ಜಿಲ್ಲಾಡಳಿತದಲ್ಲಿ ಮಡಿವಾಳ ಮಾಚಿದೇವ ಜಯಂತಿ
ಗದಗ 1: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿಯನ್ನು ಶನಿವಾರ ರಂದು ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ದಲ್ಲಿ ಆಚರಿಸಲಾಯಿತು.ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಮಾತನಾಡಿ, 12ನೇ ಶತಮಾನದ ಶರಣರು ತಮ್ಮ ವಚನದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ವಚನಗಳ ಅಸ್ತ್ರದಿಂದ ತಿದ್ದಲು ಶ್ರಮಿಸಿದ್ದಾರೆ. 12ನೇ ಶತಮಾನದ ಮಡಿವಾಳ ಮಾಚಿದೇವರು ಮನುಕುಲದ ಕಲ್ಯಾಣಕ್ಕಾಗಿ ಶ್ರಮಿಸಿದವರಲ್ಲಿ ಒಬ್ಬರು. ವಚನದ ಸಾರವನ್ನು ಅರಿತು ಸಂದೇಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.ಮಡವಾಳ ಮಾಚಿದೇವರು ಕಾಯಕ ನಿಷ್ಠರು. ಅವರೊಬ್ಬ ಮಹಾನ ಅವತಾರ ಪುರುಷರಾಗಿ ಸಮಾಜದ ವಳಿತಿಗಾಗಿ ಶ್ರಮಿಸಿದ ಶರಣರಾಗಿದ್ದಾರೆ. ಅಚಲ ಕಾಯಕನಿಚ್ಠೆ ತನ್ನ ಕಾಯಕವೇ ಭಕ್ತಿ ಉಸಿರು ಎಂದು ನಂಬಿದ್ದರು. ಶಿವ ಶರಣರ ಹಾಗೂ ಕಾಯಕದಲ್ಲಿ ನಿಷ್ಠೆ ಉಳ್ಳವರ ಬಟ್ಟೆಗಳನ್ನು ಮಡಿಮಾಡಿ ತಲುಪಿಸುವ ಕಾರ್ಯ ಇವರದಾಗಿತ್ತು. ಅದನ್ನು ಶ್ರದ್ದೇಯಿಂದ ಮಾಡುವ ಮೂಲಕ ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂದು ಜಗತ್ತಿಗೆ ಸಾರಿದ ಮಹಾಮಹಿಮ ಎಂದು ಬಣ್ಣಿಸಿದರು.ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಸಿದ್ಧಲಿಂಗೇಶ ಸಜ್ಜನ ಶೆಟ್ಟರ್ ಉಪನ್ಯಾಸ ಸಕರಾಗಿ ಮಾತನಾಡಿ, ಕಲ್ಯಾಣ ಲದಲಿದ್ದ ಶರಣರೊಂದಿಗೆ ಹಲವಾರು ವಚನಗಳನ್ನು ರಚಿಸಿ ಕಾಯಕದ ಮಹತ್ವವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.ವೀರನಿಷ್ಠೆಯ ಶರಣನೀತ, ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ’ದೇವರ ಹಿಪ್ಪರಗಿಯಲ್ಲಿ’ ಪರುವತಯ್ಯ -ಸುಜ್ಞಾನವ್ವ ದಂಪತಿಗಳ ಪುತ್ರ ರತ್ನ -ಶರಣ ಕಿರಣ ಮಡಿವಾಳ ಮಾಚಿದೇವರು. ದೇವರ ಹಿಪ್ಪರಿಗೆ ಇವರ ಜನ್ಮಸ್ಥಳ. ಕಾರ್ಯಕ್ಷೇತ್ರ ಕಲ್ಯಾಣ. ಆರಾಧ್ಯದೈವ ಕಲ್ಲಿನಾಥ. ಕಾವ್ಯ ಪುರಾಣಗಳಲ್ಲಿ ಇವರನ್ನು ವೀರಭದ್ರನ ಅವತಾರವೆಂದು ಬಣ್ಣಿಸಲಾಗಿದೆ. ಶಾಸನ ಶಿಲ್ಪಗಳಲ್ಲಿಯೂ ಇವರಿಗೆ ಎಡೆ ಲಭಿಸಿದೆ. ಶರಣರ ಬಟ್ಟೆಗಳನ್ನು ತೊಳೆಯುವುದು (ಶುಚಿ ಮಾಡುವುದು) ಇವರ ಕಾಯಕವಾಗಿತ್ತು ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಹೆಚ್ಚವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ಬಿ. ಸಂಕದ, ಜಿ.ಪಂ ಉಪಕಾರ್ಯದರ್ಶಿ ಸಿ ಆರ್ ಮುಂಡರಗಿ, ಜಿಲ್ಲಾ ಖಜಾನೆ ಉಪನಿರ್ದೇಶಕ ಹರಿನಾಥ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ, ಸಮಾಜದ ಗಣ್ಯರು, ಹಿರಿಯರು ಹಾಜರಿದ್ದರು.ಪ್ರಾಧ್ಯಾಪಕ ಬಾಹುಬಲಿ ಜೈನರ ಕಾರ್ಯ ಕ್ರಮ ನಿರ್ವಹಿಸಿದರು.