ಚೌಡೇಶ್ವರಿ ದೇವಿಯರ ಮಹಾ ಜಾತ್ರೋತ್ಸವ
ರಾಣಿಬೆನ್ನೂರ 12: ವಾಣಿಜ್ಯ ನಗರದಲ್ಲಿ ಪ್ರತಿ ವರ್ಷದ ಸಂಪ್ರದಾಯದಂತೆ ಇಂದಿನಿಂದ ಒಂದು ವಾರಗಳ ಕಾಲ ಮೆಡ್ಲೇರಿ ರಸ್ತೆ, ಇತಿಹಾಸ ಪ್ರಸಿದ್ಧ ಶ್ರೀ ಗಂಗಾಜಲ ಚೌಡೇಶ್ವರಿ ದೇವಿಯ ಹಾಗೂ ಮಾರುತಿ ನಗರ, ತುಂಗಾಜಲ ಚೌಡೇಶ್ವರಿ ದೇವಿಯರ ಮಹಾ ಜಾತ್ರೋತ್ಸವವು ಜನವರಿ 13, ರಿಂದ ಆರಂಭವಾಗಿ 18ರವರೆಗೆ ಅತೀ ವಿಜೃಂಭಣೆಯಿಂದ ವಾರಗಳ ಕಾಲ ನಾಡಿನ ಲಕ್ಷಾಂತರ ಭಕ್ತರ ಮಧ್ಯ ಅದ್ದೂರಿಯಾಗಿ ಭಾವೈಕ್ಯತೆಯೊಂದಿಗೆ ಜರುಗಲಿದೆ. ಎಂದು ಆಯಾ ಸಮಿತಿಗಳ ಅಧ್ಯಕ್ಷರು ಮತ್ತು ಧರ್ಮದರ್ಶಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಐತಿಹಾಸಿಕ ಪರಂಪರೆಯಂತೆ ಗ್ರಾಮ ದೇವತೆಗಳ ಎರಡು ಜಾತ್ರೆಗಳ ಆಚರಣೆಗೆ ಭಕ್ತರು ಕಾತುರಗೊಂಡಿದ್ದು ಕ್ಷಣಗಣನೆ ಎದುರಿಸುತ್ತಿದ್ದಾರೆ.ಈಗಾಗಲೇ ಜಾತ್ರೆ ಆರಂಭಕ್ಕೆ ಸಕಲ ಸಿದ್ಧತೆಗಳಾಗಿವೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ-ತಾಲೂಕ ಆಡಳಿತ ಮತ್ತು ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.
ಗಂಗಾಜಲ ಶ್ರೀ ಚೌಡೇಶ್ವರಿ ದೇವಿ :-
ಜನವರಿ 13,2025 ರ ಸೋಮವಾರ ಸಂಜೆ, ತನ್ನ ಮೂಲ ಸ್ಥಾನ ತಳವಾರಗಲ್ಲಿಯಲ್ಲಿರುವ, ದೇವಸ್ಥಾನದಿಂದ, ಪುರ ಜನರ ಸಮರ್ಿಸುವ ಪೂಜೆಯೊಂದಿಗೆ, ಬಾಜಾ ಭಜಂತ್ರಿ ವಿವಿಧ ವಾದ್ಯ ತಂಡಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ಹೊರಟು, ನಗರದ ಪ್ರಮುಖ ಬೀದಿಗಳಲ್ಲಿ ರಾತ್ರಿಯೆಲ್ಲಾ ಸಂಚರಿಸಿ ಶ್ರೀದೇವಿಯು ಭಕ್ತರಿಗೆ ತನ್ನ ದರ್ಶನಾಶೀರ್ವಾದ ಕೊಡುವಳು, ಮಂಗಳವಾರ ಬೆಳಗಿನ ಜಾವ, ಗಂಗಾಜಲದಲ್ಲಿರುವ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳುವಳು.
ಮಂಗಳವಾರ ಶ್ರೀದೇವಿಗೆ ಉಡಿತುಂಬುವ, ನೈವೇದ್ಯ ಹರಕೆ ಸಲ್ಲಿಸುವರು.ತುಂಗಾಜಲ ಶ್ರೀ ಚೌಡೇಶ್ವರಿ :- ಇಲ್ಲಿನ ಮಾರುತಿ ನಗರದ ಬೆಂಚಿ ತುಂಗಾಜಲ ಚೌಡೇಶ್ವರಿ ದೇವಿ ಎಂದೇ ಪ್ರಸಿದ್ಧಿ ಹೊಂದಿರುವ, ಶ್ರೀ ತುಂಗಾಜಲ ಚೌಡೇಶ್ವರಿ ದೇವಿಯ ಮೆರವಣಿಗೆಯು, ಸೋಮವಾರ ಮುಂಜಾನೆ10 ಗಂಟೆಗೆ ಹೊರಟು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಂಜೆ ಮರಡಿ ಬಣಕಾರ ಜಮೀನಿನಲ್ಲಿ ಬೃಹದಾಕಾರವಾಗಿ ನಿರ್ಮಾಣಗೊಂಡಿರುವ ಮಹಾದೇವಾಲಯದ ಸಭಾ ವೇದಿಕೆಯಲ್ಲಿ ಶ್ರೀ ತುಂಗಾಜಲ ಚೌಡೇಶ್ವರಿಯು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪನೆಗೊಳ್ಳುವಳು
ಮಂಗಳವಾರದಿಂದ ನೈವೇದ್ಯ,ಉಡಿ ತುಂಬುವ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆದು, ನಿತ್ಯವೋ ನಾಡಿನ ಖ್ಯಾತ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎಂದು ಜಾತ್ರಾ ಉತ್ಸವ ಸಮಿತಿಯು ಪ್ರಕಟಿಸಿದ್ದು ಭಕ್ತಾದಿಗಳು ಪಾಲ್ಗೊಂಡು ಗಂಗಾಜಲ ಮತ್ತು ತುಂಗಾಜಲ ಚೌಡೇಶ್ವರಿ ದೇವಿಯ ದಿವ್ಯ ದರ್ಶನಾ ಶೀರ್ವಾದ ಪಡೆಯಬೇಕೆಂದು ಕೋರಿದ್ದಾರೆ