ಮ್ಯಾಡ್ರಿಡ್ ಓಪನ್: ರೋಜರ್ ಫೆಡರರ್ಗೆ ಸುಲಭ ಜಯ


ಮ್ಯಾಡ್ರಿಡ್, ಮೇ 8  ಕಳೆದ ಮೂರು ವರ್ಷಗಳ ಬಳಿಕ ಮಣ್ಣಿನ ಅಂಗಳದಲ್ಲಿ ಆಡಿದ ವಿಶ್ವ ಶ್ರೇಷ್ಠ ಟೆನಿಸ್ ತಾರೆ ರೋಜರ್ ಫೆಡರರ್ ಮ್ಯಾಡ್ರಿಡ್ ಓಪನ್ ಎರಡನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ನ ರಿಚಡರ್್ ಗಾಸ್ಕೆಟ್ ಅವರ ವಿರುದ್ಧ ಜಯ ಸಾಧಿಸಿದರು.  

52 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸ್ವಿಜರ್ಲೆಂಡ್ ತಾರೆ 6-2, 6-3 ನೇರ ಸೆಟ್ಗಳಲ್ಲಿ ರೀಚ್ರ್ಡ್  ಅವರನ್ನು ಮಣಿಸಿದರು. 20 ಬಾರಿ ಗ್ರ್ಯಾನ್ ಸ್ಲ್ಯಾಮ್ ವಿಜೇತ 2016ರ ನಂತರ ಇದೇ ಮೊದಲ ಬಾರಿ ರೋಜರ್ ಫೆಡರರ್ ಅವರು ಮಣ್ಣಿನ ಅಂಗಳಕ್ಕೆ ಪದಾರ್ಪಣೆ ಮಾಡಿದರು.  

 ಮಣ್ಣಿನ ಅಂಗಳಕ್ಕೆ ಮರಳಿದ್ದರಿಂದ ಹೆಚ್ಚು ಖುಷಿ ಸಿಕ್ಕಿದೆ. ಮ್ಯಾಡ್ರಿಡ್ಗೆ ತುಂಬಾ ದಿನಗಳ ನಂತರ ಮರಳಿದ್ದರಿಂದ  ಹೇಳಲಾರದಷ್ಟು  ಆನಂದವಾಗುತ್ತಿದೆ. ಪಂದ್ಯದ ಮೊದಲು ಹಾಗೂ ನಂತರ ಅಭಿಮಾನಿಗಳ ಘೋಷಣೆಗಳು ಇಲ್ಲಿ ಅದ್ಭುತವಾಗಿರುತ್ತದೆ. ಹಾಗಾಗಿ ಇಲ್ಲಿಗೆ ಬರಲು ಇಷ್ಟಪಡುತ್ತೇನೆ ಎಂದು ಪಂದ್ಯದ ಬಳಿಕ ರೋಜರ್ ಹೇಳಿದರು.  ಮೊದಲ ಸೆಟ್ನಲ್ಲಿ ಫೆಡರರ್ ಬಹುಬೇಗ ಸುಲಭವಾಗಿ ಜಯಿಸಿದರು.  ಕಾಲಿನ ಗಾಯಕ್ಕೆ ಒಳಗಾದ ಬಳಿಕ ರಿಚಡರ್್ ಅವರ ಪಾಲಿಗೆ ಈ ಟೂರ್ ಎರಡನೇಯದಾಗಿದೆ. ಎರಡನೇ ಸೆಟ್ನಲ್ಲೂ ವಿಶ್ವ ಶ್ರೇಷ್ಠ ಆಟಗಾರನ ಎದುರು ಪುಟಿದೇಳುವಲ್ಲಿ ರೀಚ್ರ್ಡ  ವಿಫಲರಾದರು. 3-6 ಅಂತರದಲ್ಲಿ ಸೋಲು ಅನುಭವಿಸಿದರು.  

 ಗಾಯದಿಂದಾಗಿ ಹಲವು ತಿಂಗಳುಗಳ ಬಳಿಕ ರೀಚ್ರ್ಡ್  ಗಾಸ್ಕೆಟ್ ಅಂಗಳಕ್ಕೆ  ಮರಳಿರುವುದು ಒಳ್ಳೆಯ ಬೆಳವಣಿಗೆ. ಮ್ಯಾಡ್ರಿಡ್ನಲ್ಲಿ ನಮ್ಮಿಬ್ಬರ ನಡುವೆ ನಡೆದ ಈ ಪಂದ್ಯ ವಿಶೇಷತೆಯಿಂದ ಕೂಡಿತ್ತು. ಎಂದು ಫೆಡರರ್ ಹೇಳಿದರು.