ದಿಶಾ ಸಮಿತಿ ಸಭೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಸೂಚನೆ ನಿಗದಿತ ಆರ್ಥಿಕ ಭೌತಿಕ ಗುರಿ ಸಾಧಿಸಿ

MP Basavaraja Bommai instructed in the Disha Committee meeting to achieve the set economic and phys

ದಿಶಾ ಸಮಿತಿ ಸಭೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಸೂಚನೆ ನಿಗದಿತ ಆರ್ಥಿಕ ಭೌತಿಕ ಗುರಿ ಸಾಧಿಸಿ, 

ಗದಗ. 21: ಸರ್ಕಾರದಿಂದ ವಿವಿಧ ಇಲಾಖೆಗಳಿಗೆ ಯೋಜನೆಗಳ ಅನುಷ್ಠಾನದಲ್ಲಿ ನಿಗದಿಪಡಿಸಿದ ಆರ್ಥಿಕ ಹಾಗೂ ಭೌತಿಕ ಗುರಿ ಸಾಧಿಸಬೇಕು. ಜನಸಾಮಾನ್ಯರಿಗೆ ಯೋಜನೆಯ ಫಲಪ್ರದ ತಲುಪಬೇಕು ಎಂದು ಸಂಸದ ಬಸವರಾಜ್ ಬೊಮ್ಮಾಯಿ ಅವರು ಸೂಚಿಸಿದರು. ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜರುಗಿದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸರಿಯಾದ ಅನುಷ್ಠಾನ ಆಗಲಿ ಅರ್ಹರಿಗೆ ಯೋಜನೆಗಳು ತಲುಪಲಿ ಎಂದರು. ನಿವೇಶನ ಹಂಚಿಕೆಯ ಕುರಿತಂತೆ ಕಳೆದ ಬಾರಿ ಸಭೆಯಲ್ಲಿ ತಿಳಿಸಿದಂತೆ ಈವರೆಗೆ ಎಷ್ಟು ನಿವೇಶನಗಳನ್ನು ಹಂಚಿ ಎಷ್ಟು ಉಳಿದಿವೆ ಮಾಹಿತಿ ನೀಡುವಂತೆ ಸಂಸದರು ಸೂಚಿಸಿದರು. ಇದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಶರಣಪ್ಪ ಅವರು ಮಾಹಿತಿ ನೀಡುತ್ತಿದ್ದಂತೆ, ಅಸಮರ​‍್ಕ ಮಾಹಿತಿಯೋಂದಿಗೆ ಸಭೆ ಹಾಜರಾಗುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು. ಕಳೆದ 10 ವರ್ಷದಲ್ಲಿ 4548 ಮನೆ ಅನುಮೋದನೆಯಾಗಿದ್ದು ಪೂರ್ಣವಾಗಿಲ್ಲ. ಯಾವ ತರಹ ಕೆಲಸ ನಿರ್ವಹಿಸುತ್ತೀರಿ? ಈ ವಿಳಂಬಕ್ಕೆ ಹೊಣೆ ಯಾರು ಎಂದು ಸಂಸದರು ಅಧಿಕಾರಿಗಳನ್ನು ಪ್ರಶ್ನಿಸಿದರು. ಮುಂಡರಗಿಯಲ್ಲಿ 385 ನರಗುಂದದಲ್ಲಿ 129 ಮನೆಗಳು ಪೂರ್ಣವಾಗಿಲ್ಲ ಈ ಕುರಿತಂತೆ ಅಧಿಕಾರಿಗಳು, ಸಂಬಂಧಿಸಿದ ಶಾಸಕರ ಗಮನಕ್ಕೆ ತಂದು ಚರ್ಚೆ ಮಾಡಿದ್ದಿರಿ ಎಂದು ಕೇಳಿದರು. ಅಧಿಕಾರಿ ವರ್ಗ ಸರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಜನಸಾಮಾನ್ಯರಿಗೆ ಯೋಜನೆಗಳು ಸುಲಭವಾಗಿ ತಲುಪಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಗದಗ ಬೆಟಗೇರಿ ಅವಳಿ ನಗರದ ನೀರ ಸರಬರಾಜು ಕುರಿತಂತೆ ಪೌರಾಯುಕ್ತ ರಾಜಾರಾಮ್ ಪವಾರ್ ಅವರು ಮಾಹಿತಿ ನೀಡುತ್ತಾ ನಗರದಲ್ಲಿ 5-6 ದಿನಕ್ಕೊಮ್ಮೆ ನೀರು ನೀಡಲಾಗುತ್ತದೆ.  ಪೈಪ್ ಲೈನ್, ವಾಲ್ ಅಳವಡಿಕೆ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿದ್ದೇವೆ ಎಂದು ಸಭೆಗೆ ಮಾಹಿತಿ ಒದಗಿಸಿದರು. ಇದಕ್ಕೆ ಪ್ರತಿಕ್ರಿಸಿದ ಸಂಸದ ಬಸವರಾಜ್ ಬೊಮ್ಮಾಯಿ ಅವರು ಗದಗ ಜನ ಸಹನೆ ಉಳ್ಳವರು ಹಾಗೂ ಒಳ್ಳೆಯವರು. ನೀವು 15 ದಿನಕ್ಕೊಮ್ಮೆ ನೀರು ಬಿಡುತ್ತಿರುವುದು ನನ್ನ ಗಮನಕ್ಕಿದೆ. ಕೆಲವು ಪ್ರದೇಶಗಳಲ್ಲಿ ಮಾತ್ರವೇ  5-6 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ ಎಂದರು.  ಬೇಸಿಗೆ ಆರಂಭವಾಗುತ್ತಿದೆ ಜನಸಾಮಾನ್ಯರಿಗೆ ನಿಯಮಿತವಾಗಿ ಅಗತ್ಯಕ್ಕೆ ತಕ್ಕಂತೆ ನೀರು ಸರಬರಾಜು ಆಗಬೇಕು ಕನಿಷ್ಠ ಮೂರು ದಿನಕ್ಕೊಮ್ಮೆ ನೀರು ಒದಗಿಸಲು ಕ್ರಮ ವಹಿಸಬೇಕೆಂದು ತಿಳಿಸಿದರು. ಗ್ರಾಮಗಳಲ್ಲಿ ಈಗಾಗಲೇ ಶೌಚಾಲಯಗಳ ನಿರ್ಮಾಣವಾಗಿದೆ ಇನ್ನು ಕಾಮಗಾರಿ ಪ್ರಾರಂಭಿಸದಿರುವರನ್ನು ಗುರುತಿಸಿ ಗ್ರಾಮ ಪಂಚಾಯತಿಯಿಂದ ಪ್ರೋತ್ಸಾಹಿಸಿ ಆದಷ್ಟು ಬೇಗ ಶೌಚಾಲಯ ನಿರ್ಮಾಣ ಆಗಬೇಕು ಎಂದರು. ಜಲ್ ಜೀವನ ಮಿಷನ್ ಕೇಂದ್ರ ಸರಕಾರದ ಮಹತ್ವಾಕ್ಷಾಂಷೆ ಯೋಜನೆಯಾಗಿದ್ದು  ಈಗಾಗಲೇ ಗ್ರಾಮಗಳಲ್ಲಿ ಮನೆಗಳ ಮುಂದೆ ನಳಗಳು ಇದ್ದು ಆದರೆ ಅದರಲ್ಲಿ ನೀರು ಬರಲಾರದಂತಹ ಘಟನೆಗಳನ್ನು ನೋಡಲಾಗಿದ್ದು ಹಾಗಾಗಿ  ಜಿ.ಪಂ ಸಿ ಇ ಒ ಅವರು ಕಾಳಜಿ ಪ್ರತಿಯೊಬ್ಬರಿಗು ಉತ್ತಮ ಕುಡಿಯುವ ನೀರು ಕೊಡಿಸುವ ವ್ಯವಸ್ಥೆ ಆಗಬೇಕು ಎಂದ ಹೇಳಿದು. ಗದಗ ಜಿಲ್ಲೆಯಲ್ಲಿ ತುಂಗಾಭದ್ರ ಮತ್ತು ಮಲಪ್ರಭಾ ನದಿ ಗಳನ್ನು ಹೊಂದಿದ್ದು ತೋಟಗಾರಿಗೆ ಬೆಳೆಗೆ ಸಾಕಷ್ಟು ಅವಕಾಶಗಳನ್ನು ಹೊಂದಿದೆ ಹಾಗಾಗಿ ತೋಟಗಾರಿಕೆ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಶ್ರಮವಹಿಸಬೇಕು