ಶ್ರೀಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಶೋಭಾಯಮಾನವಾದ ಪಂಚಕಳಸಗಳು
ಕೊಪ್ಪಳ 11: ಸಂಸ್ಥಾನ ಶ್ರೀಗವಿಮಠದಲ್ಲಿಂದು ದಿನಾಂಕ 11-01-2025 ರಂದು ಶನಿವಾರ ಸಂಜೆ 5 ಗಂಟೆಗೆಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಪಂಚಕಳಸಗಳು ಶೋಭಾಯಮಾನವಾದವು. ಸಾಮಾನ್ಯವಾಗಿಎಲ್ಲ ಮಠಮಾನ್ಯಗಳಿಗೆ ಒಂದೇ ಕಳಸವಿರುತ್ತದೆ. ಆದರೆ ಕೊಪ್ಪಳದ ಶ್ರೀಗವಿಮಠದ ಕರ್ತೃ ಶ್ರೀಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಐದು ಕಳಸಗಳು ಶೋಭಾಯಮಾನವಾಗಿರುತ್ತವೆ. ರಥೋತ್ಸವದ ದಿವಸಗಳು ಸಮೀಪಿಸುತ್ತಿರುವಾಗ ಈ ಐದು ಕಳಸಗಳನ್ನು ಒಂದು ವಾರದ ಮೊದಲೇ ಕೆಳಗೆ ಇಳಿಸಿಕೊಂಡು ಆಯಾಓಣಿಯದೈವದವರುಕೊಂಡೊಯ್ಯುತ್ತಾರೆ.
ನಂತರ ಆವುಗಳನ್ನು ತೊಳೆದು ತಿಕ್ಕಿ ಸ್ವಚ್ಚಗೊಳಿಸಿ ಶೃಂಗಾರಗೊಳಿಸಿ ಶ್ರೀಗವಿಮಠಕ್ಕೆ ಶ್ರಧ್ದಾ ಭಕ್ತಿಯಿಂದ ಭಜನೆ, ಡೋಲು, ಭಕ್ತಿ ಭಾವದಿಂದ ಶ್ರೀಮಠಕ್ಕೆ ತರುತ್ತಾರೆ. ಈ ಪಂಚಕಳಸಗಳನ್ನು ಆಯಾಓಣಿಯದೈವದವರು ಶ್ರೀ ಗವಿಮಠಕ್ಕೆತಂದು ಏರಿಸಿ ಪೂಜೆ ಮಾಡಿಸಿ ಪ್ರಸಾದ ಪಡೆದು ಮರಳುತ್ತಾರೆ. ಇದು ಪ್ರತಿವರ್ಷದ ಸಂಪ್ರದಾಯ ಹಾಗೂ ಪದ್ಧತಿ. ಭಕ್ತರು ಶ್ರೀಗವಿಮಠದ ಗೋಪುರಕ್ಕೆ ಏರಿಸಿದ ಐದು ಕಳಸಗಳನ್ನು ನೋಡಿ ಪುಳಕಿತರಾಗುತ್ತಾರೆ. ಜಂಗಮಾರಾಧನೆ: ಗವಿಸಿದ್ಧೇಶ್ವರ ಜತ್ರಾ ಮಹೋತ್ಸವದ ನಿಮಿತ್ಯ ಶ್ರೀಮಠದಲ್ಲಿ ಅನೇಕ ಧಾರ್ಮಿಕ ವಿಧಿ ವಿಧಾನಗಳ ಕಾರ್ಯಗಳು ಜರುಗುತ್ತವೆ.ಪಂಚ ಕಳಸಗಳ ಕಳಸಾರೋಹಣ ನಂತರಇದೇಉರಿನಎಲ್ಲಜಂಗಮಪುಂಗವರಿಗೆ ಭೂರಿ ಭೋಜನ ಪ್ರಸಾದ, ಜಂಗಮರಾಧನೆಕಾರ್ಯ ಅನೂಚಾನವಾಗಿ ನಡೆದು ಬಂದಿದೆ. ಪ್ರಸಾದದತರುವಾಯದಕ್ಷಿಣೆ ಹಾಗೂ ತಾಂಬೂಲಾಧಿಗಳನ್ನು ನೀಡಿಜಂಗಮ ಯೋಗಿಗಳ ಸಮಾರಾಧನೆಯು ಸಾಯಂಕಾಲ ನೆರವೇರಿತು.