ಲೋಕದರ್ಶನ ವರದಿ
ವಿಜಯಪುರ 30: ಇಲ್ಲಿನ ಸೈನಿಕ ಶಾಲೆಯಲ್ಲಿ ವಿಶ್ವ ಪ್ರಸಿದ್ಧ ಜಾದೂ ಮಾಂತ್ರಿಕ, ರಾಕೇಶ ರೀಗನ ಅವರು ಶುಕ್ರವಾರದಂದು ಸಂಜೆ ಜಾದೂ ಪ್ರದರ್ಶನ ಕಾರ್ಯಕ್ರಮ ನಡೆಸಿಕೊಟ್ಟರು.
ರಾಕೇಶ ರೀಗನ ಅವರು ಅನೇಕ ವಿಸ್ಮಯಕರವಾದ ಜಾದೂ ಚಮತ್ಕಾರಗಳನ್ನು ಮಾಡಿ ವಿದ್ಯಾಥರ್ಿಗಳನ್ನು ರಂಜಿಸಿದರು. ಅವರು ಪ್ರದಶರ್ಿಸಿದ ಚಮತ್ಕಾರಗಳು ಇನ್ನೊಬ್ಬರ ಮನಸ್ವನ್ನು ಓದುವ (ತಿಳಿದುಕೊಳ್ಲುವ) ಜಾದೂ ಎಲ್ಲರಿಗೂ ಇಷ್ಟವಾಯಿತು. ಈ ಕಾರ್ಯಕ್ರಮದಲ್ಲಿ ಸ್ವತ: ವಿದ್ಯಾಥರ್ಿಗಳು ಪಾಲ್ಗೊಂಡು ಸಂತೋಷಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲೆಯ ಪ್ರಾಚಾರ್ಯ, ಭಾರತೀಯ ನೌಕಾಪಡೆ ಕ್ಯಾಪ್ಟನ್ ವಿನಯ ತಿವಾರಿ ಅವರು ಜಾದೂ ಕಲೆಯನ್ನು ಪ್ರದಶರ್ಿಸಿದ ರಾಕೇಶ ರೀಗನ ಅವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಶಾಲೆಯ ಆಡಳಿತಾಧಿಕಾರಿ ಸ್ಕ್ವಾಡನರ್್ ಲೀಡರ್ ಎ. ಮುರುಳೀಧರನ್, ಉಪ ಪ್ರಾಚಾರ್ಯ ಲೆಫ್ಟ್ಟಿನೆಂಟ್ ಕಮಾಂಡರ್ ರವಿಕಾಂತ ಶುಕ್ಲಾ, ವರಿಷ್ಠಗುರು ಕೆ. ದಾಮೋದರ, ಸೈನಿಕ ಶಾಲೆಯ ಸಮಸ್ತ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.