ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ
ಯರಗಟ್ಟಿ, 15: ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಜನರ ಪ್ರಗತಿಗೆ ಮೊದಲ ಆಧ್ಯತೆ ನೀಡಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಮದ್ಲೂರ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಗ್ರಾಮದೇವಿ ದೇವಸ್ಥಾನದವರೆಗೆ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಜಿಲ್ಲಾ ಪಂಚಾಯತ ಬೆಳಗಾವಿ, ತಾಲೂಕ ಪಂಚಾಯತ ಸವದತ್ತಿ ಇವರು ಹಮ್ಮಿಕೊಂಡಿದ್ದ 80 ಲಕ್ಷ್ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗುತ್ತಿಗೆದಾರರು ಮತ್ತು ಅಧಿಕಾರಿಗಳು ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದರು.
ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ ಮಾತನಾಡಿ, ಗುತ್ತಿಗೆದಾರರು ಕೈಗೊಳ್ಳುವ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಬೇಕು. ಸಾರ್ವಜನಿಕರು ಕೂಡಾ ತಮ್ಮ ಜವಾಬ್ದಾರಿ ಮರೆಯದೇ ಕಳಪೆ ಕಂಡುಬಂದಲ್ಲಿ ಸಂಬಂದಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು. ಗ್ರಾಮಸ್ಥರು, ಕಾರ್ಯಕರ್ತರು ಶಾಸಕ ವಿಶ್ವಾಸ ವೈದ್ಯ ಅವರನ್ನು ಸನ್ಮಾನಿಸಿದರು.
ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಹೊಟ್ಟಿ, ಜಿಪಂ ಮಾಜಿ ಸದಸ್ಯ ಪಕೀರ್ಪ ಹದ್ದನ್ನವರ, ಯರಗಟ್ಟಿ ಎಪಿಎಂಸಿ ನಿರ್ದೇಶಕ ಸಿದ್ಧರೂಢ ಬೀಲಕಂಚಿ, ಬಸವರಾಜ ಸುಣಗಾರ, ಗುಡುಸಾಬ ದೊಡಮನಿ, ಶಂಕರೆಪ್ಪ ಕುರಿ, ಸೋಮಪ್ಪ ಕುರಿ, ಸೋಮಪ್ಪ, ಅಶೋಕ ಯರಝರ್ವಿ, ಕಲ್ಲೋಳ್ಳಿ, ಪ್ರಭು ನಾಗನೂರ, ಸುರೇಶ ಹೊಟ್ಟಿ, ಅಡಿವೆಪ್ಪ ಹೊಸಮನಿ, ಅಶೋಕ ದೇಸನೂರ, ಮಹಾದೇವ ಹೂಲಿ, ಆರ್.ಕೆ.ಪಟಾತ, ವಿಠ್ಠಲ ನರಿ, ಸುಭಾನಿ ಕುದರಿ ಸೇರಿದಂತೆ ಇತರರಿದ್ದರು.