ದೇವಸ್ಥಾನದ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸುವುದಾಗಿ ಶಾಸಕ ಬಸವರಾಜ ಶಿವಣ್ಣನ
ಬ್ಯಾಡಗಿ 20: ಕ್ಷೇತ್ರದಲ್ಲಿಯ ದೇವಸ್ಥಾನದ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಅವರು ತಾಲೂಕಿನ ದಾಸನಕೊಪ್ಪ ಗ್ರಾಮದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿತಿ ಕೇಂದ್ರವು ಕಟ್ಟುತ್ತಿರುವ ಶ್ರೀ ಆಂಜನೇಯ ದೇವಸ್ಥಾನದ ಕಟ್ಟಡದ ಭೂಮಿ ಪೂಜೆಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಉತ್ತಮ ಮಾದರಿಯಲ್ಲಿ ಎಲ್ಲ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲು ಸಂಕಲ್ಪ ಮಾಡಿಕೊಳ್ಳಲಾಗಿದೆ.
ಈ ದೇವಸ್ಥಾನದ ಭೂಮಿ ಪೂಜೆ ಸಮಾರಂಭವನ್ನು ಅತ್ಯಂತ ಭಕ್ತಿಯಿಂದ ಮಾಡಲಾಗಿದೆ. ಈ ವಾತವರಣವುಸಮೃದ್ಧಿ, ಶಾಂತಿ ಮತ್ತು ಆಧ್ಯಾತ್ಮಿಕ ಸಾಮರಸ್ಯವನ್ನು ಖಚಿತಪಡಿಸುತ್ತದೆ. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ ಎಂದರು.ದೇವಸ್ಥಾನದ ಕಟ್ಟಡವು ಪೂರ್ಣಗೊಂಡ ನಂತರ, ದೇವಾಲಯವು ಭಕ್ತಿ ಮತ್ತು ಆಧ್ಯಾತ್ಮಿಕ ಕಲಿಕೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.ಭಕ್ತರಲ್ಲಿ ಏಕತೆಯ ಭಾವವನ್ನು ಬೆಳೆಸುತ್ತದೆ.
ಇದು ನಿಯಮಿತ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮುದಾಯ ಸೇವೆಗಳನ್ನು ಆಯೋಜಿಸುತ್ತದೆ, ಇದು ಆಧ್ಯಾತ್ಮಿಕ ಸ್ಫೂರ್ತಿಯ ದಾರೀದೀಪವಾಗಲಿದೆ ಎಂದರು.ಈ ಸಂದರ್ಭದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಬೀರಣ್ಣ ಬಣಕಾರ, ಆಯುಕ್ತ ಡಿ.ರವಿ, ಜಗನ್ನಾಥ, ಮಾರುತಿ ಅಚ್ಚಿಗೇರಿ, ಸುರೇಶಗೌಡ ಪಾಟೀಲ, ಸುಭಾಸ ಮಣ್ಣಪ್ಪನವರ, ಬಸನಗೌಡ ಲಿಂಗನಗೌಡ್ರ, ಮಂಜುನಾಥ ತಳವಾರ, ಶಿವನಗೌಡ ಪಾಟೀಲ, ಪುಟ್ಟಪ್ಪ ಬಣಕಾರ, ಮಲ್ಲನಗೌಡ ಪಾಟೀಲ, ಶೇಖರಗೌಡ ಹೊಸ ಗೌಡ್ರ, ಲಕ್ಷ್ಮಣ್ ಹಾವೇರಿ, ರವಿ ಬ್ಯಾಡಗಿ, ನಾಗನಗೌಡ ಪಾಟೀಲ ಹಾಗೂ ನಿರ್ಮಿತಿ ಕೇಂದ್ರದ ಇಂಜೀನೀಯರ ಶಾಂತಕುಮಾರ ಇದ್ದರು.