ಎಂ. ಸ್ಯಾಂಡ್ ನಿಂದ ಗ್ರಾಮದಲ್ಲಿ ರೋಗ ರುಜಿನಗಳು : ತೆರವುಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

M. Disease outbreaks in the village due to sand: Request to the Chief Minister to clear it

ಎಂ. ಸ್ಯಾಂಡ್ ನಿಂದ ಗ್ರಾಮದಲ್ಲಿ ರೋಗ ರುಜಿನಗಳು : ತೆರವುಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ 

ಯರಗಟ್ಟಿ 19 : ಎಂ-ಸ್ಯಾಂಡ್(ಉತ್ಪಾದಿತ ಮರಳು) ಉದ್ಯಮದ ಕೆಲ ಅವೈಜ್ಞಾನಿಕ ಪ್ರಕ್ರಿಯೆಗಳು ಜಿಲ್ಲೆಯ ಹಲವು ಕಡೆ ಫಲವತ್ತಾದ ಜಮೀನು ಹಾಳು ಮಾಡುತ್ತಿವೆಯಲ್ಲದೆ, ವಿಪರೀತ ನೀರು ಬಳಕೆಯಿಂದ ಅಂತರ್ಜಲ ಬರಿದು ಮಾಡುತ್ತಿದೆ.ಕಲ್ಲನ್ನು ಪುಡಿ ಮಾಡಿ ತಯಾರಿಸುವ ಎಂ-ಸ್ಯಾಂಡ್‌ಗೆ ಮರಳಿನ ರೂಪ ನೀಡಲು ನೀರಿನಿಂದ ತೊಳೆಯಬೇಕು. ಆದರೆ, ಈ ಪ್ರಕ್ರಿಯೆ ಬಹುತೇಕ ಕಡೆ ವೈಜ್ಞಾನಿಕ ಮತ್ತು ಕಾನೂನಾತ್ಮಕವಾಗಿ ನಡೆಯುತ್ತಿಲ್ಲ.ಹೀಗಾಗಿ ವಿಪರೀತ ಅಂತರ್ಜಲದ ಬಳಕೆ ಮಾಡಲಾಗುತ್ತಿದೆ. ಇದರಿಂದ ಕೃಷಿ ಭೂಮಿ ಹಾಳಾಗುತ್ತಿದೆ. ಕೆಲವು ಕಡೆ ನೀರೆತ್ತಲು ವಿದ್ಯುತ್ ಕಳ್ಳತನ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.ಯರಗಣವಿ ಗ್ರಾಮದ ಸುತ್ತಲೂ 10ಕ್ಕೂ ಅಧಿಕ ಎಂ-ಸ್ಯಾಂಡ್ ಘಟಕಗಳಿವೆ. ಇವುಗಳ ಪೈಕಿ ಹಲವು ಕಡೆ ವೈಜ್ಞಾನಿಕವಾಗಿ ಎಂ-ಸ್ಯಾಂಡ್ ತೊಳೆಯುವ ವ್ಯವಸ್ಥೆಯೇ ಇಲ್ಲ. ಹೀಗಾಗಿ ಮರಳು ಮಾರಾಟಗಾರರು ಎಂ-ಸ್ಯಾಂಡ್ ಘಟಕಗಳಿಂದ ಕಚ್ಚಾ ಎಂ- ಸ್ಯಾಂಡ್ ಅನ್ನೆ? ಖರೀದಿಸಿ ಲಾರಿಯಲ್ಲಿ ತುಂಬಿಕೊಂಡು ಹೋಗುತ್ತಾರೆ. ನೀರು ಇರುವ ಜಾಗಕ್ಕೆ ಒಯ್ದು ಅಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ತೊಳೆದು ಮಾರಾಟ ಮಾಡುತ್ತಿದ್ದಾರೆ.ಆದರೆ ಗ್ರಾಮದ ಧೂಳಿನಿಂದ ಗ್ರಾಮಸ್ಥರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಕೃಷಿ ಭೂಮಿ ಫಲವತ್ತತೆ ಕಳೆದು ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಯರಗಣವಿ ಗ್ರಾಮದ ಎಂ. ಸ್ಯಾಂಡ್ ಬಂದ್ ಮಾಡುವಂತೆ ಗ್ರಾಮಸ್ಥರು ತಹಶೀಲ್ದಾರ ಎಂ.ವಿ. ಗುಂಡಪ್ಪನವರ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಪಾರ್ವತಿ ಗುನ್ನಿ ಲಕ್ಷ್ಮಣ ಪೂಜೇರ, ಅಶೋಕ ನಾಯ್ಕರ, ರಾಮಚಂದ್ರಗೌಡ ಪಾಟೀಲ, ಯಲ್ಲಪ್ಪ ಪೂಜಾರಿ, ಅಡಿವೆಪ್ಪಗೌಡ ಪಾಟೀಲ, ಸೋಮನಗೌಡ ಪಾಟೀಲ, ಮುತ್ತೆಪ್ಪ ಆನಿಗೋಳ, ನಾಗಪ್ಪ ಹರಿಜನ, ಮಹಾದೇವ ನಾಯ್ಕರ, ಪ್ರಕಾಶ ನಾಯ್ಕರ, ಮಲ್ಲಪ್ಪ ಆನಿಗೋಳ, ಮಂಜುನಾಥ ಸವದತ್ತಿ, ಸತ್ಯಪ್ಪ ಗುಂಡಪ್ಪನವರ, ಶಿವಾನಂದ ನಾಯ್ಕಪ್ಪಗೊಳ, ರವಿ ಪೂಜಾರಿ, ಸಾಬಣ್ಣ ನಾಯ್ಕರ ಗ್ರಾಮದ ಹಿರಿಯರಾದ ಮಲ್ಲನಗೌಡ ಪಾಟೀಲ, ಪರಮಾನಂದ ಹಲಗಲಿ, ರೈತ ಸಂಘ ಬೆಳಗಾವಿ ಜಿಲ್ಲಾಧ್ಯಕ್ಷ ಸೋಮು ರೈನಾಪೂರ ಸೇರಿದಂತೆ ಮುಂತಾದವರು ಇದ್ದರು.