ಹಾಗು ಎಂದರು. ಅತ್ಯಂತ ಹಿಂದುಳಿದ ತಾಲೂಕಿನಲ್ಲಿರುವ ಶಾಲೆಯಲ್ಲಿ ಅತಿಥಿ ಶಿಕ್ಷಕರನ್ನು  ನಿಯೋಜಿಸಿರುವ ನಂತರವು ವಿಜ್ಞಾನ ಗಣಿತ ಇಂಗ್ಲೀಷ ವಿಷಯಗಳಿಗೆ  ಪರಿಣಿತರಿಂದ ಭೋದನೆಯನ್ನು ಕೈಗೊಳ್ಳಿ ಬೋಧಕರಿಗೆ ತಮ್ಮ ಟ್ರಸ್ಟ ನಿಂದ ಹಣ ಒದಗಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಕುರಿತು ಚರ್ಚಿಸಲಾಯಿತು ರಾಜ್ಯದ ಜನರಿಗೆ ಕೈಗೆ ಕೆಲಸ ,ವಿದ್ಯುತ್ತ್‌,ಆರೋಗ್ಯ ವಿದ್ಯೆ ಮೂಲಭೂತ ಸೌಕರ್ಯ ನೀಡಿ ಜನರು ಸಂತೋಷವಾಗಿರಬೇಕು ಇದೇ ನಮ್ಮ ಮುಖ್ಯ ಉದ್ದೇಶ ಪ್ರತಿಯೊಂದು ಕಾರ್ಯಕ್ರಮ ಮಾನವನ ಅಭಿವೃದ್ದಿಗಾಗಿದೆ ಎಂದು ತಿಳಿಸಿದರು. ನರಗುಂದ ಶಾಸಕ ಸಿಸಿ ಪಾಟೀಲ ಮಾತನಾಡಿ, ನಗರಸಭೆಯಲ್ಲಿ ನೀವು ಯಶಸ್ವಿ ಪೌರಾಯುಕ್ತರಾಗಲು ಮೊದಲು ನೀರಿನ ಪ್ರಮುಖ ಪೈಪ್ ಲೈನ್ ಗೆ ಇರುವ ನೇರ ಕನೆಕ್ಷನ್ ಕಟ್ ಮಾಡಬೇಕು. ವಿನಾಕಾರಣ ನೀರು ಪೋಲಾಗುವುದನ್ನು ತಡೆದರೆ, ನಿಯಮಿತವಾಗಿ ನೀರು ಸರಬರಾಜು ಮಾಡಬಹುದು ಹಾಗು ಕೇಂದ್ರ ಸರ್ಕಾರದಿಂದ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕೃಷಿಕರಿಗೆ ತರಬೇತಿ ನಡೆಸಲು ಆದೇಶಿಸಲಾಗಿದೆ ತರಬೇತಿಯನ್ನು ಆದಷ್ಟು ಬೇಗ ಪ್ರಾರಂಭಿಸಲು ತಿಳಿಸಿದರು ಎಂದು ತಿಳಿಸಿದರು. ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ ಮಾತನಾಡಿ,ಬೆಳ್ಳಟ್ಟಿ ಬನ್ನಿಕೊಪ್ಪ ಹೆಬ್ಬಾಳ ಗ್ರಾಮಗಳಲ್ಲಿ ಈ ಹಿಂದೆ ಚರ್ಚಿಸಿದಂತೆ ಗ್ರಾಮಗಳಲ್ಲಿರುವ ಪಿಎಚ್ ಸಿ ಗಳಿಗೆ ವೈದ್ಯರನ್ನು ನಿಯೋಜಿಸಿ ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಹೇಳಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಜಿಪಂ ಮುಖ್ಯ ಯೋಜನಾಧಿಕಾರಿ ನಿರ್ಮಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ ಎಸ್ ಎಸ್ ನೀಲಗುಂದ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟೆಮನೆ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.