ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆ
ಅಥಣಿ 31: ಅಥಣಿ ಪಟ್ಟಣ ಸೇರಿದಂತೆ ಮತ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆ ಸುಧಾರಣೆಗಾಗಿ ಲೋಕೋಪಯೋಗಿ ಇಲಾಖೆಯಿಂದ ವಿವಿಧ ರಸ್ತೆ ಕಾಮಗಾರಿಗಳಿಗಾಗಿ 57 ಕೋಟಿ ಅನುದಾನ ಮಂಜೂರಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಸವದಿ ಗ್ರಾಮದಲ್ಲಿ 200 ಲಕ್ಷ ರೂ.ಅನುದಾನದಲ್ಲಿ ಸವದಿ ಗ್ರಾಮದಿಂದ ಜನವಾಡ ಗ್ರಾಮದವರೆಗೆ 1.5 ಕಿಲೋ ಮೀಟರ್ ಮತ್ತು ಸವದಿ-ದರ್ಗಾದಿಂದ ಹಿಪ್ಪರಗಿ ಡ್ಯಾಂಗೆ ಸಂಪರ್ಕ ಕಲ್ಪಿಸುವ ರಸ್ತೆ ಎತ್ತರಿಸಿ ಬಾಕ್ಸ ಕಲವರ್ಟ ಕಾಮಗಾರಿಗೆ ಭೂಮಿ ಪೂಜೆ ಮತ್ತು ನೀರಾವರಿ ನಿಗಮದಡಿ ನಿರ್ಮಿಸಲಾದ ಹಿಪ್ಪರಗಿ ಡ್ಯಾಂನಿಂದ ಜನವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಅನುದಾನದಲ್ಲಿ ಅಥಣಿ ಯಲ್ಲಮ್ಮವಾಡಿ ರಸ್ತೆಗೆ 30 ಕೋಟಿ, ಅಥಣಿ ಸತ್ತಿ ರಸ್ತೆ ಅಭಿವೃದ್ಧಿಗಾಗಿ 6 ಕೋಟಿ, ಶಿರಹಟ್ಟಿ ನಂದಗಾಂವ ರಸ್ತೆ ಅಭಿವೃದ್ಧಿಗಾಗಿ 5 ಕೋಟಿ, ಅಥಣಿ ಪಟ್ಟಣದ ಗಣಪತಿ ದೇವಸ್ಥಾನದಿಂದ ನಿಯೋಜಿತ ಕೇಂದ್ರೀಯ ವಿದ್ಯಾಲಯದ ವರೆಗಿನ ರಸ್ತೆ ಅಭಿವೃದ್ಧಿಗೆ 9 ಕೋಟಿ, ಅಥಣಿ ಜನವಾಡ ರಸ್ತೆ ಸುಧಾರಣೆಗೆ 2 ಕೋಟಿ, ಮಹಿಷವಾಡಗಿ ನದಿ ರಸ್ತೆ ಅಭಿವೃದ್ಧಿಗೆ 1 ಕೋಟಿ, ಸವದಿ ದರ್ಗಾ 2 ಕೋಟಿ, ಬಡಚಿ ಬುರ್ಲಟ್ಟಿ ರಸ್ತೆ ಅಭಿವೃದ್ಧಿಗೆ 1ಕೋಟಿ ರಸ್ತೆ ಸುಧಾರಣೆಯ ಕೆಲ ಕಾಮಗಾರಿಗಳು ಈಗಾಗಲೆ ಪ್ರಾರಂಭಗೊಂಡಿದ್ದು, ಇನ್ನು ಕೆಲ ಕಾಮಗಾರಿಗಳು ಕೆಲವೇ ದಿನಗಳಲ್ಲಿಯೇ ಪ್ರಾರಂಭಗೊಳ್ಳುತ್ತವೆ ಎಂದರು.
ಹಿಪ್ಪರಗಿ ಆಣೆಕಟ್ಟಿನ ಹಿನ್ನೀರಿನಿಂದ ಮಳೆಗಾಲದ ಸಮಯದಲ್ಲಿ ಅಥಣಿ ಜಮಖಂಡಿ ರಸ್ತೆಯಿಂದ ಜನವಾಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಡೆಯಾಗುತ್ತಿತ್ತು ಹೀಗಾಗಿ ಜನವಾಡ ಗ್ರಾಮದ ಜನ ಪರದಾಡುವ ಸ್ಥಿತಿ ಇರುತ್ತಿತ್ತು ಎಂದ ಅವರು ಜನವಾಡ ಗ್ರಾಮಸ್ಥರ ಸಂಕಷ್ಟ ದೂರ ಮಾಡಲೆಂದು ಈ ಸೇತುವೆ ನಿರ್ಮಿಸಲಾಗಿದ್ದು, ವರ್ಷದ 12. ತಿಂಗಳೂ ಕೂಡ ಜನವಾಡ ಗ್ರಾಮದವರು ಈ ಸೇತುವೆ ಮೂಲಕ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಜಯಾನಂದ ಹಿರೇಮಠ, ನೀರಾವರಿ ಇಲಾಖೆಯ ಪ್ರವೀಣ ಹುಣಸಿಕಟ್ಡಿ, ಗುತ್ತಿಗೆದಾರರಾದ ಅರ್ಜುನ ನಾಯಿಕ, ಮಹಾಂತೇಶ ಮಟಗಾರ, ಯಲ್ಲಪ್ಪ ಡಪ್ರಿ, ಶಿವರುದ್ರ ಘೂಳಪ್ಪನವರ ಧುರೀಣರಾದ ಶೇಖರ ಕನಕರೆಡ್ಡಿ, ಜಡೆಪ್ಪ ಕುಂಬಾರ, ಶಂಕರ ನೇಮಗೌಡ, ಹಣಮಂತ ಗೂಗವಾಡ, ಅರ್ಜುನ ಗುರವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.