ಧಾರವಾಡ31: ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ವಾಹನ ಚಾಲಕರಾಗಿ ಕಳೆದ 32 ವರ್ಷಗಳಿಂದ ಬೆಳಗಾವಿ, ಹುಬ್ಬಳ್ಳಿ ಮತ್ತು ಧಾರವಾಡ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಎಸ್. ಪೆಂಡಾರಿ ಇವರು ಇಂದು ವಯೋನಿವೃತ್ತಿ ಹೊಂದಿದ್ದಾರೆ.
ಅವರನ್ನು ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಧಾರವಾಡ ಮೀಡಿಯಾ ಕ್ಲಬ್ ವತಿಯಿಂದ ಸನ್ಮಾನಿಸಿ ಬೀಳ್ಕೋಡಲಾಯಿತು. ಈ ಸಂದರ್ಭದಲ್ಲಿ ಅವರನ್ನು ಕುರಿತು ವಾತರ್ಾ ಇಲಾಖೆಯ ಸಿಬ್ಬಂದಿಗಳು ಹಾಗೂ ಕ್ಲಬ್ನ ಸದಸ್ಯರುಗಳು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಾತರ್ಾ ಸಹಾಯಕಾಧಿಕಾರಿ ಸುರೇಶ್ ಹಿರೇಮಠ, ಪ್ರಥಮ ದಜರ್ೆ ಸಹಾಯಕ ಸಿ.ಬಿ.ಭೋವಿ, ಶೀಘ್ರಲಿಪಿಗಾರರಾದ ಪವಿತ್ರಾ ಬಾರಕೇರ್ ಸೇರಿದಂತೆ ಸಂಗಪ್ಪ ಯರಗುದ್ದಿ, ಎ.ಎಚ್. ನದಾಫ್, ಶಿವಾನಂದ ಭೋವಿ, ಬಸವರಾಜ ಕಾಳೆ, ಅಕ್ಷಯ್ ದೊಡ್ಡಮನಿ, ಛಾಯಾಗ್ರಾಹಕರಾದ ಮಹಾದೇವ ಪಾಟೀಲ್, ಮಿಲಿಂದ್ ಪೀಸೆ, ರಾಮಚಂದ್ರ ಕುಲಕಣರ್ಿ ಹಾಗೂ ಪತ್ರಕರ್ತರಾದ ಮುಸ್ತಫಾ ಕುನ್ನಿಭಾವಿ, ರಾಜು ಕರಣಿ, ಜಾವಿದ್ ಅಧೋನಿ, ಪ್ರಶಾಂತ ದಿನ್ನಿ, ಡಿ.ವಿ. ಕಮ್ಮಾರ ಸೇರಿದಂತೆ ಪತ್ರಕರ್ತರು ಹಾಗೂ ಇನ್ನಿತರರು ಭಾಗವಹಿಸಿದ್ದರು