ಸೇನೆ ಸೇರಿದ ಭೀಮಕ್ಕಗೆ ಶಾಸಕ ದೇಸಾಯಿ ಸನ್ಮಾನ

ಧಾರವಾಡ 06: ಭಾರತೀಯ ಸೇನೆ ಸೇರಿದ ಉತ್ತರ ಕನರ್ಾಟಕದ ಹೆಮ್ಮೆಯ ಕುವರಿ ಹಾಗೂ ಧಾರವಾಡ ತಾಲೂಕಿನ ಮದಿಕೊಪ್ಪ ಗ್ರಾಮದ ಯುವತಿ ಭೀಮಕ್ಕ ಚವ್ಹಾಣ ಅವರಿಗೆ ಮಂಗಳವಾರ ಸ್ವಗ್ರಾಮದಲ್ಲಿ ಧಾರವಾಡ ಗ್ರಾಮೀಣ ಬಿಜೆಪಿ ಶಾಸಕ ಅಮೃತ ದೇಸಾಯಿ ಅವರು ಹೃದಯ ಸ್ಪಶರ್ಿ ಸನ್ಮಾನ ಮಾಡಿ ಗೌರವಿಸಿದರು.

ಮದಿಕೊಪ್ಪ ಗ್ರಾಮಸ್ಥರಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕರು ಹಾವೇರಿಯ ಯಾಲಕ್ಕಿ ಮಾಲೆ, ರೇಷ್ಮೆ ಶಾಲು ಹೊದಿಸಿ, ಕತ್ತಿ ನೀಡಿ ಗೌರವಿಸಿ ಹೃದಯ ತುಂಬಿ ಅಭಿನಂದನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕ ಅಮೃತ ದೇಸಾಯಿ ಅವರು ಕಿತ್ತೂರು ರಾಣಿ ಚೆನ್ನಮ್ಮನ ರೂಪದಲ್ಲಿ ಭೀಮಕ್ಕ ಚವ್ಹಾಣ ಮತ್ತೆ ಹುಟ್ಟಿ ಬಂದಿದ್ದಾಳೆ. ಕಡು ಬಡತನದಲ್ಲಿಯೂ ಸೇನೆ ಸೇರುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ. ದೇಶ ರಕ್ಷಣೆಗಾಗಿ ಗಡಿಯಲ್ಲಿ ಯುದ್ಧಕ್ಕಾಗಿ ಹೋಗುತ್ತಿದ್ದಾಳೆ. ಅವಳಿಗೆ ಒಳ್ಳೆಯದಾಗಲಿ.  ಉನ್ನತ ಹುದ್ದೆ ಏರಲಿ ಎಂದು ಶುಭ ಹಾರೈಸಿದರು.

 ತಂದೆ ಹಾಗೂ ತಾಯಿ ಸಂಪೂರ್ಣ ಬೆಂಬಲ ಪಡೆದು, ಕಷ್ಟ ಪಟ್ಟು ಓದಿ ಇಂದು ಸೇನೆ ಸೇರಿದ ಭೀಮಕ್ಕನನ್ನು ನಮ್ಮ ಯುವಪೀಳಿಗೆ ಆದರ್ಶವಾಗಿ ಸ್ವೀಕರಿಸಬೇಕು. ಚಟಕ್ಕೆ ಬಿದ್ದು ಹಾಳಾಗಬೇಡಿ, ಹಠಕ್ಕೆ ಬಿದ್ದು ಓದಿ ಸಾಧನೆ ಮಾಡಿ ಎಂದು ಕಿವಿ ಮಾತು ಹೇಳಿದರು.

ಅಲ್ಲದೆ. ಇದಕ್ಕೂ ಮುನ್ನ ಅವರ ಮನೆಗೆ ಭೇಟಿ ಕೊಟ್ಟು ಬಂದಿದ್ದೇನೆ. ಅವರ ಮನೆ ನೋಡಿ ಕೆಟ್ಟ ಅನುಭವವಾಗಿದೆ. ನೀವು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು, ಪಿಡಿಓ ಸೇರಿ ಅವರಿಗೆ ಮೊದಲ ಪಟ್ಟಿಯಲ್ಲಿಯೇ ಮನೆ ಹಾಕಿಕೊಡಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕಿ ಸೀಮಾ ಮಸೂತಿ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರೇಮಾ ಕೊಮಾರದೇಸಾಯಿ, ನಾಗಪ್ಪ ಗಾಣಿಗೇರ, ಗ್ರಾಮದ ಹಿರಿಯರಾದ  ಫಕ್ಕಿರಪ್ಪ ಜಾಧವ್,  ಶಿವಾಜಿ ಜಾಧವ,  ನಾಗಪ್ಪ ಜಾಧವ್,  ಯಲ್ಲಪ್ಪ ಬಾಗೋಡಿ, ಮಹೇಶ ಯಲಿಗಾರ, ಮಾಮತಾಜ ಅಂಕಲಗಿ, ನಾರಾಯಣ ಹುಡೇದ ಹಾಗೂ ವಿಜಯ ಬೋಸ್ಲೆ ಉಪಸ್ಥಿತರಿದ್ದರು.