ರಸ್ತೆ, ಸೇತುವೆ ನಿಮರ್ಾಣ ಕಾಮಗಾರಿಗೆ ಎಂ.ಸಿ.ಮನಗೂಳಿ ಚಾಲನೆ

ಲೋಕದರ್ಶನ ವರದಿ

ಸಿಂದಗಿ 30:ಗ್ರಾಮಗಳ ಸಂಪರ್ಕ ರಸ್ತೆಗಳು ಅಭಿವೃದ್ಧಿಯಾದಲ್ಲಿ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಆದ್ದರಿಂದ ಗ್ರಾಮಗೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಹೇಳಿದರು.

ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಉಪವಿಭಾಗ ಸಿಂದಗಿ ಅವರು ಹಮ್ಮಿಕೊಂಡ ಡಂಬಳ-ಗುಬ್ಬೇವಾಡ ರಸ್ತೆ 8.60 ಕಿ.ಮೀ.ರಲ್ಲಿ ಸೇತುವೆ ನಿಮರ್ಾಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿ ಅವರು ಮಾತನಾಡಿದರು.

1994ರಲ್ಲಿ ನಾನು ಅಧಿಖಾರದಲ್ಲಿದ್ದಾಗ ಗುಬ್ಬೇವಾಡ ಗ್ರಾಮದಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಗ್ರಾಮದಲ್ಲಿ ಬಿಸಿಎಂ ವಸತಿ ನಿಲಯ ಪ್ರಾರಮಭಿಸುವ ಜೊತೆಗೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈಗ ಮತ್ತೆ ನೀವು ನನಗೆ ಅಧಿಕಾರ ನೀಡಿದ್ದಿರಿ. ಪುನಃ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ತಾಲೂಕಿನ ಡಂಬಳ-ಗುಬ್ಬೇವಾಡದಿಂದ ಬಾರಖೇಡ ಬೀಳಗಿ ರಾಜ್ಯ ಹೆದ್ದಾರಿ 124ಕ್ಕೆ ಕೂಡುವ ರಸ್ತೆ ಮಧ್ಯದಲ್ಲಿ ಸೇತುವೆ ನಿಮರ್ಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕರಿಸಿ ಎಂದು ಹೇಳಿದರು.

ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಉಪವಿಭಾಗ ಎಇಇ ಎಂ.ಎಸ್.ನಿಡೊಣಿ ಅವರು ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಸಂಪರ್ಕ ರಸ್ತೆಗಳ ಅಭಿವೃದ್ಧಿ ಅತ್ಯವಶ್ಯಕವಾಗಿದೆ. ಆದ್ದರಿಂದ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಅವರು ಹೆಚ್ಚಿನ ಜವಾಬ್ದಾರಿ ಮತ್ತು ಆಸಕ್ತಿ ತೊರಿಸಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಿದ್ದಾರೆ. ಇಲಾಖೆಯಿಂದ ಗುಣಮಟ್ಟದ ರಸ್ತೆ ಮತ್ತು ಸೇತುವೆ ನಿಮರ್ಾಣಮಾಡಿಕೊಡಲಾಗುವುದು ಎಂದರು.

ಗುತ್ತಿಗೇದಾರ ಬಿ.ಎಸ್.ಚಿಕ್ಕರೆಡ್ಡಿ ಅವರು ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಕಾಮಗಾರಿ ನಿಗದಿತ ಸಮಯದಲ್ಲಿ ಮತ್ತು ಗುಣಮಟ್ಟದಲ್ಲಿ ಪೂರ್ಣಗೊಳಿಸಲು ಸಹಕಾರ ನೀಡಬೇಕು ಎಂದರು. ಅಭಿಯಂತರರಾದ ತುಂಬಗಿ, ನಾರಾಯಾಣ, ಗ್ರಾಪಂ ಅಧ್ಯಕ್ಷ ಸುಭಾಸ ಜಾಲವಾದಿ, ಗ್ರಾಮಸ್ಥರಾದ ದೇವೆಂದ್ರ ಬಡಿಗೇರ, ಮಲ್ಲಪ್ಪ ಮಳ್ಳಿ, ಆದಯ್ಯ ಮಠ, ರಮೇಶ ಈಜೇರಿ, ಸಿದ್ದಲಿಂಗ ಗುಂಡಾಪೂರ, ಈರಣ್ಣ ಹುಬ್ಬಳ್ಳಿ, ಮಲ್ಲಪ್ಪಣ್ಣ ಮಳ್ಳಿ, ತಿಮ್ಮನಗೌಡ ಬಿರಾದಾರ, ಸಂಗಮೇಶ ಮೇಲಿನಮನಿ, ಸದ್ದಾಂಪಟೇಲ ಬಿರಾದಾರ ಸೇರಿದಂತೆ ಇತರರು ಇದ್ದರು.