ಲೋಕದರ್ಶನ ವರದಿ
ವಿಜಯಪುರ 10: ವಿಜಯಪುರ ನಗರದ ಹೊರವಲಯದ ಭೂತನಾಳ ಕೆರೆಯನ್ನು ಲಾಲ್ಬಾಗ್ ಮಾದರಿಯಲ್ಲಿ 13ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪರಿಸಲು ಕ್ರಮ ಜರುಗಿಸಲಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ವಚನಪಿತಾಮಹ ಡಾ.ಫ.ಗು.ಹಳಕಟ್ಟಿಯವರು ವಿಜಯಪುರ ನಗರಸಭೆ ಅಧ್ಯಕ್ಷರಾಗಿದ್ದಾಗ, ನಗರಕ್ಕೆ ಕುಡಿಯುವ ನೀರಿನ ಮೂಲವಾಗಿ 107ವರ್ಷಗಳ ಹಿಂದೆ ಸರ್ ಎಂ.ವಿಶ್ವೇಶ್ವರಯ್ಯನವರು ಈ ಕೆರೆಗೆ ಸ್ಥಳ ಗುರುತಿಸಿದ್ದರು. ಕಳೆದ 100ವರ್ಷಗಳಿಂದ ನಗರದ ಕುಡಿಯುವ ನೀರಿನ ಅಧಾರವಾಗಿರುವ 250ಎಕರೆ ಪ್ರದೇಶದ ಈ ಕೆರೆಯನ್ನು ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ 2ವರ್ಷಗಳ ಹಿಂದೆ ಇಲಾಖೆಯಿಂದ ಹೂಳು ತೆಗೆದು ಸ್ವಚ್ಛಗೊಳಿಸಿ, ಕೆರೆಯ ಗಡಿಯನ್ನು ಗುರುತಿಸಿ, ಸುತ್ತಲೂ ಬಂಡ್ ನಿಮರ್ಾಣ ಮಾಡಲಾಗಿದೆ.
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಂಗ್ರಹಗೊಂಡಿರುವ ಕೆರೆ ಸಂರಕ್ಷಣಾ ಶುಲ್ಕವನ್ನು ಭೂತನಾಳ ಕೆರೆ ಅಭುವೃದ್ಧಿಗೆ ಬಳಸಿಕೊಳ್ಳಲಾಗುತ್ತಿದ್ದು, ಈಗಾಗಲೇ ಭೂತನಾಳ ಕೆರೆಯ ಆವರಣದ 8.12ಎಕರೆ ಪ್ರದೇಶವನ್ನು ಪ್ರವಾಸಿಗರಿಗಾಗಿ ಅಭಿವೃದ್ಧಿ ಪಡಿಸಲು, 9.13ಕೋಟಿಗಳ ಅಂದಾಜು ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಹಾಗೂ ಕಾಮಗಾರಿಯನ್ನು ಮಹಾನಗರ ಪಾಲಿಕೆಗೆ ವಹಿಸಲಾಗಿದ್ದು, ಅರ್ಧದಷ್ಟು ಮೊತ್ತವನ್ನು ಮೊದಲನೇಯ ಕಂತಿನಲ್ಲಿ ರೂ.4.56ಕೋಟಿಗಳನ್ನು ಪಾಲಿಕೆಗೆ ದಿ.04 ರಂದು ಬಿಡುಗಡೆ ಮಾಡಲಾಗಿದೆ ಈಗಾಗಲೇ ನೀಲನಕ್ಷೆ ಸಿದ್ದಪಡಿಸಿದಂತೆ ರೂ.9.13ಕೋಟಿ ವೆಚ್ಚದಲ್ಲಿಲ್ ನೀರಿನ ಕಾರಂಜಿಗಳು, ಚಿಣ್ಣರ ಆಟದ ಮೈದಾನ, ಆಹಾರ ಮಳಿಗೆಗಳು, ಶೌಚಾಲಯಗಳು, ಪ್ರವೇಶದ್ವಾರ, ಟಿಕೆಟ್ ಕೌಂಟರ್ ಮತ್ತು ಕಛೇರಿ, ಮೆಡಿಟೇಶನ್ ಹಾಲ್, ಕುಡಿಯುವ ನೀರುಸೌಲಭ್ಯ, ಸವರ್ಿಸ್ ರಸ್ತೆಗಳು ಹಾಗೂ ಉತ್ತಮ ಉದ್ಯಾನವನ ನಿಮರ್ಿಸಲಾಗುವುದು.
ಅಲ್ಲದೇ ಹೆಚ್ಚುವರಿಯಾಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 4ಕೋಟಿ ಮೊತ್ತವನ್ನು ನೀಡಲಾಗುತ್ತುದೆ, ಅದರಲ್ಲಿ ಕೆರೆಯ ಬದಿಯಲ್ಲಿ ವಾಕಿಂಗ್ ಟ್ರ್ಯಾಕ್, ಸೋಲಾರ್ ದೀಪಗಳು, ಸೂಚನಾ ಫಲಕಗಳು, ಶಿಲ್ಪಕಲೆಗಳ ಉದ್ಯಾನ, ರಕ್ಷಣಾ ಗೋಡೆ ಇತ್ಯಾದಿಗಳನ್ನು ನಿಮರ್ಿಸಲು ನೀಲನಕ್ಷೆಯನ್ನು ಸಿದ್ದಪಡಿಸಲಾಗುತ್ತಿದೆ.
ಈಗಾಗಲೇ ಆದಿಲ್ಶಾಹಿ ಕಾಲದ ಐತಿಹಾಸಿಕ ಬೇಗಂತಲಾಬ್ನ್ನು ಇದೇ ಮಾದರಿಯಲ್ಲಿ ಸಂಪೂರ್ಣ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಅದೇ ರೀತಿ ನಗರದ ಉತ್ತರ ಭಾಗದ ಜನತೆಗಾಗಿ ಶತಮಾನಗಳ ಇತಿಹಾಸವಿರುವ ವಿಜಯಪುರ ನಗರದ ಭೂತನಾಳ ಕೆರೆ ಇಂದು ತನ್ನ ಗತವೈಭವ ಮರಳಿ ಪಡೆದಿದ್ದು, ಕೃಷ್ಣೆಯ ನೀರಿನಿಂದ ತುಂಬಿನಿಂತಿದೆ. ಈ ಕೆರೆಯನ್ನು ನಗರದ ಸಾರ್ವಜನಿಕರಿಗೆ, ಬೆಳಗಿನ ಹಾಗೂ ಸಂಜೆಯ ವಾಯುವಿಹಾರಕ್ಕೆ ಹಗೂ ನಗರಕ್ಕೆ ಭೇಟಿ ನೀಡುವ ಜನರಿಗಾಗಿ ಸುಂದರ ಪ್ರವಾಸಿ ತಾಣ ಮಾರ್ಪಡಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.