ಲೋಕದರ್ಶನವರದಿ
ಶಿಗ್ಗಾವಿ08 : ಭಕ್ತಿ ಶ್ರದ್ಧೆ ಹಾಗೂ ಸೇವಾ ಮನೋಭಾವನೆಯಿಂದ ಮಾಡಿದ ಎಲ್ಲ ಕಾರ್ಯವು ಮನುಷ್ಯನನ್ನು ಯಶಸ್ಸಿನ ಮೆಟ್ಟಲಿಗೆ ತಂದು ನಿಲ್ಲಿಸುತ್ತದೆ ಪ್ರತಿಯೊಬ್ಬರು ಧರ್ಮದಲ್ಲಿ ಶ್ರದ್ಧೆ, ದೇವರಲ್ಲಿ ನಂಬಿಕೆ ಗುರು ಹಿರಿಯರಲ್ಲಿ ಗೌರವ ಹಾಗೂ ತಾವು ಮಾಡುವ ಕಾಯಕದಲ್ಲಿ ನಿಷ್ಠೆಯನ್ನಿರಿಸಿಕೊಂಡು ತಮ್ಮ ಬಾಳ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ಪ್ರಾ.ನಾಗರಾಜ ದ್ಯಾಮನಕೊಪ್ಪ ಹೇಳಿದರು
ಪಟ್ಟಣದ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಗಜಾನನೋತ್ಸವ 2019 ರ ವಿವಿಧ ಸಮಿತಿಗಳ ಅಭಿನಂದನಾ ಸಭೆಯ ಅಧ್ಯಕ್ಷತೆ ಭಾಗವಹಿಸಿದ್ದ ಅವರು ವಿವಿಧ ಸಮಿತಿಗಳ ಅಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಮಾನವೀಯತೆ ದೂರವಾಗುತ್ತಿದೆ.
ಇಂಥ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿದವರನ್ನು ಗೌರವಿಸುವ ಮೂಲಕ ಪರಸ್ಪರರಲ್ಲಿ ಪ್ರೀತಿ ವಿಶ್ವಾಸವನ್ನು ಮೂಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಚನ್ನಪ್ಪ ಕುನ್ನೂರ ಆಂಗ್ಲ ಮಾದ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಕಾಂತ ಯಲಿಯವರು ಧರ್ಮ ದೇವರುಗಳ ಪರಿಕಲ್ಪನೆಯಿಂದಾಗಿ ಮಾನವ ಸಂಬಂಧ ಇನ್ನೂ ಗಟ್ಟಿಯಾಗಿದೆ ಮುಂದಿನ ಪೀಳಿಗೆಯು ತಮ್ಮ ಉತ್ತಮ ಭವಿಷ್ಯಕ್ಕಾಗಿ ಧರ್ಮ ಮಾರ್ಗದಲ್ಲಿ ನಡೆಯುವ ಅವಶ್ಯಕತೆಯಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜಿ ಎಂ ಅರಗೋಳ ಮಾತನಾಡಿ ವಿಘ್ನ ವಿನಾಶಕನಾದ ಗಜಾನನ ಎಲ್ಲರಿಗೂ ಸನ್ಮಂಗಲವನ್ನುಂಟು ಮಾಡಲಿ ಎಂದು ಪ್ರಾಥರ್ಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಿ ಟಿ ಪಾಟೀಲ, ಕಿವುಡ ಮೂಕ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯ ಎಂ ಬಿ ನೀರಲಗಿ ಮಾತನಾಡಿದರು.
ಗಜಾನನೋತ್ಸವ-2019 ರ ವಿವಿಧ ಸಮಿತಿಗಳ ಅಧ್ಯಕ್ಷರಾದ ಪ್ರೊ. ಕೆ ಬಸಣ್ಣ, ಡಾ. ಕೆ ಎಸ್ ಬರದೆಲಿ, ಪ್ರೊ. ಕೆ ಸಿ ಹೂಗಾರ, ಶಿಕ್ಷಕ ಕೆ ಜಿ ಮಲ್ಲೂರ, ಆರ್ ವಿ ಹೆಬ್ಬಳ್ಳಿ, ಆರ್ ವಿ ಹಿರೇಗೌಡ್ರ, ಕೆ ಪಿ ಪಾಟೀಲ ಹಾಗೂ ಕಲ್ಪನಾ ಯಲವಿಗಿಯವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಮಂಜುಳಾ ಪಾಟೀಲ ಪ್ರಾರ್ಥನೆ ಮಾರುತಿ ಲಮಾಣಿ ಸ್ವಾಗತಿಸಿದರು, ಶಿಕ್ಷಕ ಜೆ ಎಂ ದೇವರಮನಿ ವಂದಿಸಿದರು ದೈಹಿಕ ಶಿಕ್ಷಕ ಎಂ ಎನ್ ಪ್ರಕಾಶ ಕಾರ್ಯಕ್ರಮ ನಿರೂಪಿಸಿದರು.