ಖಂಡಾಲಾ ಅಪಘಾತದಲ್ಲಿ ಮೃತಪಟ್ಟ ಮದಭಾವಿ ತಾಂಡಾದ ಕುಟುಂಬಸ್ಥರಿಗೆ ಶೀಘ್ರವೇ ಪರಿಹಾರ ಮಂಜೂರು : ಕುಮಾರಸ್ವಾಮಿ

ಲೋಕದರ್ಶನ ವರದಿ                                      

ವಿಜಯಪುರ, 25 : ಮಹಾರಾಷ್ಟ್ರದ ಖಂಡಾಲಾ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿರುವ  ವಿಜಯಪುರ ತಾಲೂಕಿನ ಮದಭಾವಿ ಲಂಬಾಣಿ ತಾಂಡಾ ನಂ-1 ರ  ಕುಟುಂಬಸ್ಥರಿಗೆ ಇಂದು ಭೇಟಿ  ಮಾಡಿ  ಸಾಂತ್ವನ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬದ ವಾರಸುದಾರರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಶೀಘ್ರವೇ ಪರಿಹಾರ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. 

ಸೋಮವಾರ ಮದಭಾವಿ ತಾಂಡಾಕ್ಕೆ ಭೇಟಿ ನೀಡಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಸ್ ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರ ನೋವು ತಮಗೆ ಅರಿವಿದೆ. ಈ ಹಿನ್ನಲೆಯಲ್ಲಿ ಇಂದು ಖುದ್ದಾಗಿ ಈ ಗ್ರಾಮಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ನೀಡಿದ್ದು, ಕುಟುಂಬಸ್ಥರಿಗೆ ಅವಶ್ಯಕ ಎಲ್ಲ ನೆರವನ್ನು ಒದಗಿಸಲಾಗುವುದು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಶೀಘ್ರವೇ ಪರಿಹಾರ ಮಂಜೂರು ಮಾಡುತ್ತೇನೆ ಅವರ ಕುಟುಂಬದ ಸಮಗ್ರ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. 

ಅಪಘಾತದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡ ಸಂದರ್ಭದಲ್ಲಿ ಮಕ್ಕಳು ದುಖದಲ್ಲಿ ಅಳುವ ದೃಶ್ಯವನ್ನು ಗಮನಿಸಿದೆ. ಒಂದೇ ಕುಟುಂಬದಿಂದ ಹಲವು ಸದಸ್ಯರನ್ನು  ಕಳೆದುಕೊಂಡ ದುಖ ಕುಟುಂಬಸ್ಥರಲ್ಲಿದ್ದು, ಮೃತಪಟ್ಟವರ ಕುಟುಂಬದ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಈ ಹಿನ್ನಲೆಯಲ್ಲಿ ಈ ಗ್ರಾಮ ಸೇರಿದಂತೆ ಅಕ್ಕ-ಪಕ್ಕದ ಗ್ರಾಮಗಳನ್ನು ದತ್ತು ಪಡೆಯುವ ಮೂಲಕ ಈ ಭಾಗದ ಬಡ ಲಂಬಾಣಿ ತಾಂಡಾ ಮತ್ತು ಇತರ ಸಮಾಜದ ಬಡ ಜನರನ್ನು ಆಥರ್ಿಕವಾಗಿ ಸಬಲರನ್ನಾಗಿ ಮಾಡುವ ಸದುದ್ದೇಶ ಹೊಂದಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಗುಳೇ  ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

ಲಂಬಾಣಿ ತಾಂಡಾ ಇತರೆ ಸಮಾಜದ ಬಡ ಕುಟುಂಬಗಳ ಮಹಿಳೆಯರು ಮತ್ತು ಯುವಜನಾಂಗದ ಅನುಕೂಲಕ್ಕಾಗಿ ಗುಡಿ ಕೈಗಾರಿಕೆ ಉತ್ತೇಜಿಸಲು ಸಕರ್ಾರ ಎಲ್ಲ ರೀತಿಯ ನೆರವು ಒದಗಿಸಲಿದೆ. ಗುಳೆ ಹೋಗುವುದನ್ನು ತಪ್ಪಿಸುವ ದೃಷ್ಟಿಯಿಂದ ಹಾಗೂ ಬಡ ಹೆಣ್ಣುಮಕ್ಕಳ ಹಾಗೂ ಯುವಕರ ಆಥರ್ಿಕ ಸಬಲತೆಗಾಗಿ ಗುಡಿ ಕೈಗಾರಿಕೆಗಳಾದ ಮೇಣದ ಬತ್ತಿ ತಯಾರಿಕೆ, ಟೇಲರಿಂಗ್, ಕುರಿ-ಮೇಕೆ ಸಾಕಾಣಿಕೆ, ಹೈನುಗಾರಿಕೆಗೆ ಅವಶ್ಯಕ ಪ್ರೊತ್ಸಾಹ ನೀಡಲಾಗುವುದು. 

