ಎಂ.ಬಿ.ಪಾಟೀಲರು ನಡೆ-ನುಡಿಗಳಲ್ಲಿ ಸರಳತೆ, ವಿನಮ್ರತೆ, ಸತ್ಯ ಮತ್ತು ಪ್ರಾಮಾಣಿಕತೆ ಧರ್ಮವಂತರಾಗಿದ್ದರು : ಹುಕ್ಕೇರಿ ಶ್ರೀಗಳು
M.B. Patil was a man of simplicity, humility, truth and honesty in his actions and words: Mr. Hukke
ಹಾರೂಗೇರಿ 31: ಮಲಗೌಡ ಪಾಟೀಲರು ಧರ್ಮವಂತರಾಗಿದ್ದರು. ನಡೆ-ನುಡಿಗಳಲ್ಲಿ ಸರಳತೆ, ವಿನಮ್ರತೆ, ಸತ್ಯ ಮತ್ತು ಪ್ರಾಮಾಣಿಕತೆ ಅವರ ಬದುಕಿನುದ್ದಕ್ಕೂ ಹಾಸುಹೊಕ್ಕಾಗಿದ್ದವು ಎಂದು ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಪಾಟೀಲ ತೋಟದಲ್ಲಿ ಶುಕ್ರವಾರ ಲಿಂಗೈಕ್ಯರಾದ ಮಲಗೌಡ ಪಾಟೀಲ ಅವರ ತೋಟದ ಮನೆಗೆ ತೆರಳಿ ಸಂತಾಪ ಸೂಚಿಸಿ, ಅವರ ಅಗಲಿಕೆ ಶೈಕ್ಷಣಿಕ, ಸಹಕಾರ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಎಂ.ಬಿ.ಪಾಟೀಲರಲ್ಲಿದ್ದ ಸದ್ಗುಣಗಳು ಆದರ್ಶ ಸಮಾಜಕ್ಕೆ ಮಾದರಿಯಾಗಿವೆ ಎಂದರು.
ಪಂಚಮಸಾಲಿ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ ಬಡವರು, ಧರ್ಮಾರ್ಥ ಸತ್ಕಾರ್ಯಗಳಿಗೆ ನೀಡುತ್ತಿದ್ದ ದವಸ, ಧಾನ್ಯ, ತರಕಾರಿ, ಹಣ ಮೊದಲಾದವು ಶಿವನಿಗೆ ಅರ್ಿತ ಎಂದೇ ನೀಡುತ್ತಿದ್ದರು. ಹಂಚಿ ತಿನ್ನುವ ಗುಣ ಅವರದ್ದಾಗಿತ್ತೆಂದು ಹೇಳಿದರು.
ಮಾಜಿ ಸಂಸದ ಅಮರಸಿಂಹ ಪಾಟೀಲ, ಗೀರೀಶ ದರೂರ, ಡಾ.ಸಿ.ಬಿ.ಕುಲಿಗೋಡ, ಡಿ.ಎಸ್.ನಾಯಿಕ, ರಾಜಶೇಖರ ಪಾಟೀಲ, ಬಸನಗೌಡ ಆಸಂಗಿ, ಅಪ್ಪಾಸಾಬ ಕುಲಕರ್ಣಿ, ಶಿವಗೊಂಡ ಧರ್ಮಟ್ಟಿ, ಸುರೇಶ ಅರಕೇರಿ, ವಿಠ್ಠಲರಾವ ಬಂತಿ, ಡಾ.ಎಲ್.ಎಸ್.ಜಂಬಗಿ, ಬಾಬು ಪರಮಗೌಡರ, ಸಿದ್ದು ಗವಣ್ಣವರ, ಡಾ.ರವಿ ಇಂಚಲಕರಂಜಿ, ಡಾ.ಯಲ್ಲಾಲಿಂಗ ಸನ್ನಸನ್ನಿ, ದೊಡ್ಡಕ್ಕ ಪಾಟೀಲ, ಈರನಗೌಡ ಪಾಟೀಲ, ಡಾ.ಸೋಮನಗೌಡ ಪಾಟೀಲ, ರವೀಂದ್ರಗೌಡ ಪಾಟೀಲ ಮತ್ತೀತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 