ಮಹಾಲಿಂಗಪುರ ಅರ್ಬನ್ ಬ್ಯಾಂಕಿಗೆ 51. 38 ಲಕ್ಷ ಲಾಭ : ಶೇಖರ ಅಂಗಡಿ

ಮಹಾಲಿಂಗಪುರ ಅರ್ಬನ್ ಬ್ಯಾಂಕಿಗೆ 51. 38 ಲಕ್ಷ ಲಾಭ : ಶೇಖರ ಅಂಗಡಿ Mahalingapur Urban Bank makes a profit of Rs 51.38 lakh: Shekhar Angadi

ಮಹಾಲಿಂಗಪುರ ಅರ್ಬನ್ ಬ್ಯಾಂಕಿಗೆ 51. 38 ಲಕ್ಷ ಲಾಭ : ಶೇಖರ ಅಂಗಡಿ 

ಮಹಾಲಿಂಗಪುರ 15: ಪಟ್ಟಣದ ಪ್ರತಿಷ್ಠಿತ ಬ್ಯಾಂಕಗಳಲ್ಲಿ ಒಂದಾದ ಮಹಾಲಿಂಗಪುರ ಆರ್ಬ್‌ ನ ಬ್ಯಾಂಕಿಗೆ ಸನ 2024-25 ನೇ ಸಾಲಿನಲ್ಲಿ 51.38 ಲಕ್ಷ ಲಾಭ ಗಳಿಸಿದೆ. ಹೆಚ್ಚಿನ ಅಭಿವೃದ್ಧಿ ಸಹಕಾರ ಅಗತ್ಯ ಎಂದು ಸಂಘದ ಅಧ್ಯಕ್ಷ ಶೇಖರ ಅಂಗಡಿ ಹೇಳಿದರು. 

ಅವರು ದಿ 14 ರಂದು ರವಿವಾರ ಟೋಣಪಿನಾಥ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ 47 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಸಿ ಮಾತನಾಡಿ ಬ್ಯಾಂಕ್ ರೈತರು ನೇಕಾರರ ಮತ್ತು ಇತರೆ ಎಲ್ಲ ಸಮುದಾಯಗಳ ಏಳಿಗೆಗಾಗಿ ಹಲವು ಯೋಜನೆಗಳ ಮೂಲಕ ಆರ್ಥಿಕ ನೆರವು ನೀಡಿ ಶ್ರಮಿಸುತ್ತಿದೆ. ಪ್ರತಿಯೊಬ್ಬ ಸದಸ್ಯರು ಇದರ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಕಳೆದ ಸಾಲಿನಲ್ಲಿ ಬ್ಯಾಂಕವು ಒಟ್ಟು 7 ಕೋಟಿಗೂ ಅಧಿಕ ಸಾಲ ವಿತರಿಸಿದ್ದು. ಸಂಘದಲ್ಲಿ ಒಟ್ಟು 4985 ಸದಸ್ಯರಿದ್ದು ಒಟ್ಟು 59.14 ಕೋಟಿ ಶೇರ ಬಂಡವಾಳ ಹೊಂದಿದ್ದು.ದುಡಿಯುವ ಬಂಡವಾಳ 20.50 ಕೋಟಿ ರೂಪಾಯಿ ಇದ್ದು ಸಂಘವು ತನ್ನ ಸದಸ್ಯರಿಗೆ ಎಲ್ಲ ತರಹದ ಸಾಲ ನೀಡುತ್ತಿದೆ. ಎಂದರು. 

ಬ್ಯಾಂಕಿನ ಕಾರ್ಯವೈಖರಿಯನ್ನು ಕಂಡ ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ ಬಾಗಲಕೋಟ ಇವರು ಸನ್ 2024-25 ನೇ ಸಾಲಿನ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಅರ್ಬನ್ ಬ್ಯಾಂಕ್ ಎಂದು ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ಪಡೆದುಕೊಂಡು ತನ್ನ ಹಿರಿಮೆ ಮತ್ತೊಂದು ಗರಿ ಏರಿಸಿಕೊಂದಿದೆ. 

ಅಡಿಟ್ ವರ್ಗ : ಪ್ರಶಕ್ತ ಸಾಲಿನಲ್ಲಿ ಲೆಕ್ಕ ಪರಿಶೋಧನೆಯನ್ನು ಮೆ ವ್ಹಿ, ಪಿ, ಜಿ, ಪಿ ಮತ್ತು ಕಂಪನಿ ಹುಬ್ಬಳ್ಳಿ ಇವರನ್ನು ಭಾರತೀಯ ರಿಝರ್ವ ಬ್ಯಾಂಕ್ ನೇಮಕ ಮಾಡಿದ್ದು ಸದರಿ ಸಾಲಿನ ಲೆಕ್ಕಪರಿಶೋಧನೆಯನ್ನು ಮಾಡಿದ್ದು “ ಬಿ “ ಶ್ರೇಣಿ ವರ್ಗಿಕೃತವಾಗಿದ್ದು. ತಿಳಿಸಿರುತ್ತಾರೆ. 

ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಕನ್ನಡ ವಿಭಾಗದಲ್ಲಿ ನಗರಕ್ಕೆ ಪ್ರಥಮ ಸ್ಥಾನ ಪಡೆದ ಸಾಹಿತ್ಯಾ ಎಂ ಟಿರ್ಕಿ, ಆಂಗ್ಲ ಮಾಧ್ಯಮದಲ್ಲಿ ನಗರಕ್ಕೆ ಪ್ರಥಮ ಸ್ಥಾನ ಪಡೆದ ಭಾಗ್ಯಶ್ರೀ ಪ ಬಳವಾಡ, ಪಿಯುಸಿ ಕಲಾ ವಿಭಾಗದಲ್ಲಿ ನಗರಕ್ಕೆ ಪ್ರಥಮ ಸ್ಥಾನ ಪಡೆದ ನಂದಿನಿ ಲ ಭೂಸಣ್ಣವರ ವಾಣಿಜ್ಯ ವಿಭಾಗದಲ್ಲಿ ಲಕ್ಷ್ಮಿ ಪಾಲಭಾಂವಿ, ವಿಜ್ಞಾನ ವಿಭಾಗದಲ್ಲಿ ಮಹಾನಂದಾ ಬ ಪವಾರ, ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಬ್ಯಾಂಕಿನ ಅಭಿವೃದ್ಧಿಗೆ ಸಹಕಾರ ನೀಡಿ ತಮ್ಮದೇ ಕೊಡುಗೆ ನೀಡಿದ ಮಹನಿಯರಾದ ಹೆಚ್ಚಿನ ವ್ಯವಹಾರ ಮಾಡಿದ ಗುರುಲಿಂಗ ಗ ಹುಬ್ಬಳ್ಳಿ, ಠೇವಣಿ ವಿಭಾಗದಲ್ಲಿ ಹೆಚ್ಚು ಹೆಚ್ಚು ಠೇವಣಿ ಮಾಡಿದ ಬಸವರಾಜ್ ಎಂ ಕುರಿ,ಚಾಲ್ತಿ ಮತ್ತು ಉಳಿತಾಯ ಖಾತೆಯಲ್ಲಿ ಹೆಚ್ಚಿಗೆ ಶಿಲ್ಕನ್ನು ಕಾಯ್ದಿರಿಸಿದ ವಿನಯಕುಮಾರ ಪ ಚಮಕೇರಿ, ನಿತ್ಯ ನಿಧಿ (ಪಿಗ್ಮಿ) ಹೆಚ್ಚು ತುಂಬಿ ಸಹಕಾರ ನೀಡಿದ ಶಿವಲಿಂಗಪ್ಪ ಕೊಡಗನೂರು, ಸಾಲ ಪಡೆದು ಸರಿಯಾದ ಸಮಯಕ್ಕೆ ತುಂಬಿ ಸಹಕರಿಸಿದ ಸುರೇಶ ಕಲಾಲ ಇವರೆಲ್ಲರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಮಹಾದೇವ ಮಾರಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾಂಕಿನ ಅಧ್ಯಕ್ಷ ಶೇಖರ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಿರಮಲ್ಲಪ್ಪ ಕಬಾಡಿ, ನಿರ್ದೇಶಕ ಫಕ್ರುದ್ದೀನ್ ಕುಂಟೋಜಿ, ಅಶೋಕ ಜ ಅಂಗಡಿ, ಶ್ರೀಶೈಲ ಹಿಪ್ಪರಗಿ, ಮಹಾಲಿಂಗಪ್ಪ ಕೋಳಿಗುಡ್ಡ, ಗುರುಪಾದ ಅಂಬಿ, ವೀರಪಾಕ್ಷಯ್ಯ ಪಂಚಕಟ್ಟಿಮಠ, ಹೊಳೆಪ್ಪ ಬಾಡಗಿ, ಅಕ್ಷತಾ ಹಲಗತ್ತಿ, ಲಕ್ಷ್ಮಿ ದಿನ್ನಿಮನಿ, ಕಾನೂನು ಸಲಹೆಗಾರರಾದ ಮಹೇಶ ಬಡಿಗೇರ ವೇದಿಕೆ ಮೇಲೆ ಉಪಸ್ಥಿತರಿದ್ದರು. 

