ಸಿ ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿ ಪೂಜೆ
ಯರಗಟ್ಟಿ 22: ಸಮೀಪದ ಸೊಪ್ಪಡ್ಲ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಡಿ ಗ್ರಾಮದ ಚೆಕ್ಕರ ರಸ್ತೆ ಕಿ.ಮೀ 0.00 ದಿಂದ 0.200 ಕಿ.ಮೀ ವರೆಗೆ ಸಿ ಸಿ ರಸ್ತೆ ನಿರ್ಮಾಣ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು ಅಂದಾಜು ವೆಚ್ಚ: ರೂ. 55.00 ಲಕ್ಷಗಳು ಸಿಸಿ ರಸ್ತೆ ಕಾಮಗಾರಿಗೆ ಪ್ರಾರಂಭಿಸಿದ್ದು ಹಂತ ಹಂತವಾಗಿ ಗ್ರಾಮದ ಸವಾಂರ್ಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.ಗ್ರಾ. ಪಂ. ಅಧ್ಯಕ್ಷ ಸತ್ಯೆವ್ವ ಗೋರಗುದ್ದಿ, ಎಪಿಎಂಸಿ ಉಪಾಧ್ಯಕ್ಷ ಬಸವರಾಜ ಆರಿಬೆಂಚಿ, ಪಿಕೆಪಿಎಸ್ ಅಧ್ಯಕ್ಷ ಆಯ್. ಕೆ. ಗೌಡರ, ಆಯ್. ಬಿ. ಗೌಡರ, ಮಹಾಂತೇಶ ಇಟ್ನಾಳ, ಸುಭಾಶ ಕರೆನ್ನವರ, ಮಾರುತಿ ಗೋರಗುದ್ದಿ, ಕುಮಾರ ಹಳ್ಯಾಳ, ಬಾಳೇಶ ಬಡೆನ್ನವರ, ಸಂತೋಷ ಕರೆನ್ನವರ, ವಿಜಯ ಅಂಗಡಿ, ಪ್ರಕಾರ ವಾಲಿ, ಶಂಕರ ಇಟ್ನಾಳ, ಮಲಿಕಸಾಬ ಬಾಗವಾನ ಸೇರಿದಂತೆ ಗ್ರಾಮದ ಗುರು ಹಿರಿಯರು, ಮುಖಂಡರು, ಯುವ ಮಿತ್ರರು ಉಪಸ್ಥಿತರಿದ್ದರು.