ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪಠಾಣ ಭೂಮಿ ಪೂಜೆ

MLA Pathana Bhoomi Puja for development works

ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪಠಾಣ ಭೂಮಿ ಪೂಜೆ

ಶಿಗ್ಗಾವಿ 26: ತಾಲೂಕಿನ ಹುಲಗೂರ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ?02.00 ಕೋಟಿ ಮತ್ತು ಬಸವನಾಳ ಗ್ರಾಮದಲ್ಲಿ ?50.00 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ಶಾಸಕ ಯಾಶೀರಖಾನ ಪಠಾಣ ನೇರವೇರಿಸಿದರು.ಈ ಸಂದರ್ಭದಲ್ಲಿ ಹುಲಗೂರ ಗ್ರಾಮ ಪಂಚಾಯತ್ ಅಧ್ಯಕ್ಷ ಜಾವೀದ್ ಸವಣೂರ, ಗ್ರಾಮ ಪಂಚಾಯತ್ ಸದಸ್ಯ ರುದ್ರ​‍್ಪ ಕೆಳಗಿನಮನಿ, ಗುಡ್ಡಪ್ಪ ಜಲ್ದಿ, ಎಸ್‌.ಎಫ್‌. ಮಣಕಟ್ಟಿ, ಮಂಜುನಾಥ ತಿಮ್ಮಾಪೂರ, ಚಂದ್ರಣ್ಣ ಹೆಬ್ಬಾಳ, ಯಲ್ಲಪ್ಪ, ಕಾಂತೇಶ ವಿಜಾಪೂರ, ಮಲ್ಲಮ್ಮ ಸೋಮನಕಟ್ಟಿ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.