ಮುಖಂಡರಾದ ವೆಂಕಟೇಶ ಗುಂಡಾ, ಭೀಮಶಿ ಹೊಸೂರ, ಧರೆಪ್ಪ ಸಾಂಗ್ಲಿಕರ, ಅಶೋಕ ಬ ಅಂಗಡಿ, ಮಹಾಲಿಂಗ ಹೊಸೂರ, ಈರಣ್ಣ ಹಲಗತ್ತಿ, ಎಂ ಎಸ್ ಮುಗಳಖೋಡ, ಶಿವಾನಂದ ಧೂಳಣ್ಣವರ, ವಿ ಎಸ್ ಅಂಗಡಿ, ಚನ್ನಬಸು ಹೊಸೂರ, ಮಹಾಲಿಂಗಪ್ಪ ಲಾತುರ, ಮಹಾಲಿಂಗಪ್ಪ ಬಂಡಿ, ನಿಂಗಪ್ಪ ಬಾಳಿಕಾಯಿ, ಮಹಾದೇವ ಕೋಳಿಗುಡ್ಡ, ಈರ​‍್ಪ ಅಡಕಿ, ಸಲೀಮ ಕರೋಶಿ, ಗೊಲೇಶ ಅಮ್ಮಣಗಿ, ಸಂಪತ ಕಡಪಟ್ಟಿ, ಚನ್ನಪ್ಪ ಪಟ್ಟಣಶೆಟ್ಟಿ, ಹಣಮಂತ ಬುರುಡ, ಕಲ್ಲಪ್ಪ ಚಿಂಚಲಿ, ಮನೋಹರ ಶಿರೊಳ, ಮಹಾದೇವ ಸಾವಂತ, ಸುರೇಶ ಗೋಲಭಾವಿ, ಪಂಡಿತ ಪೂಜಾರಿ, ಚಂದ್ರು ಗೊಂದಿ, ಸಂಗಪ್ಪ ಹಲ್ಲಿ, ಮಹಾದೇವ ಬರಗಿ, ಈರಣ್ಣ ಚಟ್ಟಿಮಠ, ಶ್ರೀಪಾದ ಗುಂಡಾ, ಜಮೀರ ಯಕ್ಸಂಬಿ, ಮಹಾಲಿಂಗಪ್ಪ ಸನದಿ, ಅರವಿಂದ ಮಾಲಬಸರಿ, ಶಿವಾನಂದ ಅಂಗಡಿ, ಎಂ ಆರ್ ತೇರದಾಳ, ಮಹಾಲಿಂಗಪ್ಪ ಕಲ್ಯಾಗೋಳ, ಮಹಾದೇವ ಕಡಬಲ್ಲವರ, ಮಹೇಶ ಮುಕುಂದ, ಬಸು ಘಟ್ನಟ್ಟಿ,ಸ್ನೇಹಲ ಅಂಗಡಿ,ಅರುಣ ಅಂಗಡಿ, ಲಕ್ಷ್ಮಿ ಅಂಗಡಿ, ಪ್ರತಿಭಾ ಮಾರಾಪುರ, ಗುರುಬಾಯಿ ಕಬಾಡಿ, ಸಿಮಾ ಹಲ್ಲಿ, ವಿಜಯ ಜಗದಾಳ, ವಿಜಯ ಕುಳ್ಳೊಳ್ಳಿ, ಬ್ಯಾಂಕಿನ ವ್ಯವಸ್ಥಾಪಕರಾದ ಶಿವಲಿಂಗ ಗುಣದಾಳ, ವಿಷಯಗಳನ್ನು ಓದಿ ಹೇಳಿ ಟರಾವು ಅನುಮೋದನೆ ಪಡೆದರು. ಸಿಬ್ಬಂದಿಗಳಾದ ಎಸ್ ಎಂ ಹಿಕಡಿ, ಎಸ್ ಜಿ ಹುಬ್ಬಳ್ಳಿ, ಎಂ ಎಂ ಗುಜ್ಜರ, ಆಯ್ .ಎಸ್ .ಮಠದ, ಉಪಸಿಬ್ಬಂದಿ ಎಸ್ ಎಸ್ ವಾಲಿಕಾರ, ಆರ್ ಎಸ್ ಕಾಗಿ, ಎಂ ಎಸ್ ದಂಡಿನ ಸೇರಿ ಹಲವರು ಇದ್ದರು. 

ಶಿಕ್ಷಕ ನರನಗೌಡ ಉತ್ತಂಗಿ ನಿರೂಪಿಸಿ ಗುರುಪಾದ ಅಂಬಿ ವಂದಿಸಿದರು.ಎಫ್ ಹೆಚ್ ಕುಂಟೋಜಿ ಸ್ವಾಗತಿಸಿದರು.