ಮಹಾಲಿಂಗಪುರ: ಶಿಕ್ಷಕರು ಕೇವಲ ಶಿಕ್ಷಕರಲ್ಲ ಜಸ್ಟೀಸ್: ಜಯರಾಮ ಶೆಟ್ಟಿ

ಲೋಕದರ್ಶನ ವರದಿ

ಮಹಾಲಿಂಗಪುರ 12: ಇಂದು ನಡೆಯುತ್ತಿರುವ ವಿದ್ಯಾರ್ಥಿಗಳು  ಸನ್ಮಾನ ಅವರ ಭವಿಷ್ಯದ ನವರಾತ್ರಿ. ಈ ಸನ್ಮಾನ ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಿಸಿದೆ ಎಂದು ಪತಕರ್ತ ಜಯರಾಮ ಶೆಟ್ಟಿ ಹೇಳಿದರು.  

ಸ್ಥಳೀಯ ಬನಶಂಕರಿ ದೇವಾಲಯದ ಆವರಣದಲ್ಲಿಅನ್ನಪೂರ್ಣೇಶ್ವರಿ ಮಹಿಳಾ ನೇಕಾರರ ವಿದ್ಯುತ್ ಚಾಲಿತ ಮಗ್ಗಗಳ ಹಾಗೂ ವಿವಿದೋದ್ದೇಶಗಳ ಸಹಕಾರಿ ಸಂಘ, ಮಹಾಲಿಂಗಪುರ ಇವರು ಹಮ್ಮಿಕೊಂಡಿದ್ದ 2019 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು  ಭವಿಷ್ಯದಲ್ಲಿ ಉತ್ತಮ ಸಂಸ್ಕಾರ ರೂಢಿಸಿಕೊಂಡು ಹೆತ್ತವರನ್ನು ಅವರ ಮುಪ್ಪಿನ ಕಾಲದಲ್ಲಿ ಮರೆಯದೇ ಚೆನ್ನಾಗಿ ನೋಡಿಕೊಳ್ಳಲು ತಿಳಿಸಿ, ಇಂದಿನ ಈ ಸಂಘದ ಕಾರ್ಯ ಇತರೆ ಸಂಘ ಸಂಸ್ಥೆಗಳಿಗೆ ಪ್ರೇರಣೆ. ಈ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾದ ಶಿಕ್ಷಕರು ಕೇವಲ ಶಿಕ್ಷಕರಲ್ಲ, ಅವರು ಜಸ್ಟೀಸ್ ಅವರನ್ನು ಕೊನೆಯವರೆಗೂ ಗೌರವಿಸಿ ಎಂದರು.  

ಡಾ. ಬಿ. ಡಿ. ಸೋರಗಾವಿ ಮಾತನಾಡಿ ಈ ಸಾಧಕ ಮಕ್ಕಳ ಸನ್ಮಾನ ಅವರ ಮೊದಲ ಹೆಜ್ಜೆ,  ಈ ಸನ್ಮಾನಕ್ಕೆ ಸತತ 12ವರ್ಷಗಳ ಸಾಧನೆಯಿದೆ, ಗುರವಿನ ಆಶೀವರ್ಾದವಿದೆ. ಮಗುವಿನ ಭವಿಷ್ಯಕ್ಕೆ ತಾಯಿಯ ಪಾತ್ರ ಬಹು ಮುಖ್ಯ, ಪ್ರತಿ ತಾಯಂದಿರೂ ಟಿವಿ, ಧಾರಾವಾಹಿ, ಮೊಬೈಲ್ ಗಳಿಂದ ದೂರವಿದ್ದು ಮಕ್ಕಳನ್ನು ಗಮನಿಸಿದರೆ ಸಾಕು ಇಂತಹ ಪ್ರತಿಭಾವಂತ ಮಕ್ಕಳು ಸೃಷ್ಟಿಯಾಗುತ್ತಾರೆ, ಆದ್ದರಿಂದ ಮಕ್ಕಳನ್ನು ಸದಾ ಗಮನಿಸುತ್ತಿರಿ ಎಂದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ಮಲ್ಲಪ್ಪ ಬಾವಿಕಟ್ಟಿ 16 ಮಂದಿ ಮಹಿಳಾ ಸದಸ್ಯರು ಸಂಘದ ಬಡ್ಡಿ ಹಣವನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಸದೇ ಎಲ್ಲಾ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು  ಸನ್ಮಾನಕ್ಕೆ ಬಳಸಿದ್ದು ಶ್ಲಾಘನೀಯ ಹಾಗೂ ಈ ಸನ್ಮಾನ ವಿದ್ಯಾರ್ಥಿಗಳ  ಜವಾಬ್ದಾರಿ ಹೆಚ್ಚಿಸಿದೆ ಎಂದರು. 

ಸಮಾರಂಭದಲ್ಲಿ ಹೊಸದಾಗಿ ಪಿಎಸ್ಐ ಆಗಿ ನೇಮಕಗೊಂಡ ವಿನಾಯಕ ಬಾವಿಕಟ್ಟಿ ಮತ್ತು ರಾಜ್ಯಕ್ಕೆ 6 ನೇ ಯರ್ಾಂಕ್ ಪಡೆದ ರಬಕವಿಯ ರವಿಕುಮಾರ್ ಕರಲಟ್ಟಿ ಹಾಗೂ ಸ್ಥಳೀಯ 8 ಪ್ರೌಢ ಶಾಲೆಗಳ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಒಟ್ಟು 24 ವಿದ್ಯಾರ್ಥಿಗಳನ್ನು  ಸನ್ಮಾನಿಸಿ ಪಾರಿತೋಷಕ ನೀಡಲಾಯಿತು. ಪತ್ರಕರ್ತ ಚಂದ್ರಶೇಖರ ಮೋರೆ ಹಾಗೂ ಸ್ಥಳೀಯ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರುಗಳಾದ ಅಣ್ಣಾಜಿ ಫಡತಾರೆ, ಕೌಜಲಗಿ, ರಾಥೋಡ, ಗಿಂಡೆ, ಬಿಜಾಪುರ ಮಾತನಾಡಿದರು.  

ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಚಮಕೇರಿ ಅಧ್ಯಕ್ಷತೆ ವಹಿಸಿದ್ದರು,  ಶೋಭಾ ಬಾವಿಕಟ್ಟಿ, ರಾಜೇಶ್ವರಿ ಸೋರಗಾವಿ, ಡಾ. ಎಂ.ವೈ. ಹುಡೇದಮನಿ, ಸಿದ್ದಗಿರೆಪ್ಪ ಕಾಗಿ,  ಮಖ್ಯಶಿಕ್ಷಕರಾದ ಮುಜಾವರ, ಚಿಕ್ಕನ್ನವರ, ನಾರನಗೌಡ ಉತ್ತಂಗಿ ಇತರರು ಇದ್ದರು. 

ಕು.ಅಕ್ಷತಾ ಕುದರಿ ಮತ್ತು ಸಂಗಡಿಗರು ಪ್ರಾಥರ್ಿಸಿ, ಶಶಿಕಲಾ ಚಮಕೇರಿ ಸ್ವಾಗತಿಸಿ, ವಂದಿಸಿದರು.