ಲೋಕದರ್ಶನ ವರದಿ
ಕೊಪ್ಪಳ 22: ಸಂಸದೀಯ ಕಾರ್ಯದಶರ್ಿಯಾಗಿ ಕೊಪ್ಪಳದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ನೇಮಕವಾಗಿದ್ದಾರೆ ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಶನಿವಾರದಂದು ನಗರದ ಅಶೋಕ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ನಗರ ಬ್ಲಾಕ್ ಅಧ್ಯಕ್ಷ ಕಾಟನ್ ಪಾಶಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಕೃಷ್ಣಾ ಇಟ್ಟಂಗಿ, ಜಿಲ್ಲಾ ವಕ್ತಾರ ಕುರಗೋಡ ರವಿ,ಎಪಿಎಂಸಿ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ, ಕಾಂಗ್ರೆಸ್ ಸೇವಾದಳದ ರಾಜ್ಯ ಸಂಘಟಕರಾದ ಜಾಕೀರಹುಸೇನ ಕಿಲ್ಲೇದಾರ, ಮುಖಂಡರಾದ ಪ್ರಸನ್ನ ಗಡಾದ, ಶಿವುಕುಮಾರ ಪಾವಲಿ, ಮಹೆಬೂಬ್ ಅರಗಂಜಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಇಂದಿರಾ ಬಾವಿಕಟ್ಟಿ, ಭಾಗ್ಯನಗರ ಪಟ್ಟಣ ಪಂಚಾಯತ್ ಸದಸ್ಯ ಮಂಜುನಾಥ ಗೊಂಡಬಾಳ ಮತ್ತು ಹೊನ್ನೂರಸಾಬ್ ಭೈರಾಪೂರ, ನಗರಸಭೆ ಸದಸ್ಯರಾದ ಅಕ್ಬರ್ ಪಾಶಾ ಪಲ್ಟನ್, ಅಜೀಮುದ್ದಿನ್ ಅತ್ತಾರ್, ಮಾಜಿ ನಗರಸಭೆ ಸದಸ್ಯ ಮಾನ್ವಿ ಪಾಶಾ, ಮಾಜಿ ಕುಡಾ ಅಧ್ಯಕ್ಷ ಜುಲ್ಲು ಖಾದರ್ ಖಾದ್ರಿ, ಜಿಲ್ಲಾ ಕಾಮರ್ಿಕ ಘಟಕ ಪ್ರಧಾನ ಕಾರ್ಯದಶರ್ಿ ಶ್ರೀನಿವಾಸ್ ಪಂಡಿತ್, ಮುಖಂಡರಾದ ಶಾಂತಣ್ಣ ಮುದಗಲ್, ದ್ಯಾಮಣ್ಣ ಚಿಲವಾಡಗಿ, ಅಜರ್ುನ್ಸಾ ಕಾಟವಾ, ಯಮನೂರಪ್ಪ ನಾಯಕ, ಮಾರುತಿ ಕಾರಟಗಿ, ರಮೇಶ ಗಿಣಗೇರಿ, ಗವಿಸಿದ್ದಪ್ಪ ಚಿನ್ನೂರ, ವಾಜೀದ್ ಎಂ.ಎ. ಇತರರು ಇದ್ದರು.