ಈ ಭಾಗದ 10-15 ಹೆಣ್ಣು ಮಕ್ಕಳು ಸೇರಿಕೊಂಡು ಗುಂಪುಗಳನ್ನು ರಚಿಸಿಕೊಂಡು ಗುಡಿ ಕೈಗಾರಿಕೆಯಡಿ ಕೆಲಸಕ್ಕೆ ಮುಂದಾಗಬೇಕು. ಸಕರ್ಾರದಿಂದ ಸಬ್ಸಿಡಿ ರೂಪದಲ್ಲಿ ಅಥವಾ ಬಡ್ಡಿ ರಹಿತ ಸಾಲದ ವ್ಯವಸ್ಥೆ ಕಲ್ಪಿಸಲಿದೆ. ಅದರಂತೆ 3 ತಿಂಗಳುಗಳ ಕಾಲ ಅಧಿಕಾರಿಗಳನ್ನು ನೇಮಿಸಿ ತರಬೇತಿಗೊಳಿಸುವ ವ್ಯವಸ್ಥೆ ಸಹ ಮಾಡಲಾಗುವುದು. ತಯಾರಿಸಿದ ಪದಾರ್ಥಗಳಿಗೆ ಮಾರಾಟ ವ್ಯವಸ್ಥೆ ಸಹ ಕಲ್ಪಿಸಲಾಗುವುದೆಂದ ಅವರು, ಈ ರೀತಿಯ ಪೈಲಟ್ ಯೋಜನೆ ಈ ಭಾಗದಿಂದಲೇ ಆರಂಭಿಸುವಂತೆ ತಿಳಿಸಿದ ಅವರು, ರಾಜ್ಯದ ಇತರ ಜಿಲ್ಲೆಗಳಿಗೆ ಇದು ಮಾದರಿಯಾಗಬೇಕು. ಈ ಯೋಜನೆ ಇಲ್ಲಿ ಯಶಸ್ವಿಯಾದರೆ  ಅದನ್ನು ನಂತರ  ರಾಜ್ಯದ ಇತರ ಕಡೆಗಳಲ್ಲಿಯೂ ಅನುಷ್ಠಾನಗೊಳಿಸಲಾಗುವುದೆಂದು ಹೇಳಿದರು. 

ತಾಂಡಾ ನಿವಾಸಿಗಳಿಗೆ ಉದ್ಯೋಗ ಕಯಗೊಳ್ಳಲು ಸಕರ್ಾರ ಎಲ್ಲ ರೀತಿಯ ನೆರವು ಒದಗಿಸಲು ಸಂಕಲ್ಪ ಮಾಡಿದೆ. ಈ ಯೋಜನೆ ಪರಿಣಾಮಕಾರಿ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಸವಾಲಾಗಿ ಸ್ವೀಕರಿಸುವಂತೆ ತಿಳಿಸಿದ ಅವರು, ಗ್ರಾಮದಲ್ಲಿರುವ ಕುಟುಂಬಗಳ ಸಂಖ್ಯೆ, ಭೂಮಿ ಇಲ್ಲದವರ ಕುಟುಂಬಗಳ ಸಂಖ್ಯೆ ಮತ್ತು ಗುಳೆ ಹೋಗುವವರ ಕುರಿತ ಜನಪ್ರತಿನಿಧಿಗಳೊಂದಿಗೆ ಚಚರ್ಿಸಬೇಕು. ರಾಜಕೀಯ ಬೇಧ-ಭಾವ ಮರೆತು ಎಲ್ಲರೂ ಈ ಭಾಗದ ಜನರಿಗೆ ನೆರವಾಗಬೇಕು. ಜೀವನದಲ್ಲಿ ಗ್ರಾಮಸ್ಥರು ಗಟ್ಟಿ ನಿಧರ್ಾರ ಕೈಗೊಳ್ಳುವ ರೀತಿಯಲ್ಲಿ ಸಬಲರನ್ನಾಗಿಸಬೇಕು. ಸಕರ್ಾರದ ಮಟ್ಟದಲ್ಲಿ ಯಾವುದೇ ರೀತಿಯ ಹಣದ ಕೊರತೆ ಇಲ್ಲ ಎಂದ ಮುಖ್ಯಮಂತ್ರಿಗಳು, ಸಕರ್ಾರದಿಂದ ಕೊಡಮಾಡುವ ಅನುದಾನದ ಸದ್ಬಳಕೆಗೆ ಮತ್ತು ಸದುಪಯೋಗಕ್ಕೆ ತಿಳಿಹೇಳುವ ಕಾರ್ಯವನ್ನು ಸಹ ಮಾಡುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದರು. 

