ಕಾಳಿ ನದಿಗೆ ಹೊಸ ಸೇತುವೆಯ ಭೂಮಿ ಪೂಜೆ ನಂತರ ಶಾಸಕ ಸತೀಶ್ ಸೈಲ್ ತಕರಾರು
MLA Satish Sail protests after ground breaking ceremony for new bridge over Kali River
ಕಾಳಿ ನದಿಗೆ ಹೊಸ ಸೇತುವೆಯ ಭೂಮಿ ಪೂಜೆ ನಂತರ ಶಾಸಕ ಸತೀಶ್ ಸೈಲ್ ತಕರಾರು
ಕಾರವಾರ 14 : ಕಾಳಿ ನದಿಗೆ ಹೊಸ ಸೇತುವೆ ನಿರ್ಮಾಣದ ಭೂಮಿ ಪೂಜೆ ನಂತರ ಸ್ಥಳಕ್ಕೆ ಬಂದ ಸ್ಥಳೀಯ ಶಾಸಕ ಸತೀಶ್ ಸೈಲ್ ತಕರಾರು ತೆಗೆದರು. ಪ್ರೋಟೋಕಾಲ್ ಪ್ರಕಾರ ತನ್ನನ್ನು ಕರೆದಿಲ್ಲ ಎಂದು ಸಂಸದರಿಗೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ,ಇದು ಭೂಮಿ ಪೂಜೆ. ನಂತರ ಕೇಂದ್ರ ಸಚಿವರು, ರಾಜ್ಯದ ಸಚಿವರನ್ನು ಕರೆಯಿಸಿ ಕಾರ್ಯಕ್ರಮ ಮಾಡೋಣ ಎಂದರು. ಇಷ್ಟು ಹೇಳಿ ಸಂಸದರು ತೆರಳಿದ ನಂತರ ಶಾಸಕರು ಪೌದ್ದಾರ ಕಂಪನಿಯ ಮ್ಯಾನೇಜರ್, ಸೂಪರ್ ವೈಜರ್ ಜೊತೆ ಅಕ್ಷರಶಃ ಜಗಳಕ್ಕೆ ಇಳಿದರು. ಸೇತುವೆ ಡಿಜೈನ್ ಗೆ ಎನ್ ಎಚ್ ಅಥಾರಿಟಿ ಅನುಮತಿ ಕೊಟ್ಟ ಆದೇಶ ತೋರಿಸಿ ಎಂದು ಪಟ್ಟು ಹಿಡಿದರು. ಹಳೆಯ ಪಿಲ್ಲರ ಜಾಗದಲ್ಲಿ ಪಿಲ್ಲರ್ ಹಾಕುತ್ತೀರಾ? ಹಾಗಾದರೆ ಗೆಮನ್ ಇಂಡಿಯಾ ನದಿಯಲ್ಲಿ ತೋಡಿದ ಬಾವಿ ಮುಚ್ಚಿ. ಇಲ್ಲದಿದ್ದರೆ ಕೆಲಸ ಮಾಡಲು ಬಿಡಲ್ಲ. ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರನ್ನು ಯಾಕೆ ಕರೆದಿಲ್ಲ ಎಂದು ತಕರಾರು ತೆಗೆದರು. ಪ್ರೊಟೊಕಾಲ್ ಉಲ್ಲಂಘನೆಯಾಗಿದೆ. ಜಿಲ್ಲಾಧಿಕಾರಿ, ಐಅರ್ ಬಿ ಪ್ರೊಜೆಕ್ಟ್ ಡೈರೆಕ್ಟರ್ ಕರೆದಿಲ್ಲ. ನನ್ನನ್ನು ನಿರ್ಲಕ್ಷ್ಯ ಮಾಡಿ ಅದೇಗೆ ಕಾಮಗಾರಿ ಮಾಡುವಿರಿ ನೋಡುವೆ ಎಂದು ಶಾಸಕ ಸೈಲ್ ಹೇಳೀದರು. ನದಿಯಲ್ಲಿ ಬಾವಿ ಮುಚ್ಚದೆ ಇದ್ದರೆ , ಪ್ರವಾಸೋದ್ಯಮಕ್ಕೆ ಹಾನಿ ಇದೆ ಎಂದರು. ಸೇತುವೆ ಡಿಜೈನ್ ತೋರಿಸಬೇಕು. ಈಗ ಇರುವ ಸೇತುವೆ ಮೇಲಿಂದ ನಿರ್ಮಾಣ ಮಾಡುವ ಸೇತುವೆಗೆ ಕಾಂಕ್ರೀಟ್ ಹಾಕಬಾರದು ಎಂದು ಶಾಸಕ ಸತೀಶ್ ಸೈಲ್, ಪೌದ್ದಾರ್ ಇನ್ಪ್ರಾಸ್ಟ್ರಕ್ಚರ್ ಗೆ ಎಚ್ಚರಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 