ಅಮೃತ್ 2.0 ಯೋಜನೆಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ
ಯರಗಟ್ಟಿ 15: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಅನುಷ್ಠಾನಗೊಳ್ಳುತ್ತಿರುವ ಅಮೃತ್ 2.0 ಯೋಜನೆಯಡಿ ಯರಗಟ್ಟಿ ಪಟ್ಟಣಕ್ಕೆ ನೀರು ಸರಬರಾಜು ಕಲ್ಪಿಸುವ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಪಟ್ಟಣಕ್ಕೆ 29.14ಕೋಟಿ ಅನುದಾನದಲ್ಲಿ ಈ ಕಾಮಗಾರಿ ನಡೆಯಲಿದ್ದು, ಕೇಂದ್ರ ಸರ್ಕಾರದ ಶೇ 50 ರಷ್ಟು ಅನುದಾನ ರಾಜ್ಯ ಸರ್ಕಾರದ ಶೇ 40 ಅನುದಾನ ಹಾಗೂ ಸ್ಥಳೀಯ ಸಂಸ್ಥೆಯಿಂದ ಶೇ 10ರಷ್ಟು ಅನುದಾನವನ್ನು ಅಮೃತ್ ಯೋಜನೆಗೆ ವಿನಿಯೋಗಿಸಲಾಗುತ್ತಿದೆ.
ಈ ಬೃಹತ್ ಯೋಜನೆಯಿಂದ ಇನ್ನು ಮುಂದೆ ಪಟ್ಟಣದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸಹಾಯವಾಗಲಿದೆ ಎಂದರು.ರೇಣುಕಾ ಸಾಗರ ಜಲಾಶಯದ ಕಾಪರ್ ಮೂಲ ಸ್ಥಾವರಗಳನ್ನು ಮತ್ತು ಪಟ್ಟಣದ ಖಾಲಿ ಇರುವ ಸ್ಥಳದಲ್ಲಿ ನೀರು ಶುದ್ಧೀಕರಣದ ಘಟಕ ನಿರ್ಮಾಣವಾಗಲಿದೆ. ಇದರಿಂದ 6.20 ದಶಲಕ್ಷ ಲೀಟರ್ ನೀರು ದೊರೆಯಲಿದೆ ಎಂದು ತಿಳಿಸಿದರು.ಈ ವೇಳೆ ತಹಶೀಲ್ದಾರ ಮಾದಾನಂದ ಗುಂಡಪ್ಪನವರ, ಪ. ಪಂ.ಮುಖ್ಯಾಧಿಕಾರಿ ಡಿ. ಎನ್. ತಹಶೀಲ್ದಾರ, ಪಂಕಜ ದೇಸಾಯಿ, ಪ. ಪಂ. ನಾಮನಿರ್ದೇಶಿತ ಸದಸ್ಯರಾದ ನಿಖಿಲ ಪಾಟೀಲ, ಹನುಮಂತ ಹಾರುಗೊಪ್ಪ, ಸಲಿಂಬೇಗ ಜಮಾದಾರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಮಂಜುನಾಥ ತಡಸಲೂರ, ಶಿವಾನಂದ ಕರಿಗೋಣ್ಣವರ, ಭಾಸ್ಕರ ಹಿರೇಮೆತ್ರಿ, ಅಬಿದಬೇಗ ಜಮಾದಾರ, ವಿಠ್ಠಲಗೌಡ ದೇವರಡ್ಡಿ, ರಮೇಶ ದೇವರಡ್ಡಿ, ರಾಮನಗೌಡ ಪಾಟೀಲ, ಫಾರುಕ್ ಅತ್ತಾರ, ರಫೀಕ್ ಡಿ.ಕೆ, ಮಾಡಮಗೇರಿ ಗ್ರಾ. ಪಂ. ಅಧ್ಯಕ್ಷ ಲಕ್ಕಪ್ಪ ಸನ್ನಿಂಗನ್ನವರ, ಎಸ್. ಎಸ್. ಕುರುಬಗಟ್ಟಿಮಠ, ಜೆ. ರತ್ನಾಕರ ಶೆಟ್ಟಿ, ಬಂಗಾರೆಪ್ಪ ಹರಳಿ, ಪ್ರಕಾಶ ವಾಲಿ, ಗಿಡ್ಡಪ್ಪ ಖಂಡ್ರಿ ಸೇರಿದಂತೆ ಅನೇಕರು ಇದ್ದರು.