ಈ ಗ್ರಾಮದ ಹಿರಿಯರು ಕೂಡ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾಗಬೇಕು. ಮುಗ್ಧ ಜನರನ್ನು ಬದುಕಿಸುವ ನಿಟ್ಟಿನಲ್ಲಿ ಬಡವರಿಗೆ ಯಾವ ಕಾರ್ಯಕ್ರಮ ನೀಡಬೇಕೆಂಬ ಬಗೆ ಚಿಂತನೆ ನಡೆಸಬೇಕು. ಸುತ್ತಮುತ್ತಲಿನ ಹಳ್ಳಿಗರು, ಒಗ್ಗಟ್ಟಾಗೆಬೇಕು. ಇಲ್ಲಿ ಜಾರಿಗೊಳಿಸುವ ಪೈಲಟ್ ಯೋಜನೆಗೆ ಎಲ್ಲ ರೀತಿಯ ನೆರವು ನೀಡಲು ತಾವು ಜೊತೆಯಲ್ಲಿರುವುದಾಗಿ ತಿಳಿಸಿದ ಅವರು, ನಿಮ್ಮ ಕಷ್ಟ ಸುಖದಲ್ಲಿ ಸಹಭಾಗಿಯಾಗುವುದಾಗಿ ಹೇಳಿದರು. 

  ಪೈಲಟ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಪ್ರತಿದಿನದ ಮಾಹಿತಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಅವರು, ಈ ಭಾಗದ ಮಕ್ಕಳಿಗಾಗಿರುವ ಶೈಕ್ಷಣಿಕ ಸವಲತ್ತು, ವಿವಿಧ ಶಾಲೆಗಳ ವ್ಯವಸ್ಥೆ ಸೇರಿದಂತೆ ಇನ್ನಿತರ ವಿಷಯಗಳ ವರದಿ ಸಹ ಸಲ್ಲಿಸುವಂತೆ ತಿಳಿಸಿ, ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಈ ಗ್ರಾಮಕ್ಕೆ ಭೇಟಿ ಮಾಡಿ, ಗ್ರಾಮಸ್ಥರೊಂದಿಗೆ ಚಚರ್ಿಸುವುದಾಗಿ ತಿಳಿಸಿದರು. 

ಈ ಭಾಗದಲ್ಲಿ ಕೆರೆಗಳಿಗೆ ನೀರು ತುಂಬಲು ಹಾಗೂ ಮುಂದಿನ ಮೇ ಮಾಹೆವರೆಗೆ ಕುಡಿಯುವ ನೀರಿನ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು, ಟ್ಯಾಂಕರ್ ಮೂಲಕ ಹಾಗೂ ಇತರೆ ಅವಶ್ಯಕ ನೀರು ಪೂರೈಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ ಅವರು, ಅವೈಜ್ಞಾನಿಕ ಕೆರೆಗಳ ಭತರ್ಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಪ್ರತಿ ವಿಧಾನಸಭಾ ಕ್ಷೇತ್ರವಾರು ಗಮನಕ್ಕಿದ್ದು, ವಿಜಯಪುರ ಜಿಲ್ಲೆ ಹಾಗೂ ಬರಡು ಭೂಮಿಗೆ ಮತ್ತು ರೈತರ ಕೃಷಿಗಾಗಿ ಅವಶ್ಯಕ ನೆರವನ್ನು ಒದಗಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. 

ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ, ಶಮಾಜಿ ಶಾಸಕ ಎಸ್.ಕೆ.ಬೆಳ್ಳುಬ್ಬಿ, ಶಾಸಕ ದೇವಾನಂದ ಚವ್ಹಾಣ, ಬೆಳಗಾವಿ ವಿಭಾಗದ ಆರಕ್ಷಕ ಮಹಾನಿರೀಕ್ಷಕ ರೇವಣ್ಣ, ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದಶರ್ಿ ಕೃಷ್ಣಯ್ಯ, ಅವರು ಉಪಸ್ಥಿತರಿದ್ದರು