30 ಕೋಟಿ ಅನುದಾನದ ಅಥಣಿ-ಕೊಕಟನೂರ ರಸ್ತೆಗೆ ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆ
ಅಥಣಿ, 08; ರಾಜ್ಯ ಬಜೆಟ್ ನಲ್ಲಿ ಕೃಷಿ ವಿಜ್ಞಾನ ಮಹಾ ವಿದ್ಯಾಲಯ ಮತ್ತು ತಾಯಿ-ಮಗು ಆಸ್ಪತ್ರೆ ಯ ಕಾಮಗಾರಿಗೆ ಮಂಜೂರಾತಿ ನೀಡಿದ ಸಿಎಮ್ ಸಿದ್ಧರಾಮಯ್ಯನವರನ್ನು ತಾಲೂಕಿನ ಜನತೆಯ ಪರವಾಗಿ ಅಭಿನಂದಿಸುವೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಚ್ಮಣ ಸವದಿ ಹೇಳಿದರು. ಅವರು ತಾಲೂಕಿನ ಕೊಕಟನೂರ ಗ್ರಾಮದಲ್ಲಿ 30 ಕೋಟಿ ಅನುದಾನದ ಅಥಣಿ ಯಲ್ಲಮ್ಮವಾಡಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. 42 ಕೋಟಿ ಅನುದಾನದ 100 ಹಾಸಿಗೆ ಸಾಮಥ್ಯದ ತಾಯಿ-ಮಗು ಆಸ್ಪತ್ರೆ ಟೆಂಡರ್ ಪ್ರಕ್ರಿಯೆ ಮೂರು ತಿಂಗಳಲ್ಲಿಯೇ ಮುಕ್ತಾಯಗೊಂಡು ಕಾಮಗಾರಿ ಪ್ರಾರಂಭಗೊಳ್ಳುತ್ತದೆ ಎಂದ ಅವರು ಕೃಷಿ ವಿಜ್ಞಾನ ಮಹಾ ವಿದ್ಯಾಲಯಕ್ಕೆ ಮಂಜೂರಾತಿ ದೊರಕಿದ್ದು, ಮಹಾ ವಿದ್ಯಾಲಯಕ್ಕೆ ಬೇಕಾದ ಅಂದಾಜು 400. ಕೋಟಿ ಅನುದಾನ ಹಂತ ಹಂತವಾಗಿ ಬಿಡುಗಡೆಯಾಗಲಿದೆ ಎಂದರು. ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ರಸ್ತೆ ಸುಧಾರಣೆಗಾಗಿ ಲೋಕೋಪಯೋಗಿ ಇಲಾಖೆಯಿಂದ ವಿವಿಧ ರಸ್ತೆ ಕಾಮಗಾರಿಗಳಿಗಾಗಿ 57 ಕೋಟಿ ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಅನುದಾನದಲ್ಲಿ ಅಥಣಿ ಯಲ್ಲಮ್ಮವಾಡಿ ರಸ್ತೆಗೆ 30 ಕೋಟಿ, ಅಥಣಿ ಸತ್ತಿ ರಸ್ತೆ ಅಭಿವೃದ್ಧಿಗಾಗಿ 6 ಕೋಟಿ, ಶಿರಹಟ್ಟಿ ನಂದಗಾಂವ ರಸ್ತೆ ಅಭಿವೃದ್ಧಿಗಾಗಿ 5 ಕೋಟಿ, ಅಥಣಿ ಪಟ್ಟಣದ ಗಣಪತಿ ದೇವಸ್ಥಾನದಿಂದ ನಿಯೋಜಿತ ಕೇಂದ್ರೀಯ ವಿದ್ಯಾಲಯದ ವರೆಗಿನ ರಸ್ತೆ ಅಭಿವೃದ್ಧಿಗೆ 9 ಕೋಟಿ, ಅಥಣಿ ಜನವಾಡ ರಸ್ತೆ ಸುಧಾರಣೆಗೆ 2 ಕೋಟಿ, ಮಹಿಷವಾಡಗಿ ನದಿ ರಸ್ತೆ ಅಭಿವೃದ್ಧಿಗೆ 1 ಕೋಟಿ, ಸವದಿ ದರ್ಗಾ 2 ಕೋಟಿ, ಬಡಚಿ ಬುರ್ಲಟ್ಟಿ ರಸ್ತೆ ಅಭಿವೃದ್ಧಿಗೆ 1 ಕೋಟಿ ರಸ್ತೆ ಸುಧಾರಣೆಯ ಕಾಮಗಾರಿಗಳು ಕೆಲವೇ ದಿನಗಳಲ್ಲಿಯೇ ಪ್ರಾರಂಭಗೊಳ್ಳುತ್ತವೆ ಎಂದರು.
ಈ ಸಂದರ್ಭದಲ್ಲಿ ಧುರೀಣರಾದ ಶಾಮರಾವ ಪೂಜಾರಿ, ವಿಶಾಲ್ ದೇಸಾಯಿ, ಅನಿಲ್ ಮುಳಿಕ್, ಅಪ್ಪು ನಾಯಕ್, ಅರ್ಜುನ್ ಪೂಜಾರಿ, ಮಾದೇವ ಚೌಹಾನ್, ಮಹಾವೀರ್ ಹಳ್ಕಿ, ಮಹಾವೀರ್ ವೀರಗೋಡ್, ಮೈಬೂಬ್ ಮೋಮಿನ, ಸತೀಶ್ ದೊಡ್ಡಮನಿ, ಪ್ರಶಾಂತ್ ಕಾಂಬಳೆ, ಪ್ರವೀಣ್ ತುಬಚಿ, ಗುಳಪ್ಪ ಪೂಜಾರಿ, ಸುರೇಶ್ ಪೂಜಾರಿ, ದುಂಡಪ್ಪ ಬಳಲ್ದಾರ್, ಮಾನಸಿಂಗ್ ಮಗರ್, ಸುಭಾಷ್ ಸೊನಕರ್, ಪರಶುರಾಮ ಜಗದಾಳ, ಶೀತಲ್ ಪಾಟೀಲ್, ರಾಮನಗೌಡ ಪಾಟೀಲ, ಶ್ರೀಶೈಲ ನಾಯಿಕ ಗುತ್ತಿಗೆದಾರರಾದ ಮೈಬೂಬ ತರಡೆ, ಇಮಾಮಸಾಬ ಬಿರಾದಾರ, ನರಸಿಂಹ ಚಿಪ್ಪರಗಿ, ಲೋಕೋಪಯೋಗಿ ಇಲಾಖೆಯ ಜಯಾನಂದ ಹಿರೇಮಠ, ನೀರಾವರಿ ಇಲಾಖೆಯ ಪ್ರವೀಣ ಹುಣಸಿಕಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.