ಲೋಕದರ್ಶನ
ವರದಿ
ವಿಜಯಪುರ 22: ಕೃಷ್ಣಾ
ಮೇಲ್ದಂಡೆ ಯೋಜನೆಯ ಮಲಘಾಣ ಏತ ನೀರಾವರಿ ಯೋಜನೆಗೆ
ಸಂಬಂಧಿಸಿದ ಕೂಡಗಿ ಬಳಿ ಇರುವ ಮುಖ್ಯಕಾಲುವೆ
ಕಾಮಗಾರಿಗೆ ರೈಲ್ವೇ ಇಲಾಖೆ ಅಡ್ಡಗಾಲು ಹಾಕುತ್ತಿದೆ. ಇದರಿಂದಾಗಿ ಕಾಲುವೆ ಕಾಮಗಾರಿ ಸಂಪೂರ್ಣ ಸ್ತಭ್ಧವಾಗಿದೆ. ರೈತರ ಹಿತರಕ್ಷಣೆಯ ದೃಷ್ಟಿಯಿಂದ
ರೈಲ್ವೇ ಇಲಾಖೆ ಕನಿಷ್ಠ 15 ದಿನಗಳವರೆಗೆ ರೈಲು ಸಂಪರ್ಕವನ್ನು ಕಡಿತಗೊಳಿಸಬೇಕು
ಎಂದು ಕೇಂದ್ರದ ಮಾಜಿ ರೈಲ್ವೇ ಸಚಿವ,
ವಿಜಯಪುರ ನಗರ ಶಾಸಕ ಬಸನಗೌಡ
ಪಾಟೀಲ ಯತ್ನಾಳ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಗಿ ಬಳಿ ರೈಲ್ವೇ ಸೇತುವೆ
ಕೆಳಗೆ ಕಾಲುವೆ ನಿಮರ್ಾಣಗೊಂಡಿದೆ, ಆದರೆ ರೈಲು ತಡೆಯಲು
ರೈಲ್ವೇ ಇಲಾಖೆ ಹಿಂದೇಟು ಹಾಕುತ್ತಿದೆ. ಇದರಿಂದಾಗಿ ಮಸೂತಿ, ಮಲಘಾಣ, ಮುತ್ತಗಿ ಸೇರಿದಂತೆ ಹಲವಾರು ಗ್ರಾಮಗಳ ಜಮೀನುಗಳಿಗೆ ನೀರು ತಲುಪಲು ವ್ಯತ್ಯಯವಾಗಲಿದೆ.
ಈಗಾಗಲೇ ಭೀಕರ ಬರಗಾಲ ಪರಿಸ್ಥಿತಿಯಿಂದಾಗಿ
ರೈತರು ತೊಂದರೆಗೊಳಗಾಗಿದ್ದಾರೆ, ಈಗ ನೀರಾವರಿ ಯೋಜನೆಗಳು
ನೆನೆಗುದಿಗೆ ಬಿದ್ದರೆ ರೈತರ ಸಂಕಷ್ಟ ಮತ್ತಷ್ಟು
ಅಧಿಕವಾಗಲಿದೆ ಎಂದರು.
ರೈಲ್ವೇಯಷ್ಟೇ ರೈತರ ಹಿತರಕ್ಷಣೆಯೂ ಮಹತ್ವ
ಪಡೆದುಕೊಂಡಿದೆ. ಕಲಬುಗರ್ಿಯಲ್ಲಿ ನೀರಾವರಿ ಯೋಜನೆ ಕಾಮಗಾರಿಗಾಗಿ ರೈಲು ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.
ಅದರಂತೆ ಈ ಪ್ರಸ್ತುತ ಗುತ್ತಿಗೆ
ವಹಿಸಿಕೊಂಡಿರುವ ಗುತ್ತಿಗೆದಾರರು ಕೇವಲ ನಾಲ್ಕು ದಿನಗಳ
ಅವಧಿ ಕೇಳಿದ್ದಾರೆ. ಆದರೆ ರೈಲ್ವೇ ಇಲಾಖೆ
ಸ್ಪಂದಿಸುತ್ತಿಲ್ಲ ಎಂದು ಯತ್ನಾಳ ಹೇಳಿದರು.
ಮೊದಲು ಸುಮ್ಮನಿದ್ದ ಅಧಿಕಾರಿಗಳು ಈಗ ವಿನಾಕಾರಣ ತಾಂತ್ರಿಕ
ಕಾರಣ ಹೇಳುತ್ತಿರುವುದು ಸರಿಯಲ್ಲ. ಕಲಬುಗರ್ಿ ಮಾದರಿಯಲ್ಲಿಯೇ 15 ದಿನಗಳ ಕಾಲ ರೈಲು ಸಂಪರ್ಕವನ್ನು
ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಂಬರುವ
ಸೋಮವಾರ ಬೃಹತ್ ಹೋರಾಟ
ಇದೊಂಧು ರೈತಪರವಾದ ಹೋರಾಟವಾಗಿದೆ, ಇದು ಪಕ್ಷಾತೀತವಾದ ಹೋರಾಟ
ಸಹ ಹೌದು. ಈ ಯೋಜನೆ ಕಾಮಗಾರಿಗೆ
ಸಂಬಂಧಿಸಿದಂತೆ 15 ದಿನಗಳ ಕಾಲ ರೈಲು ಸಂಪರ್ಕ
ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಮುಂಬರುವ ಸೋಮವಾರದಂದು ರೈತರೊಂದಿಗೆ ಹೋಗಿ ಜಿಲ್ಲಾಧಿಕಾರಿಗಳಿಗೆ ಹಾಗೂ ಸಕರ್ಾರಕ್ಕೆ
ಒತ್ತಾಯಿಸಲಾಗುವುದು.
ಈ ಭಾಗದ 15 ಸಾವಿರಕ್ಕೂ
ಹೆಚ್ಚು ರೈತರ ನಿಯೋಗದೊಂದಿಗೆ ಬೃಹತ್
ಹೋರಾಟ ಸಂಘಟಿಸಲಾಗುವುದು ಎಂದರು.
ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ ಮಾತನಾಡಿ, ರೈತರು ಬನ್ನಿ ವಿನಿಯಮ ಸಂದರ್ಭದಲ್ಲಿಯೂ ಈಸಮಸ್ಯೆಯನ್ನು ಹೇಳಿಕೊಂಡಿದ್ದಾರೆ, ಈ ಸಮಸ್ಯೆ ನಿವಾರಣೆಯಾದರೆ
ಬದುಕು ಬಂಗಾರವಾಗಲಿದೆ ಎಂಬ ಆಶಯ ರೈತರಲ್ಲಿದೆ.
ರೈಲ್ವೇ ಇಲಾಖೆ ರೈತರ ಆಶಯಗಳಿಗೆ ತಣ್ಣೀರೆರಚಬಾರದು
ಎಂದರು.
ಜಿಲ್ಲಾ ಪಂಚಾಯತ ಸದಸ್ಯ ಕಲ್ಲಪ್ಪ ಕೊಡಬಾಗಿ, ಸಂಜಯ ಪಾಟೀಲ ಕನಮಡಿ,
ವಿಜಯಕುಮಾರ ಚವ್ಹಾಣ, ಶ್ರೀನಿವಾಸ ಬೇಟಗೇರಿ, ಶ್ರೀಹರಿ ಗೊಳಸಂಗಿ, ಎಸ್.ಎಸ್. ಗೌರಿ
ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.