27 ಹಾಗೂ 28 ನೇ ವಾರ್ಡಗಳ ಸರ್ವೆ ನಡೆಸಿದ ಶಾಸಕ ಅನಿಲ ಬೆನಕೆ

ಬೆಳಗಾವಿ 27: ದಿ.27ರಂದು ಶಾಸಕ ಅನಿಲ ಬೆನಕೆರವರು ಪ್ರತಿದಿನ ಬೆಳಗಾವಿ ನಗರದ ವಾರ್ಡ ವಾಚ್ ಮಾಡಲಾಗುತ್ತಿದ್ದು ಪ್ರಯುಕ್ತ ಇಂದು 27 ಹಾಗೂ 28 ನೆ ವಾರ್ಡಗಳಲ್ಲಿನ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಸ್ಥಳದಲ್ಲಿಯೆ ಸಮಸ್ಯೆಗಳನ್ನು ಬಗೆಹರಿಸಿದರು. ಈ ಸಂದರ್ಭದಲ್ಲಿ ಸ್ಥಳಗಳ ಪರಿಶಿಲಿಸಿ ಮಾತನಾಡಿದ ಅವರು ಕೆಲವು ಪ್ರದೇಶಗಳಲ್ಲಿ ಬೋರವೆಲ್ಗಳ ಸಮಸ್ಯೆಗಳಿದ್ದು ಅವುಗಳನ್ನು ರಿಪೇರಿ ಮಾಡಿಸಿ ನೀರಿನ ಅನುಕೂಲಮಾಡಿಕೊಡುವಂತೆ ಸ್ಥಳದಲ್ಲಿಯೇ ಜಲ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ವಾರ್ಡಗಳಲ್ಲಿನ ರಸ್ತೆ ಹಾಗೂ ಗಟಾರು ಕಾಮಗಾರಿಗಳನ್ನು ವಿಕ್ಷಿಸಿದ ಅವರು ಪೂರ್ಣಗೊಂಡಿಲ್ಲದ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಮಹಾನಗರ ಪಾಲಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು ಹಾಗೆಯೇ ಹೊಸದಾಗಿ ರಸ್ತೆ ಹಾಗೂ ಗಟಾರು ನಿಮರ್ಾಣ ಮಾಡಲು ಸೂಕ್ತ ಕ್ರಮ ತೆಗೆದುಕೊಂಡು ಹೊಸ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ತಿಳಿಸಿದರು. ವಾರ್ಡಗಳಲ್ಲಿ ಹೆಚ್ಚಾಗಿ ನೀರು ಹಾಗೂ ಗಟಾರು ಸಮಸ್ಯೆಗಳಿದ್ದು ಪ್ರತಿದಿನ ಸ್ವಚ್ಚಗೊಳಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು, ದೌಲತ್ ಸಾಳುಂಕೆ, ರಾಜು ಬಾತ್ಕಂಡೆ, ವಿವೇಕ ಪಾಟೀಲ, ರಾಹುಲ ಮುಚ್ಚಂಡಿ, ವಿಪುಲ ಜಾಧವ, ನಾಗೇಶ ಲಂಗರಖಂಡೆ, ಬಾಹುಬಲಿ ದೊಡ್ಡಣ್ಣವರ ಜೊತೆಗೆ ಆಯಾ ಭಾಗದ ರಹವಾಸಿಗಳು 

ಉಪಸ್ಥಿತರಿದ್ದರು.