವನ ಹಾಗೂ ಆದರ್ಶ ಸೊಸೆಯಾಗಿ ಬದುಕಿ ಬಾಳುವ ಮೂಲಕ ಮಹಿಳಾ ಕುಲಕ್ಕೆ ಮಾದರಿಯಾಗಿದ್ದಾರೆ ಎಂದರು.
ಮಲ್ಲಮ್ಮ ಎಂಬ ಹೆಸರು ಅಷ್ಟು ಮಹತ್ವದ್ದಾಗಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಮ್ಮ ಎಂಬ ಹೆಸರಿನ ಬಾಲಕಿ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಶೌಚಾಲಯ ನಿಮರ್ಿಸಿಕೊಂಡಿದ್ದು, ಈ ಪುಟ್ಟ ಮಲ್ಲಮ್ಮಳ ಹೋರಾಟ ಇತರರಿಗೆ ಮಾದರಿಯಾಗಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸಮಾನ ಅವಕಾಶಗಳು ದೊರಕದೇ ಇರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
ನಾನಾ ಕ್ಷೇತ್ರಗಳಲ್ಲಿ ಮಹಿಳೆ ತನ್ನದೇಯಾದ ಛಾಪನ್ನು ಮೂಡಿಸುತ್ತಿದ್ದಾರೆ. ಆದರೂ ಸಹ ಬಾಲ್ಯ ವಿವಾಹ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ. ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ. ಹೆಮರೆಡ್ಡಿ ಮಲ್ಲಮ್ಮಳು ಕಷ್ಟದ ಸನ್ನಿವೇಶಗಳ ನಡುವೆಯೂ ಬದುಕಿನುದ್ದಕ್ಕು ಆದರ್ಶಗಳನ್ನು ಅನುಸರಿಸಿದವರು. ಅವರು ಅನುಸರಿಸಿದ ಮಾರ್ಗದರ್ಶನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ರೇಖಾ ಗೋಗಿ ಮಾತನಾಡಿ ಶಿವಶರಣೆ ಮಲ್ಲಮ್ಮಳು ಶ್ರೀಶೈಲದ ದಕ್ಷಿಣ ಭಾಗದಲ್ಲಿ ಹುಟ್ಟಿ, ಹೇಮರೆಡ್ಡಿ ಮನೆತನದ ಸೊಸೆಯಾಗಿ ಬದುಕು ನಡೆಸುವ ಮೂಲಕ ಹೋರಾಟ ಮಾಡಿದವರು. ಇವರ ಹೋರಾಟ ಗುಹೆಯ ತರಹದ್ದಾಗಿದ್ದು, ವ್ಯವಸ್ಥೆಯ ಒಳಗೆ ಹೋರಾಟ ಕೈಗೊಂಡವರು ಹೆಮರೆಡ್ಡಿ ಮಲ್ಲಮ್ಮ ಎಂದರು.
ಹೇಮರೆಡ್ಡಿ ಮಲ್ಲಮ್ಮಳಿಗೆ ಬದುಕೇ ಒಂದು ಆದರ್ಶವಾಗಿತ್ತು. ಶಿಕ್ಷಣಕ್ಕೆ ಕೊಟ್ಟಿರುವ ಒತ್ತು ಸಂಸ್ಕಾರಕ್ಕೂ ನೀಡುವ ಮೂಲಕ ತಾಳ್ಮೆಯ ಬದುಕನ್ನು ಕಲಿಸಿಕೊಟ್ಟಿದ್ದಾಳೆ. ದಾನಗುಣ, ದಾಸೋಹ ತತ್ಪರತೆ ಹಾಗೂ ನಿಸ್ವಾರ್ಥ ಭಕ್ತಿಗೆ ಹೆಸರಾಗಿದ್ದು, ಸಾಕ್ಷಾತ್ ಮಲ್ಲಿಕಾಜರ್ುನನೇ ಪರೀಕ್ಷಾರ್ಥವಾಗಿ ಬಂದಾಗ ತನ್ನಲ್ಲಿರುವದೆಲ್ಲವನ್ನು ಉಣ್ಣಲಿಕ್ಕಿದ ಮಹಾತಾಯಿ ಮಲ್ಲಮ್ಮ ಜಂಗಮ ಸೇವೆಯೇ ಪರದೈವ ಸೇವೆಯೆಂದು ಬದುಕಿದವಳಾಗಿದ್ದಳು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಶಶೀಧರ ಕುರೇರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕಂದಾಯ ಇಲಾಖೆಯ ಶಿರಸ್ತೆದಾರ ಎಂ.ಬಿ.ಗುಡೂರ ಸ್ವಾಗತಿಸಿದರು. ಶಿಕ್ಷಣ ಇಲಾಖೆಯ ಜಾಸ್ಮಿನ್ ಕಿಲ್ಲೆದಾರ ವಂದಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.
**************