ರಸ್ತೆ ಡಾಂಬರಿಕರಣ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

MLA Ashok Managuli launches road asphalting work

ರಸ್ತೆ ಡಾಂಬರಿಕರಣ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ  

ಸಿಂದಗಿ 27: ಕೈಗಾರಿಕಾ ವಲಯದ ಉದ್ಯಮದಾರರ ಬಹುದಿನಗಳ ಬೇಡಿಕೆಗಳಲ್ಲೊಂದಾದ ರಸ್ತೆ ಅಭಿವೃದ್ಧಿಗೆ ಪ್ರಥಮ ಹೆಜ್ಜೆ ಇಡಲಾಗಿದೆ ಇನ್ನೂ ಹಲವಾರು ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡುವುದಾಗಿ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು. 

        ನಗರದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ನಗರದ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಹಾಗೂ 2.5 ಕಿಲೋಮೀಟರ್ ರಸ್ತೆ ಡಾಂಬರಿಕರಣ ಕಾಮಗಾರಿಗೆ 2 ಕೋಟಿ 17 ಲಕ್ಷದ ಮೊತ್ತದ ಕಾಮಗಾರಿಗೆ  ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅನೇಕ ಇಲಾಖೆಗಳ ಸಚಿವರಿಗೆ ಮನವಿ ಮಾಡಿಕೊಂಡಿದ್ದರ ಫಲವಾಗಿ ಕೆಲವೊಂದು ಕಾಮಗಾರಿಗಳಿಗೆ ಅನುಧಾನ ಮಂಜೂರಾತಿ ದೊರೆತ್ತಿದ್ದರು ಇನ್ನೂ ಹಂತ ಹಂತವಾಗಿ ಕಾಮಗಾರಿ ಕೈಕೊಳ್ಳಲಾಗುವುದು ಎಂದರು. 

       ಸಣ್ಣ ಕೈಗಾರಿಕಾ ಇಲಾಖೆಯ ಸಹಕಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಶ ಕಿತ್ತೂರ ಗುತ್ತಿಗೆದಾರ ಅಲಂಕಾರ, ಉದ್ಯಮಿದಾರಾದ ಗುರುಗೌಡ ಬಿರಾದಾರ, ತಮ್ಮಣ್ಣ ಇಳಗೇರ, ರವಿ ಗೋಲಾ, ಬಸವರಾಜ ಅಂಬಲಗಿ, ಸಂತೋಷ ಹರನಾಳ, ಶರಣು ಉಪ್ಪಿನ, ಶರಣು ಸಿಂದೇ, ರಫೀಕ್ ವಡಗೇರಿ, ಮೈಬುಬ ಹಸರಗುಂಡಗಿ, ಮನಸೂರ ಪಟೇಲ, ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.