ಎಪಿಎಂಸಿ ಚಿಕ್ಕ ಮಳಿಗೆಗಳ ನಿರ್ಮಾಣಕ್ಕೆ ಶಾಸಕ ಸಿದ್ದು ಸವದಿ ಚಾಲನೆ
ಮಹಾಲಿಂಗಪುರ 26 : ಕೃಷಿ ಮಾರುಕಟ್ಟೆ ಸಮಿತಿಗೆ ಆದಾಯ ಹೆಚ್ಚಳ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಜತ್ತ ಜಾಂಬೋಟಿ ಹೆದ್ದಾರಿ ಪಕ್ಕದ ಎಪಿಎಂಸಿ ಜಾಗೆಯಲ್ಲಿ ಚಿಕ್ಕ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು. ಎಪಿಎಂಸಿ ಜಾಗೆಯಲ್ಲಿ ಸನ್ 2023-24 ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯ ಸುಮಾರು 79 ಲಕ್ಷಗಳ ಮೊತ್ತದಲ್ಲಿ 11 ಚಿಕ್ಕ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಬುಧವಾರ ಮುಂಜಾನೆ ಗುದ್ದಲಿ ಪೂಜೆಯೊಂದಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಒಟ್ಟು 5.5 ತಿಂಗಳಲ್ಲಿ ಉತ್ತಮ ಗುಣಮಟ್ಟ ಹೊಂದಿರುವ ಮಳಿಗೆಗಳನ್ನು ನಿರ್ಮಿಸಬೇಕೆಂದು ಗುತ್ತಿಗೆದಾರರಿಗೆ ತಿಳಿಸಿದರು.
ಈ ಶಂಕುಸ್ಥಾಪನೆ ಸಮಯದಲ್ಲಿ ಭಾಜಪ ಮುಖಂಡರಾದ ಮಹಾಂತೇಶ ಹಿಟ್ಟಿನಮಠ ಮಹಾಲಿಂಗಪ್ಪ ಕುಳ್ಳೋಳ್ಳಿ ಸುರೇಶ್ ಅಕ್ಕಿವಾಟ ಈರ್ಪ ದಿನ್ನಿಮನಿ ಮನೋಹರ ಶಿರೋಳ ಜಿ ಎಸ್ ಗೊಂಬಿ ಚನಬಸು ಯರಗಟ್ಟಿ ಶಿವಾನಂದ ಅಂಗಡಿ ಶಂಕರಗೌಡ ಪಾಟೀಲ ಚೆನ್ನಪ್ಪ ಪಟ್ಟಣಶೆಟ್ಟಿ ವಿರೇಶ ಮುಂಡಗನೂರ ಶ್ರೀಶೈಲ ನುಚ್ಚಿ ಬಾಳು ಮಾಳವದೆ ಮಹಾಲಿಂಗಪ್ಪ ಕಂಠಿ ಮಹೇಶ್ ಜಿಡ್ಡಿಮನಿ ಹರೀಶ ನಾಯಕ ಚಂದ್ರಶೇಖರ ಗೊಂದಿ ವಿ ಡಿ ಮುಗಳ್ಯಾಳ ಸಂಗಪ್ಪ ಲೋಣಿ ಶೇಖರ ಮಗದುಮ ಗುರು ಜಂಬಗಿ ಬಸವರಾಜ ಮಡಿವಾಳ ಅಜಯ ಹಂದ್ರಾಳ ಬಸು ಹುಕ್ಕೇರಿ ಮಹೇಶ್ ಮುಕುಂದ ರವಿ ಗಿರಿಸಾಗರ ಎಪಿಎಂಸಿ ಕಾರ್ಯದರ್ಶಿ ಎಲ್ ಎಂ. ಉದ್ದಪ್ಪನ್ನವರ ಸ.ಕಾರ್ಯದರ್ಶಿಗಳಾದ ಬಿ ಪಿ.ಬಾಡಗಿ ಡಿ ಬಿ ಬಸಗೌಡರ, ಆಂತರೀಕ ಲೆಕ್ಕ ಪರಿಶೋಧಕರು ಆರ್ ಎಚ್. ರಾಠೋಡ್ ಪ್ರದಸ ಎ ಎಲ್. ಕಾಂಬಳೆ ಮಾರುಕಟ್ಟೆ ಮೇಲ್ವಿಚಾರಕ ಬಿ ಎನ್. ಕುಂಬಾರ ಮತ್ತು ಕುಡಚಿ ಕೃಷಿ ಮಾರುಕಟ್ಟೆ ಕಾರ್ಯದರ್ಶಿ ಆರ್ ಎಚ್ ಭೋಜನ್ನವರ ಮುಂತಾದವರಿದ್ದರು.