ಲೋಕದರ್ಶನ ವರದಿ
ವಿಜಯಪುರ25 : ರೈತರ ದಿನಾಚರಣೆಯ ಸುಸಂದರ್ಭದಲ್ಲಿ ಮಾನ್ಯ ಮಾಜಿ ಸಚಿವರಾದ ಎಂ.ಬಿ. ಪಾಟೀಲರವರಿಗೆ ಸಮ್ಮಿಶ್ರ ಸಕರ್ಾರದಲ್ಲಿ ಪುನಃ ಸಚಿವ ಸ್ಥಾನ ಸಿಕ್ಕಿರುವು ಸಂತಸದ ಕ್ಷಣವಾಗಿದೆ ಎಂದು ಮಹಿಳಾ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷೆಯಾದ ಮಹಾದೇವಿ ಅ. ಗೋಕಾಕ ಹರ್ಷವ್ಯಕ್ತಪಡಿಸಿದರು.
ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯ ಎದುರು ಜಿಲ್ಲಾ ಮಹಿಳಾ ಕಾಂಗ್ರಸ್ ಘಟಕದ ವತಿಯಿಂದ ಎಂ.ಬಿ. ಪಾಟೀಲ ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದರಿಂದ ಖುಷಿಯಿಂದ ಗುಲಾಲ್ ಹಾಗೂ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸುವ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಬರದ ನಾಡು ಹಣೆಪಟ್ಟೆ ಕಟ್ಟಿಕೊಂಡಿರುವ ಜಿಲ್ಲೆಗೆ ನೀರನ್ನು ಹರಿಸುವು ಮುಖಾಂತರ ರೈತರ ಮುಖದಲ್ಲಿ ಮಂದಹಾಸ ಮೂಡಿಸುವುದೆ. ಆದ್ದರಿಂದ ಸದ್ಯವು ಸಹ ಅವರಿಗೆ ಜಲ ಸಂಪನ್ಮೂಲ ಖಾತೆ ನೀಡಿದರೆ ನಮ್ಮ ಜಿಲ್ಲಾ ಘಟಕಕ್ಕೆ ಅತೀವ ಸಂತೋಷವಾಗುತ್ತದೆ ಎಂದರು. ಹಾಗೂ ಜಲಸಂಪನ್ಮೂಲ ಖಾತೆ ನಿಡಬೇಕೆಂದು ಆಗ್ರಹಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುಜಾತ ಕಳ್ಳಿಮನಿ, ಜಯಶ್ರಿ ಭಾರತಿ, ಗಂಗುಬಾಯಿ ಧುಮಾಳೆ, ರಾಜೇಶ್ರೀ ಶಿವಣಗಿ, ಸವಿತಾ, ಭಾರತಿ ದೊಡ್ಡಮನಿ, ಆಶಾ ಕಟ್ಟಿಮನಿ, ಲಕ್ಷ್ಮೀ ದೇಸಾಯಿ, ಶ್ರೀದೇವಿ ಉತ್ಲಾಸರ, ಅಶ್ವಿನಿ, ಅಣ್ಣಪೂರ್ಣ ಬೀಳಗಿಕರ, ಭಾರತಿ ನಾವಿ, ರುಕ್ಮುಣಿ ರಾಠೋಡ ಮುಂತಾದವರು ಇದ್ದರು.