ಲೋಕದರ್ಶನ ವರದಿ
ಶಿಗ್ಗಾವಿ 04ಃ ತಾಲೂಕಿನ ಬನ್ನಿಕೋಪ್ಪ ಗ್ರಾಮದ ಗದಿಗೇಶ್ವರ ವಿರಕ್ತಮಠದಲ್ಲಿ ಬನ್ನಿಕೋಪ್ಪ ಗ್ರಾಮಸ್ಥರು ಹಾಗೂ ಗ್ರಾಮದ ಮಹಿಳಾ ಸಂಘಗಳ ನೇತೃತ್ವದಲ್ಲಿ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ ಶಿವಕುಮಾರ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನಂತರ ಗ್ರಾಮದ ಮಹಿಳಾ ಸಂಘದಿಂದ ಹಾಗೂ ಗ್ರಾಮಸ್ಥರಿಂದ ಅನ್ನಸಂಪರ್ತಣೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ವೇದಮೂತರ್ಿ ಚನ್ನಬಸಯ್ಯ ಹಿರೇಮಠ ಸ್ವಾಮಿಜಿ, ಗ್ರಾಪಂ ಸದಸ್ಯ ಯಲ್ಲಪ್ಪ ಹುಕ್ಕೇರಿ, ತಾಲೂಕಾ ರೈತ ಸಂಘದ ಅಧ್ಯಕ್ಷ ಬಸಲಿಂಗಪ್ಪ ನರಗುಂದ, ಊರಿನ ಹಿರಿಯರಾದ ಈರಪ್ಪ ಮೇಟಿ, ನಿಂಗನಗೌಡ್ರ ಹೊಸಗೌಡ್ರ, ಜಗದೀಶ ಇಂದೂರ, ಬಸಪ್ಪ ಹಾದಿಮನಿ, ಮಲ್ಲೇಶಪ್ಪ ಕಡೆಮನಿ, ಅರ್ಜಪ್ಪ ಬಡ್ಡಿ, ಬಸವರಾಜ ಹೊಂಬರೆಡ್ಡಿ, ಹನಮಂಗೌಡ್ರ ಹೊಸಗೌಡ್ರ, ನಾಗಮ್ಮ ಕಾಮನಹಳ್ಳಿ, ಚನ್ನಮ್ಮ ಕೋಣನವರ ಸೇರಿದಂತೆ ಗ್ರಾಮಸ್ಥರು, ಮಹಿಳಾ ಸಂಘಗಳ ಪದಾಧಿಕಾರಿಗಳು, ಶಿಕ್ಷಕರು, ಶಾಲಾಮಕ್ಕಳು ಉಪಸ್ಥಿತರಿದ್ದರು.