ಲೋಕದರ್ಶನ ವರದಿ
ಮುದ್ದೇಬಿಹಾಳ 07:ವಕ್ಫ್ಮಂಡಳಿಯಿಂದ ಪ್ರತಿಯೊಂದು ವಿಧಾನಸಭೆ ಮತಕ್ಷೇತ್ರ ಪ್ರತಿನಿಧಿಸುವ ಶಾಸಕರಿಗೆ ರು.1 ಕೋಟಿ ಅನುದಾನ ಖಚರ್ು ಮಾಡಲು ಅವಕಾಶ ಕಲ್ಪಿಸಲಾಗಿದೆ. ಅವರು ಅದನ್ನು ಮುಸ್ಲೀಮರ ಶ್ರೇಯೋಭಿವೃದ್ಧಿಗೋಸ್ಕರ ಬಳಸಿಕೊಳ್ಳಬೇಕಿದೆ ಎಂದು ರಾಜ್ಯ ವಕ್ಫ್ಮಂಡಳಿಯ ಬೆಂಗಳೂರು ಕಚೇರಿಯ ವಿಶೇಷ ಸವರ್ೆ ಅಧಿಕಾರಿ ಮುಜಿಬುಲ್ಲಾ ಜಾಫರಿ ಹೇಳಿದ್ದಾರೆ.
ಇಲ್ಲಿನ ಅಂಜುಮನ್ ಉದರ್ು ಪ್ರೌಢಶಾಲೆಯಲ್ಲಿ ವಿಜಯಪುರ ಜಿಲ್ಲಾ ವಕ್ಫ್ಸಮಿತಿ ವತಿಯಿಂದ ಸ್ಥಳೀಯ ಅಂಜುಮನ್ ಎ ಇಸ್ಲಾಂ ಕಮೀಟಿ ಸಹಯೋಗದಲ್ಲಿ ರವಿವಾರ ಏರ್ಪಡಿಸಿದ್ದ ಮುದ್ದೇಬಿಹಾಳ ತಾಲೂಕಿನ ವಕ್ಫ್ಆಸ್ತಿಗಳ ಸಂರಕ್ಷಣೆ ಕುರಿತ ಮುತವಲ್ಲಿಗಳ ಕಾಯರ್ಾಗಾರದಲ್ಲಿ ಅವರು ಮಾತನಾಡುತ್ತಿದ್ದರು.
ಅಂಜುಮನ್ ಸಂಸ್ಥೆಗಳು ವಕ್ಫ್ಆಸ್ತಿ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇನ್ನೂ ಅನೇಕ ಕಡೆ ಮುಸ್ಲೀಮರ ಶವ ಸಂಸ್ಕಾರಕ್ಕೆ ಖಬರಸ್ತಾನಗಳು ಇಲ್ಲ. ಇದಕ್ಕಾಗಿ ವಕ್ಪ್ ಮಂಡಳಿ ಖಬರಸ್ತಾನ ಸೌಲಭ್ಯ ಒದಗಿಸಲು ಕಾಯರ್ೋನ್ಮುಖವಾಗಿದೆ. ಸ್ಥಳೀಯ ಅಂಜುಮನ್ ಸಂಸ್ಥೆಗಳು, ಮುತವಲ್ಲಿಗಳು, ಸಲಹಾ ಸಮಿತಿಗಳು ಇದಕ್ಕೆ ಸಹಕರಿಸಬೇಕು ಎಂದು ಅವರು ಹೇಳಿದರು.
ಎಲ್ಲೆಡೆ ಅಂಜುಮನ್ ಸಂಸ್ಥೆಗಳನ್ನು ರಚಿಸಬೇಕು. ಸಂಸ್ಥೆ ಅಡಿ ಬರುವ ಆಸ್ತಿಯನ್ನು ವಕ್ಫ್ಮಂಡಳಿಯಲ್ಲಿ ದಾಖಲಿಸಬೇಕು. ಇದರಿಂದ ಆ ಆಸ್ತಿಗೆ ರಕ್ಷಣೆ ಸಿಗುವುದು ಮಾತ್ರವಲ್ಲದೆ ಅಭಿವೃದ್ಧಿಗೋಸ್ಕರ ಸಕರ್ಾರದಿಂದ ಅನುದಾನವೂ ಲಭ್ಯವಾಗುತ್ತದೆ. ಆಂತರಿಕ ಕಲಹಗಳನ್ನು ಬದಿಗೊತ್ತಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಜಿಲ್ಲಾ ವಕ್ಫ್ಅಧಿಕಾರಿ ಮುದ್ದೇಬಿಹಾಳ ಅಂಜುಮನ್ ಸಂಸ್ಥೆ ಆಡಳಿತಾಧಿಕಾರಿ ಅಬ್ದುಲ್ ಮನ್ನಾನ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಸೈಯದ್ ಶಕೀಲ್ಅಹ್ಮದ್ ಖಾಜಿ ಮಾತನಾಡಿದರು. ಸ್ಥಳೀಯ ಅಂಜುಮನ್ ಸಂಸ್ಥೆ ಅಧ್ಯಕ್ಷ ಅಲ್ಲಾಭಕ್ಷ ನಾಯ್ಕೋಡಿ, ಜಿಲ್ಲಾ ವಕ್ಪ್ನ ಲೆಕ್ಕ ಪರಿಶೋಧನಾ ಅಧಿಕಾರಿ ಮೊಹ್ಮದ್ ಮೊಹಸೀನ್ ಜಮಖಂಡಿ, ಜಿಲ್ಲಾ ವಕ್ಫ್ಸಲಹಾ ಸಮಿತಿ ಅಧ್ಯಕ್ಷ ಉಸ್ಮಾನ್ ಪಟೇಲ್ ವೇದಿಕೆಯಲ್ಲಿದ್ದರು.
ತಾಲೂಕಿನ ಮುತವಲ್ಲಿಗಳು, ವಿವಿಧ ಅಂಜುಮನ್ ಇಸ್ಲಾಂ ಕಮೀಟಿಗಳ ಅಧ್ಯಕ್ಷರು, ಸದಸ್ಯರು, ಗ್ರಾಮಗಳ ಪ್ರಮುಖರು ಕಾಯರ್ಾಗಾರದಲ್ಲಿ ಪಾಲ್ಗೊಂಡಿದ್ದರು. ಮೌಲಾನಾ ಹುಸೇನ್ ಉಮ್ರಿ ಕುರಾನ್ ಪಠಿಸಿದರು. ಡಾ.ರಹೀಮ ಮುಲ್ಲಾ ಸ್ವಾಗತಿಸಿ ನಿರೂಪಿಸಿದರು. ಕಾಯರ್ಾಗಾರದ ನಂತರ ಪಟ್ಟಣದ ಮಹಾಂತೇಶನಗರದಲ್ಲಿನ ಅಂಜುಮನ್ ಕಾಂಪ್ಲೆಕ್ಸ್ ಹಿಂದುಗಡೆ ಅತಿಕ್ರಮಣಗೊಂಡಿರುವ ವಕ್ಫ್ ಆಸ್ತಿಯ ಪರಿಶೀಲನೆ ನಡೆಸಲಾಯಿತು